ಮೌಲ್ಯ ಸಹಿತ ಬದುಕೂ ಸಾಹಿತ್ಯ: ಮುದ್ದು ಮೂಡುಬೆಳ್ಳೆ
Team Udayavani, Dec 21, 2018, 2:15 AM IST
ಶಿರ್ವ: ಓದು-ಬರೆಹ- ಕಥೆ-ಕಾವ್ಯ ಮಾತ್ರ ಸಾಹಿತ್ಯವಲ್ಲ. ಮೌಲ್ಯ ಸಹಿತ ಬದುಕೂ ಸಾಹಿತ್ಯವಾಗಿದೆ. ಸ್ವತಂತ್ರವಾಗಿ ಬಾಳುವುದು ಸಾಹಿತ್ಯದ ಆಶಯವಾಗಿದೆ. ತುಳು ಸಂಸ್ಕೃತಿಯನ್ನು ನಾಡ ನುಡಿಯಾದ ಕನ್ನಡದ ಮೂಲಕ ಪ್ರಬಲವಾಗಿಯೇ ಪ್ರತಿಪಾದಿಸಿದ ಹೆಗ್ಗಳಿಗೆ ನಮ್ಮದಾಗಿದೆ. ತುಳು-ಕನ್ನಡ-ಕೊಂಕಣಿ ಭಾಷೆಗಳು ಪರಸ್ಪರ ಬೆಸೆದಿರುವ ತುಳುನಾಡಿನಲ್ಲಿ ಬಾಂಧವ್ಯಗಳೂ ಭದ್ರವಾಗಿ ಬೆಸೆದಿವೆ. ಕೆಲವು ಕಿಡಿಗೇಡಿಗಳು ಈ ಬಾಂಧವ್ಯವನ್ನು ಕೆಡಿಸುವ ಫಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದನ್ನೆಲ್ಲ ಮೀರಿ ನಾವೆಲ್ಲರೂ ಒಂದಾಗಿಯೇ ಇದ್ದೇವೆ ಎಂದು ಕಾಪು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಹೇಳಿದರು.
ಕನ್ನಡ ಪದವೀಧರರಿಗೆ ಯೋಗ್ಯ ಸ್ಥಾನಮಾನ ಅಗತ್ಯ
ಯುವ ತಲೆಮಾರನ್ನು ಸಾಹಿತ್ಯದ ಕಡೆಗೆ ಸೆಳೆಯುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳ, ಯುವಜನರ ಸಹಭಾಗಿತ್ವದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಗೋಷ್ಠಿ, ವಿಚಾರ ಸಂಕಿರಣಗಳು ನಡೆಯಬೇಕು. ಕನ್ನಡ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ ಮತ್ತು ಯೋಗ್ಯ ಸ್ಥಾನಮಾನ ಒದಗಿಸಲು ಸರಕಾರ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.
ಆಕಾಶವಾಣಿ ನೇರದರ್ಶನ!
ದಶಕಗಳ ಕಾಲ ಆಕಾಶವಾಣಿಯಲ್ಲಿ ‘ಆಕಾಶವಾಣಿ ಮಂಗಳೂರು, ನಾನು ಮುದ್ದು ಮೂಡುಬೆಳ್ಳೆ’ ಎಂದು ಹೇಳುವುದನ್ನು ಮಾತ್ರ ಕೇಳುತ್ತಲೇ ಬಂದಿದ್ದ ಸಾರ್ವಜನಿಕರು ಮೊದಲ ಬಾರಿಗೆ ಮುದ್ದು ಮೂಡುಬೆಳ್ಳೆಯವರನ್ನು ನೇರವಾಗಿ ನೋಡಿ ಅವರ ಕಂಠಸಿರಿ ಆನಂದಿಸಿದರು.
ಮಿಂಚಿದ ಮೂಡುಬೆಳ್ಳೆ
ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಮುದ್ದು ಮೂಡುಬೆಳ್ಳೆ, ಉದ್ಘಾಟಕ ಪ್ರೊ| ಬಿ.ಎಂ. ಹೆಗ್ಡೆ, ಖ್ಯಾತ ಚಿತ್ರ ಕಲಾವಿದರಾದ ಉಪಾಧ್ಯಾಯ ಮೂಡುಬೆಳ್ಳೆ, ಬೆಳ್ಳೆ ಪದ್ಮನಾಭ ನಾಯಕ್ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದು ಇವರೆಲ್ಲರೂ ಕಾಪು ತಾಲೂಕಿನ ಮೂಡುಬೆಳ್ಳೆಯವರೇ ಆಗಿದ್ದಾರೆ ಎಂದು ಗಣ್ಯರು ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.