“ಬದುಕಿನ ನಿವೃತ್ತಿಯ ವರೆಗೆ ಆಸಕ್ತಿಯನ್ನು ಕಾಪಾಡಿ’
Team Udayavani, Feb 24, 2017, 12:34 PM IST
ಕುಂದಾಪುರ: ಸೇವಾ ನಿವೃತ್ತಿಯು ವಯೋ ಸಹಜ, ಆದರೆ ಬದುಕಿನಿಂದ ನಿವೃತ್ತಿಯನ್ನು ಹೊಂದುವವರೆಗೆ ತಮ್ಮ ತಮ್ಮ ಆಸಕ್ತಿಯ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು ಜೀವನೋತ್ಸಾಹದ ರಹಸ್ಯ. ನಿವೃತ್ತರಾಗಿ ಸಂಸ್ಥೆಯನ್ನು ಬಿಟ್ಟು ದೂರ ಹೋದಾಗ ಅವರ ಸಹವರ್ತಿಗಳೊಂದಿಗೆ ಅಂಟಿದ ನಂಟು ಒಂದಷ್ಟು ಶಿಥಿಲಗೊಂಡರೂ ಮತ್ತೂಮ್ಮೆ ಸೇರಿದಾಗ ಆವರಿಸಿದ ಮಬ್ಬು ಜಾರಿ ಮತ್ತೆ ಮೊದಲಿನ ಭಾವ ಮತ್ತಷ್ಟು ಪ್ರಖರವಾಗುತ್ತದೆ ಎಂದು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ| ರಘುರಾಮ ರಾವ್ ಬೈಕಂಪಾಡಿ ಹೇಳಿದರು.
ಅವರು ಕುಂದಾಪುರದ ಹಂಗಳೂರಿನ ವೆಂಕಟಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ ಭಂಡಾರ್‌ಕಾರ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರ ಸಮಾವೇಶದಲ್ಲಿ ನೆನಪುಗಳನ್ನು ಮೆಲುಕು ಹಾಕುತ್ತಾ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೊ| ಕೇಶವ ಮಯ್ಯ, ಪ್ರೊ| ಬಾಲಕೃಷ್ಣ ಭಟ್ಟ, ಪ್ರೊ| ಟಿ.ಆರ್.ಮಂಜುನಾಥ, ಪ್ರೊ| ವಿ.ಎಲ್ ಉಪಾಧ್ಯ, ಪ್ರೊ| ಕೆ.ಸಿ ಶರ್ಮ, ಪ್ರೊ| ಚಿತ್ರಪಾಡಿ, ಪ್ರೊ| ಉಪೇಂದ್ರ ಸೋಮಯಾಜಿ, ಡಾ| ಎಚ್. ವಿ. ನರಸಿಂಹ ಮೂರ್ತಿ, ಪ್ರೊ| ಪಿ.ಆರ್. ಭಟ್ಟ್, ಪ್ರೊ| ನಾರಾಯಣ ರಾವ್ ಮೊದಲಾದವರು ತಮ್ಮ ತಮ್ಮ ಸೇವಾ ದಿನಗಳಲ್ಲಿಯ ಮಧುರ ಕ್ಷಣಗಳನ್ನು ನೆನಪಿಸಿಕೊಂಡರು. ಸಂಯೋಜಕ ಎ.ಪಿ. ಮಿತ್ತಂತಾಯ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.