ಕೆರಾಡಿ: ಶಿವಲಿಂಗ ಪತ್ತೆ
Team Udayavani, Mar 11, 2019, 1:00 AM IST
ಕುಂದಾಪುರ: ತಾಲೂಕಿನ ಕೆರಾಡಿ ಗ್ರಾಮದ ಮೂಡುಗಲ್ಲು ಎಂಬಲ್ಲಿರುವ ಗುಹೆಯ ಒಳಗೆ ರವಿವಾರ ಶಿವಾಲಯದಲ್ಲಿ ಮಣ್ಣಿನ ಅಡಿಯಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ.
ಕೆರಾಡಿಯಿಂದ ಸುಮಾರು 4 ಕಿ.ಮೀ. ಕಾಡುದಾರಿಯಲ್ಲಿ ಸಾಗಿದಾಗ, ಕದಂಬ ರಾಜರ ಕಾಲದಿಂದಲೂ ಎಳ್ಳಮಾವಾಸ್ಯೆ ಜಾತ್ರೆಆಚರಣೆಯ ಐತಿಹ್ಯದ ಕುರುಹು ಇರುವ ಈ ಕ್ಷೇತ್ರ ಶ್ರೀ ಕೇಶವನಾಥ ಗುಹಾಂತರ ದೇವಾಲಯ ಎಂದೇ ಪ್ರಸಿದ್ಧ. ಕದಂಬ ರಾಜನೊಬ್ಬ ಇಲ್ಲಿ ತಪಸ್ಸಾಚರಿಸಿದ ದಾಖಲೆ ಇದೆ. ಕ್ರಿ.ಶ. 1800ರಲ್ಲಿ ಇಂಗ್ಲೆಂಡಿನ ಲೇಖಕ ಕರ್ನಲ್ ಮೆಕೆೆಂಜೆ ತಾನು ಇಲ್ಲಿಗೆ ಬಂದಿರುವ ಬಗ್ಗೆ ಬರೆದಿದ್ದಾನಂತೆ. ಇದು ಅಗಸ್ತ್ಯ ಮುನಿಗಳಿಂದ ಪ್ರತಿಷ್ಠಾಪಿತಗೊಂಡ ಶಿವ ಸಾನಿಧ್ಯವೆಂದು ನಂಬಿಕೆ ಇದೆ.
ಗುಹೆಯ ಒಳಗೆ ಸುಮಾರು 70 ಅಡಿ ದೂರದಲ್ಲಿ ಶಿವಲಿಂಗವಿದೆ. ಈ ಗುಹೆಯಲ್ಲಿ ಸದಾಕಾಲ ಮೊಣಕಾಲಿನಷ್ಟು ನೀರು ನಿಂತಿರುತ್ತದೆ. ಈ ನೀರಲ್ಲಿ ಅಸಂಖ್ಯ ಮೀನುಗಳಿವೆ. ಹಾವುಗಳೂ ಇರುತ್ತವೆ ಅನ್ನುತ್ತಾರೆ ಅರ್ಚಕರು. ಈ ಮೀನುಗಳಿಗೆ ಮಂಡಕ್ಕಿ ಅಂದ್ರೆಇಷ್ಟವಂತೆ. ಸಾವಿರಾರು ಬಾವಲಿಗಳೂ ಈ ಗುಹೆಯಲ್ಲಿ ವಾಸವಾಗಿವೆ. ನೀರಿನಲ್ಲಿಯೇ ನಡೆದು ಪಾಣಿಪೀಠದಲ್ಲಿರುವ ಕೇಶವನಾಥನಿಗೆ ಪ್ರದಕ್ಷಿಣೆ ಬರಬೇಕು. ಇದರ ಪಕ್ಕದಲ್ಲೇ ತೀರ್ಥ ಬಾವಿಯೂ ಗೋಚರಿಸಿದೆ. ಕಳೆದ ವರ್ಷ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿಸಿದಂತೆ ಉದ್ಭವ ಲಿಂಗಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು. ರವಿವಾರ ಯುವಕ ಮಂಡಲದವರು ಶ್ರಮದಾನ ನಡೆಸುತ್ತಿದ್ದಾಗ 2 ಅಡಿ ಆಳದಲ್ಲಿ ಶಿವಲಿಂಗ ಕಾಣಿಸಿದೆ. ಉಳಿಕೆ ಉತVನನ ನಡೆಯಬೇಕಿದೆ. ಮಾ.12ರಿಂದ ಎರಡು ದಿನ ಅಷ್ಟಬಂಧ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ. ಅದಕ್ಕಾಗಿ ಪ್ರತ್ಯೇಕ ಪಾಣಿಪೀಠ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.