ಕೆರಾಡಿ: ಮಳೆಗಾಲದಲ್ಲಿ ಹದಗೆಟ್ಟ ರಸ್ತೆ ದುರಸ್ತಿ ಇನ್ನೂ ಆಗಿಲ್ಲ !
ಮುಂಗಾರಿಗೂ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಹದಗೆಡುವ ಸಂಭವ
Team Udayavani, May 14, 2019, 6:00 AM IST
ಕೆರಾಡಿ: ಕುಂದಾಪುರದಿಂದ ನೇರಳಕಟ್ಟೆ ಮೂಲಕವಾಗಿ ಕೆರಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಹಾಕಲಾಗಿದ್ದ ಡಾಮರು ಕಳೆದ ಮಳೆಗಾಲದಲ್ಲಿ ಕಿತ್ತು ಹೋಗಿದ್ದು, ಇನ್ನು ಇದರ ದುರಸ್ತಿ ಕಾರ್ಯ ನಡೆದಿಲ್ಲ. ಈ ಬಾರಿಯ ಮಳೆಗಾಲಕ್ಕೂ ಮುನ್ನ ಮರು ಡಾಮರೀಕರಣ ಆಗದಿದ್ದರೆ, ಈ ರಸ್ತೆ ಮತ್ತಷ್ಟು ಹದಗೆಡಲಿದೆ.
ಹಾಡಿಬಿರ್ಗಿ ಕ್ರಾಸ್‌ನಿಂದ ಕೆರಾಡಿಗೆ ಸುಮಾರು 366 ಮೀಟರ್ ಉದ್ದ ಹಾಗೂ 3.75 ಮೀಟರ್ ಅಗಲದ ಸಂಪರ್ಕ ರಸ್ತೆಗೆ ಕಳೆದ ವರ್ಷದ ಎಪ್ರಿಲ್ – ಮೇನಲ್ಲಿ ಡಾಮರೀಕರಣಗೊಂಡಿತ್ತು. ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಇದಕ್ಕೆ 10 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆದಿತ್ತು.
ಆದರೆ ಒಂದೇ ಮಳೆಗಾಲಕ್ಕೆ ಆ ರಸ್ತೆಯೆಲ್ಲ ಕಿತ್ತು ಹೋಗಿದೆ. ಈಗ ಕೆಲವೆಡೆ ಡಾಮರೇ ಕಾಣುತ್ತಿಲ್ಲ. ವಾಹನ ಸವಾರರಂತೂ ಈ ರಸ್ತೆಯಲ್ಲಿ ಸರ್ಕಸ್ ಮಾಡಿ ಸಂಚರಿಸಬೇಕಾದ ಸ್ಥಿತಿ ಇದೆ. ಅದರಲ್ಲೂ 50 ಮೀ. ರಸ್ತೆಗೆ ಡಾಮರು ಹಾಕಿದ ಜಾಗ ತುಂಬಾ ಜೇಡಿಮಣ್ಣಿನ ರಾಶಿಯಿದ್ದು, ಇಲ್ಲಿ ರಸ್ತೆಗೆ ಹಾಕಲಾದ ಡಾಮರೇ ಕಾಣಿಸುವುದಿಲ್ಲ. ಕಳೆದ ಮಳೆಗಾಲದಲ್ಲಿ ಇಲ್ಲಿನ ಜನ ಕೆರಾಡಿಯಂದ ಕುಂದಾಪುರ, ಆಜ್ರಿ, ನೇರಳಕಟ್ಟೆ, ಸಿದ್ದಾಪುರ ಕಡೆಗೆ ಸಂಚರಿಸಬೇಕಾದರೆ ಹರಸಾಹಸ ಪಡುವಂತಾಗಿತ್ತು.
ಸರಿಯಾದ ಚರಂಡಿಯಿಲ್ಲ
ಹಾಡಿಬಿರ್ಗಿ ಕ್ರಾಸ್ – ಕೆರಾಡಿ ರಸ್ತೆ ಕೇವಲ ಡಾಮರೀಕರಣಗೊಂಡ ಕೆಲವೇ ತಿಂಗಳಲ್ಲಿ ಹದಗೆಡಲು ಮುಖ್ಯ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿರಲಿಲ್ಲ. 2-3 ಕಡೆಗಳಲ್ಲಿ ಮೋರಿ ಅಗತ್ಯ ವಿದ್ದರೂ, ಅಲ್ಲಿ ಮೋರಿ ನಿರ್ಮಿಸಲು ಮುಂದಾಗಿಲ್ಲ.
ಧೂಳುಮಯ ರಸ್ತೆ
ಈಗ ಡಾಮರೆಲ್ಲ ಕಿತ್ತು ಹೋಗಿ, ಬರೀ ಮಣ್ಣಿನ ರಸ್ತೆಯಾಗಿ ಮಾರ್ಪಡಾಗಿದೆ. ಈಗ ಇಲ್ಲಿ ವಾಹನಗಳು ಸಂಚರಿಸುವಾಗ ಧೂಳುಮಯವಾಗಿದ್ದು, ಇದರಿಂದ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
25 ವರ್ಷಗಳ ಸಮಸ್ಯೆ
ಕೆರಾಡಿಯಿಂದ ಹಾಡಿಬರ್ಗಿವರೆಗೆ ಡಾಮರೀಕರಣಗೊಂಡ ರಸ್ತೆ ಕೇವಲ ಮೂರೇ ತಿಂಗಳಲ್ಲಿ ಡಾಮರು ಕಿತ್ತುಹೋಗಿದೆ. ಕಳೆದ ಮಳೆಗಾಲದಲ್ಲಿ ಹಾಳಾಗಿದ್ದರೂ ಇನ್ನೂ ಇದರ ದುರಸ್ತಿಗೆ ಮಾತ್ರ ಮುಂದಾಗಿಲ್ಲ. ಕಳೆದ 25 ವರ್ಷಗಳಿಂದಲೂ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಪ್ರತಿ ಸಲವೂ ಪಂಚಾಯತ್‌ನವರು ಒಂದಿಷ್ಟು ದುರಸ್ತಿ ಮಾಡುತ್ತಾರೆ. ಆದರೆ ಮಳೆಗಾಲದಲ್ಲಿ ಅದೆಲ್ಲ ಕೊಚ್ಚಿಕೊಂಡು ಹೋಗುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು, ಮರು ಡಾಮರೀಕರಣ ಮಾಡಲಿ.
-ರಾಘವೇಂದ್ರ, ಕೆರಾಡಿ
ದುರಸ್ತಿಗೆ ಪ್ರಯತ್ನ
ಸದ್ಯ ಯಾವುದೇ ಅನುದಾನ ಬಂದಿಲ್ಲ. ಯಾವುದಾದರೂ ಅನುದಾನ ಬಂದಲ್ಲಿ ಕೆರಾಡಿ ರಸ್ತೆಯ ದುರಸ್ತಿಗೆ ಬಳಸುವ ಬಗ್ಗೆ ಗಮನವಹಿಸಲಾಗುವುದು.
-ಶ್ರೀಧರ್ ಪಾಲೇಕರ್,
ಜ್ಯೂನಿಯರ್ ಎಂಜಿನಿಯರ್,
ಉಡುಪಿ ತಾ.ಪಂ.
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು
Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್ ಅಧ್ಯಕ್ಷ ಸಮ್ಮತಿ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.