ಚುನಾವಣೆಗೆ ಸಿದ್ಧನಾದ ಸಮೃದ್ಧಿಪುರದ ರಾಜ !


Team Udayavani, Apr 7, 2018, 7:00 AM IST

1.jpg

ಉಡುಪಿ: ಚುನಾವಣಾ ಆಯೋಗದ ನಿರ್ದೇಶನದಂತೆ ಉಡುಪಿ ಜಿ.ಪಂ. ಸಿಇಒ ಮತ್ತು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಶಿವಾನಂದ ಕಾಪಶಿ ಮತದಾನ ಹೆಚ್ಚಿಸಲು ಸದ್ದಿಲ್ಲದೆ ಕಾರ್ಯ ಪ್ರವೃತ್ತರಾಗಿದ್ದಾರೆ. 2013ರ ಚುನಾವಣೆಯಲ್ಲಿ ಶೇ. 76 ಮತದಾನ ಜಿಲ್ಲೆಯಲ್ಲಿ ಆಗಿತ್ತು. ಈ ವರ್ಷ ಶೇ. 10ರಷ್ಟರನ್ನಾದರೂ ಏರಿಸಬೇಕು ಎಂಬ ಗುರಿ ಹೊಂದಿದ್ದಾರೆ. ಈ ನಿಟ್ಟಿನ ಕ್ರಮಗಳ ಬಗ್ಗೆ “ಉದಯವಾಣಿ’ ಜತೆ ಹಂಚಿಕೊಂಡಿದ್ದಾರೆ.

ಸಮೃದ್ಧಿಪುರದ ರಾಜ ವಿಜಯಶೇಖರನಿಗೆ ಮಕ್ಕಳಿಲ್ಲದೆ ರಾಜ್ಯಕ್ಕೆ ಉತ್ತರಾಧಿಕಾರಿ ಇಲ್ಲದ ಕೊರಗು ಇತ್ತು. ಒಂದು ದಿನ ಕನಸಿನಲ್ಲಿ ನಿನ್ನ ಉತ್ತರಾಧಿಕಾರಿಯನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಆಯ್ಕೆ ಮಾಡು ಎಂದು ಕುಲದೇವಿ ದುರ್ಗಾ ಪರಮೇಶ್ವರೀ ಕನಸಿ ನಲ್ಲಿ ಬಂದು ಹೇಳುತ್ತಾಳೆ. ಅದೇ ಪ್ರಕಾರ ಡಂಗುರ ಸಾರುತ್ತಾರೆ. ಆಗ ಹಾಸ್ಯಗಾರ ಬಂದು ಹಣ, ಮದ್ಯದ ಆಮಿಷ ತೋರಿಸಿ ಮತ ಪಡೆಯುವ ಪ್ರಸ್ತಾವಗಳನ್ನು ಮುಂದಿಡುತ್ತಾನೆ. ಇದೆಲ್ಲ ಸರಿಯಲ್ಲ, ನಮ್ಮ ಸಮೃದ್ಧಿಪುರದ ಹೆಸರನ್ನು ಹಾಳು ಮಾಡಬೇಡಿ. ಉತ್ತಮರಿಗೇ ಮತ ಚಲಾಯಿಸಿ ಎಂಬ ಸಂದೇಶವನ್ನು ಮಂತ್ರಿ ನೀಡುತ್ತಾನೆ. ಇದು “ಮತ ಮಹಿಮಾಮೃತ’ ಪ್ರಸಂಗ. ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ನಾಗೇಶ ಶ್ಯಾನುಭಾಗ್‌ ಕಥೆಯನ್ನು, ಪ್ರಸಾದ್‌ ಮೊಗೆಬೆಟ್ಟು ಪದ್ಯ ಬರೆದಿದ್ದಾರೆ. 

ಜಿಲ್ಲಾ ಸ್ವೀಪ್‌ ಸಮಿತಿ ಆಯೋಜಿಸುವ ವಿವಿಧ ಬಗೆಯ ಮತದಾನ ಜಾಗೃತಿ ಪ್ರಯತ್ನಗಳಲ್ಲಿ ಇದೂ ಒಂದು. 2013ರ ವಿಧಾನಸಭಾ ಚುನಾವಣೆಯಲ್ಲಿ ಯಾವ್ಯಾವ ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆಯೋ ಅಲ್ಲಲ್ಲಿ ಈ ಯಕ್ಷಗಾನ ಪ್ರದರ್ಶನ ಅನಾವರಣಗೊಳ್ಳುತ್ತದೆ. ಯಕ್ಷಗಾನೀಯವಾಗಿ ಅಲಂಕೃತಗೊಂಡ ವಾಹನವು ಸಂಚರಿಸಿ ಪ್ರಸಂಗಗಳನ್ನು ಪ್ರಸ್ತುತಪಡಿಸಲಿದೆ. 

ಶೇ. 86 ಮತದಾನ ಗುರಿ
2013ರಲ್ಲಿ ರಾಜ್ಯದಲ್ಲಿ ಸರಾಸರಿ ಶೇ. 71 ಮತದಾನ ವಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ಸರಾಸರಿ ಶೇ. 76 ಮತದಾನವಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ಶೇ. 55 ಮತದಾನವಾಗಿದೆ. ಇಂತಹ 96 ಮತಗಟ್ಟೆಗಳನ್ನು ಜಿಲ್ಲಾ ಸ್ವೀಪ್‌ ಸಮಿತಿ ಗುರುತಿಸಿದೆ. ಈ ಮತಗಟ್ಟೆಗಳ ಮತ ದಾರರಿಗೆ ಚುನಾವಣಾ ಆಮಂತ್ರಣ ಪತ್ರಿಕೆ ಯನ್ನು “ಮತದಾರರ ಮಮತೆಯ ಕರೆಯೋಲೆ’ ಎಂಬುದಾಗಿ ಮುದ್ರಿಸಿ ಕಳುಹಿಸಲಾಗುತ್ತಿದೆ.

ಯಕ್ಷ ಹಾಡುಗಳು
ತುಳು, ಕನ್ನಡದ ನಾಲ್ಕು ಯಕ್ಷಗಾನದ ಹಾಡು ಗಳನ್ನು ರಚಿಸಿ ಮುದ್ರಿಸಿ ಪ್ರಚಾರ ನಡೆಸ ಲಾಗುತ್ತಿದೆ. ಸಣ್ಣ ಸಣ್ಣ ಜಿಂಗಲ್‌ಗ‌ಳನ್ನೂ ಪ್ರಚಾರ ಮಾಡಲಾಗುತ್ತಿದೆ. 

ವಿಶೇಷ ಚೇತನರಿಗೆ ಸಹಾಯವಾಣಿ
ಜಿಲ್ಲೆಯಲ್ಲಿ 8,054 ವಿಶೇಷ ಚೇತನರಿದ್ದು, ಅವರ ಎಲ್ಲ ಮಾಹಿತಿಗಳನ್ನು ಸ್ವೀಪ್‌ ಸಮಿತಿ ಹೊಂದಿದೆ. ಇವರಿಗೆ ಮತಗಟ್ಟೆಗಳಲ್ಲಿ ಸಹಾಯ, ಒಂದು ವೇಳೆ ಮನೆಯಿಂದ ಮತಗಟ್ಟೆಗೆ ಬರಲು ತೊಂದರೆ ಯಾದರೆ ಅದಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಇವರಿಗಾಗಿ ವಿಶೇಷ ಸಹಾಯವಾಣಿ (0820- 2574811) ತೆರೆಯಲಾಗಿದೆ. 25 ವಿಶೇಷ ಚೇತನರು ಕರೆ ನೀಡಿದ್ದಾರೆ.

ತೃತೀಯ ಲಿಂಗಿ, ಕೊರಗರಿಗೆ ಆದ್ಯತೆ
ತೃತೀಯ ಲಿಂಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಯತ್ನ ನಡೆಸಿದೆ. 11,000 ಕೊರಗರು ಇದ್ದು, ಅವರ ಪ್ರತಿ ಮನೆಗೆ ಐಟಿಡಿಪಿ ಅಧಿಕಾರಿಗಳು ಹೋಗಿ ಮತದಾನ ಮಾಡಲು ವಿನಂತಿಸಿದ್ದಾರೆ.  ಕಾರ್ಮಿಕರ ಕಾಲನಿ, ಕೊರಗರ ಕಾಲನಿಗೆ ಸ್ವತಃ ಜಿ.ಪಂ. ಸಿಇಒ ಹೋಗಿ ಮತದಾನ ಮಾಡಲು ವಿನಂತಿಸಿದ್ದಾರೆ. ಬೃಹತ್‌ ಜನಜಾಗೃತಿ ರ್ಯಾಲಿಯಲ್ಲಿ ಕೊರಗರ ಡೋಲು ವಾದನಕ್ಕೆ ಮನ್ನಣೆ ನೀಡಲಾಗಿದೆ.

ಹಾಲಿನ ಪೊಟ್ಟಣದ ಜತೆ
ಲೆಟರ್‌ಹೆಡ್‌ಗಳಲ್ಲಿ ಮತದಾನ ಪ್ರೋತ್ಸಾಹ ವಾಕ್ಯಗಳನ್ನು ಮುದ್ರಿಸಲಾಗಿದೆ. ಚುನಾವಣೆಯ ಕೊನೆಯ ಹೊತ್ತಿನಲ್ಲಿ ದ.ಕ. ಹಾಲು ಒಕ್ಕೂಟ ಸರಬರಾಜು ಮಾಡುವ ನಂದಿನಿ ಹಾಲಿನ ಪ್ಯಾಕೆಟ್‌ಗಳಲ್ಲಿ ಮತದಾನ ಮಾಡಲು ಪ್ರೇರೇಪಿಸುವ ವಾಕ್ಯಗಳನ್ನು ಮುದ್ರಿಸಲು ತಿಳಿಸಲಾಗಿದೆ. 

ಮನೆ ಮನೆಗೆ ಜಾಗೃತಿ
ಪ್ರಚಾರ ಸಾಮಗ್ರಿ ಮುದ್ರಿಸಿ ಜನರಿಗೆ ತಲುಪಿ ಸುವ ಕೆಲಸ ನಡೆಯುತ್ತಿದೆ. ಎಲ್ಲ ಸರಕಾರಿ ಕಚೇರಿ ಗಳಲ್ಲಿ ಸಾರ್ವಜನಿಕರಿಗೆ ಹೆಚ್ಚು ಹೆಚ್ಚು ಮತದಾನ ಮಾಡುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಸುಮಾರು 40 ಬಗೆಯ ಘೋಷವಾಕ್ಯಗಳ ಮುದ್ರೆಗಳನ್ನು ಮಾಡಿ ಸರಕಾರಿ ಕಚೇರಿಗಳಿಗೆ ಕಳುಹಿಸಲಾಗಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ಹಿಂಬರಹ ನೀಡುವಾಗ ಈ ಮುದ್ರೆಗಳನ್ನು ಒತ್ತಿ ಕೊಡುತ್ತಿದ್ದಾರೆ. 

ಇಬ್ಬರೂ ಸರಿದಾರಿಗೆ!
ನಗರ ಪ್ರದೇಶದಲ್ಲಿ ಮತದಾನಕ್ಕೆ ನಿರಾಸಕ್ತಿ ತೋರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಆಮಿಷಕ್ಕೆ ಒಳಗಾಗಿ ಮತ ಚಲಾಯಿಸುತ್ತಾರೆ. ಇವರಿಬ್ಬರನ್ನೂ ಸರಿದಾರಿಗೆ ತರುವ ಪ್ರಯತ್ನ ಸ್ವೀಪ್‌ ಸಮಿತಿಯದ್ದು. ಈ ಸಲದ ಥೀಮ್‌ “ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆ’.

ಪ್ಯಾರಾ ಮೋಟರಿಂಗ್‌, ಪ್ಯಾರಾ ಸೇಲಿಂಗ್‌
ಬೆನ್ನಿಗೆ ಯಂತ್ರವನ್ನು ಕಟ್ಟಿಕೊಂಡು ಹಾರಿ ಮತದಾನ ಮಾಡಬೇಕೆನ್ನುವ ಕರಪತ್ರಗಳನ್ನು ಬಿತ್ತರಿಸುವ ಪ್ಯಾರಾ ಮೋಟರಿಂಗ್‌ನ್ನು ಕಾರ್ಕಳ, ಅಜ್ಜರಕಾಡು, ಕುಂದಾಪುರದಲ್ಲಿ ನಡೆಸಲಾಗಿದೆ. ವಿಕಲಚೇತನರನ್ನು ಒಳಗೊಳಿಸುವ ಪ್ಯಾರಾ ಸೇಲಿಂಗ್‌ನ್ನು ಮಲ್ಪೆ ಬೀಚ್‌ನಲ್ಲಿ ಮಾಡಿಸಲಾಗುತ್ತಿದೆ. ಬಿಗ್‌ ಬಜಾರ್‌ ಸಮೀಪದ ರಂಗೋಲಿ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಮಾಲ್‌ ಮೊದಲಾದೆಡೆ ಫ್ಲಾಶ್‌ ಮೋಬ್‌ ಸೃಷ್ಟಿಸಿ ಅಲ್ಲಿ ನೆರೆದವರಿಗೆ ಮತದಾನ ಜಾಗೃತಿ ಕರಪತ್ರ ವಿತರಿಸಲಾಗುವುದು. 

1.4 ಲಕ್ಷ ಕರಪತ್ರಕ್ಕೆ  ಸ್ಪಂದನ 
ಪ್ರತಿಜ್ಞಾ ವಿಧಿ ಪತ್ರಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ. ಶಾಲಾ, ಕಾಲೇಜು, ಹಾಸ್ಟೆಲ್‌ ವಿದ್ಯಾರ್ಥಿಗಳ ಮೂಲಕ 2 ಲಕ್ಷ ಕರಪತ್ರಗಳನ್ನು ವಿತರಿಸಿದ್ದು ಈ ಕರಪತ್ರಗಳ ಮೇಲೆ ಪೋಷಕರ ಸಹಿ ಮಾಡಿಸಿಕೊಂಡು ಬರಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಈಗಾಗಲೇ 1.4 ಲಕ್ಷ ಕರಪತ್ರಗಳು ಪೋಷಕರ ಸಹಿಯೊಂದಿಗೆ ಬಂದಿರುವುದು ಜಿ.ಪಂ. ಸಿಇಒ ಶಿವಾನಂದ ಕಾಪಶಿಯವರಿಗೇ ಅಚ್ಚರಿ ತಂದಿದೆ. ಪ್ರೌಢಶಾಲೆಗಳಲ್ಲಿ ಭಾವೀ ಮತದಾರರಲ್ಲಿ ಜಾಗೃತಿ ಮೂಡಿಸಲು ಮತದಾರರ ಕ್ಲಬ್‌ನ್ನು ಶಿಕ್ಷಣ ಇಲಾಖೆ ಮೂಲಕ ಸ್ಥಾಪಿಸಲಾಗುತ್ತಿದೆ.

ಪ.ಪೂ. ಕಾಲೇಜು, ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ ರಾಯಭಾರಿಗಳನ್ನು ನೇಮಿಸಲಾಗಿದೆ. ಇವರಿಗೆ ತರಬೇತಿ ನೀಡಲಾಗಿದೆ.  ಇಂತಹ 42 ರಾಯಭಾರಿಗಳು ಕ್ಯಾಂಪಸ್‌ಗಳಲ್ಲದೆ ತಮ್ಮ ಊರುಗಳಲ್ಲಿಯೂ ಮತದಾನಕ್ಕೆ ಕರೆ ಕೊಡುತ್ತಿದ್ದಾರೆ. 
ಇವಿಎಂ ಜತೆ ಬಂದಿರುವ ಮತದಾನ ಖಾತ್ರಿಪಡಿಸಿಕೊಳ್ಳುವ ವಿವಿ ಪ್ಯಾಟ್‌ ಯಂತ್ರದ ಬಗೆಗೆ ಎಲ್ಲ ಗ್ರಾ.ಪಂ., ನಗರ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

1-urmila

Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

4

Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

13(1

Udupi: ಕೊರಗ ಸಮುದಾಯಕ್ಕೆ ಸಮಸ್ಯೆಗಳ ಸರಣಿ

12-udupi

Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.