ಸ್ಥಳೀಯ ಆರ್ಥಿಕತೆಯ ಪುನಶ್ಚೇತನಕ್ಕೆಂದೇ ಹುಟ್ಟಿದ ಸಂಘ
ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘ
Team Udayavani, Feb 9, 2020, 5:45 AM IST
ಸಮಾಜಮುಖೀ ನೆಲೆಯಲ್ಲಿ ಆಲೋಚಿಸುತ್ತಾ ಕ್ರಿಯಾಶೀಲವಾಗಿರುವ ಸಂಘ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘ. ಹಾಲು ಖರೀದಿಗೆ ಸೀಮಿತಗೊಳ್ಳದೆ
ಹೈನುಗಾರರ ಜ್ಞಾನ ಅಭಿವೃದ್ಧಿ ಕಡೆಗೂ ಗಮನ ಹರಿಸುತ್ತಿರುವುದು ವಿಶೇಷ.
ಉಪ್ಪುಂದ: ಸಮಾಜಮುಖೀ ಸಂಘ ವಾಗಿ ಗುರುತಿಸಿಕೊಂಡಿರುವ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘಕ್ಕೆ 45 ವರ್ಷಗಳ ಇತಿಹಾಸವಿದೆ.
ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 75 ಮಂದಿ ಸದಸ್ಯರನ್ನು ಒಟ್ಟು ಮಾಡಿ 1975 ರಲ್ಲಿ ಆರಂಭವಾದದ್ದು ಈ ಸಂಘ.
ಗ್ರಾಮೀಣ ಪ್ರದೇಶವಾದ ಕಿರಿಮಂಜೇಶ್ವರ, ಹೇರೂರು, ಉಳ್ಳೂರು, ಕಂಬದಕೋಣೆ, ಕೊಡೇರಿ ಭಾಗದ ಹೈನುಗಾರರು ಹಾಲನ್ನು ಹೊಟೆಲ್, ಮನೆಮನೆಗಳಿಗೆ ನೀಡಿ ಅಲ್ಪಸ್ವಲ್ಪ ಆದಾಯಗಳಿಸುತ್ತಿದ್ದರು. ಈ ಸಮಯದಲ್ಲಿ ಊರಿನ ಮುತ್ಸದಿಗಳನ್ನು ಒಳಗೊಂಡ ತಂಡ ರೈತರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಕಟ್ಟಿದ ಸಂಘಟನೆಯೇ ಈ ಸಂಘ.
ಸುಮಾರು 22 ವರ್ಷಗಳ ಕಾಲ ಬಾಡಿಗೆ ಕಟ್ಟದಲ್ಲಿದ್ದು, 1997 ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು. ಆರಂಭದಲ್ಲಿ ಸಂಗ್ರಹ ವಾಗುತ್ತಿದ್ದ ಪ್ರಮಾಣ ಕೇವಲ 100-125 ಲೀಟರ್‌ಗಳು. ಪ್ರಸ್ತುತ 357 ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ 1500ಲೀ.ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. 2008ರಲ್ಲಿ ಅಧ್ಯಕ್ಷ ಮಂಜುನಾಥ ಕಾರಂತರ ಅವಧಿಯಲ್ಲಿ 3ಸಾವಿರ ಲೀ. ಸಾಮರ್ಥ್ಯದ ಬಿಎಂಸಿ (ಬಲ್ಕ್ ಮಿಲ್ಕ್ ಕೂಲರ್) ಸ್ಥಾಪಿಸಲಾಗಿದೆ. ಡ್ರೈನೆಜ್ ವ್ಯವಸ್ಥೆ ಹಾಗೂ ಡೈರಿಯಲ್ಲಿಯೇ ಹಾಲಿನ ಪಾತ್ರೆ ಸ್ವಚ್ಚಗೊಳಿಸಲು ಬಿಸಿ ನೀರಿನ ಸೌಲಭ್ಯ ಕಲ್ಪಸಲಾಗಿದೆ.
ಅತೀ ಹೆಚ್ಚು ಲಾಭದ ನಿರೀಕ್ಷೆ ಇಟ್ಟುಕೊಳ್ಳದೇ ರೈತರಿಗೆ ಅಧಿಕ ಪ್ರಮಾಣದ ದರ ಸಿಗುವಂತೆ ಮಾಡುವ ಸಲುವಾಗಿ ಪ್ರಥಮ ಬಾರಿಗೆ ಹಾಲು ಉತ್ಪಾದಕರು ನೀಡುವ ಪ್ರತಿ ಮೀಲಿ ಲೀಟರ್ ಹಾಲನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ದರ ನೀಡುವ ನೂತನ ಪ್ರಯೋಗಕ್ಕೆ ಮುಂದಾಗಿದೆ ಈ ಸಂಘ.
ಆರಂಭದಲ್ಲಿ ಕಿರಿಮಂಜೇಶ್ವರ, ಹೇರೂರು, ಉಳ್ಳುರು, ಕಂಬದ ಕೋಣೆ, ಕೊಡೇರಿ ಪ್ರದೇಶದ ಹೈನು ಗಾರರು ಹಾಲು ಹಾಕುತ್ತಿದ್ದರು ಈಗ ಕೊಡೇರಿ, ಕಂಬದಕೋಣೆ, ಮೇಕೋಡಿನಲ್ಲಿ ಪ್ರತ್ಯೇಕ ಹಾಲು ಡೈರಿ ಸ್ಥಾಪನೆಯಾಗಿದೆ. ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳ ಬೇಕೆನ್ನುವುದು ಸಂಘದ ಮಹದಾಸೆ.
ಸಮಾಜಮುಖೀ ಕಾರ್ಯಕ್ರಮದತ್ತ ಒಲವು
ಪ್ರತಿ ವರ್ಷ ಕೃಷಿ ಅಧ್ಯಯನ ಪ್ರವಾಸ, ಹೈನುಗಾರಿಕೆ ಕುರಿತು ಮಾಹಿತಿ ಶಿಬಿರ, ಶುದ್ಧ ಹಾಲು ನಿರ್ವಹಣೆ ಶಿಬಿರ, ಜಾನುವಾರು ಪ್ರರ್ದಶನ, ಅತೀ ಹೆಚ್ಚು ಹಾಲು ನೀಡುವರಿಗೆ ಸಮ್ಮಾನ, ವಿದ್ಯಾರ್ಥಿ ವೇತನ, ಜಾನುವಾರುಗಳು ಅನಾರೋಗ್ಯಕ್ಕಿಡಾದಾಗ ಸಂಸ್ಥೆ ಮೂಲಕ ಸ್ಪಂದಿಸಲಾಗುತ್ತಿದೆ. ವಾರ್ಷಿಕವಾಗಿ ಹಲವಾರು ಉತ್ತೇಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಪ್ರಶಸ್ತಿ
2005-6ನೇ ಸಾಲಿನಲ್ಲಿ ದ.ಕ.ಹಾಲು. ಒಕ್ಕೂಟದ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಸಂಘ ಪ್ರಶಸ್ತಿ, 2018-19ನೇ ಸಾಲಿನಲ್ಲಿ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಜಿಲ್ಲಾ ಉತ್ತಮ ಸಂಘ ಪ್ರಶಸ್ತಿ ದೊರಕಿದೆ. ಕೃಷ್ಣ ಬಳಗಾರ್ ಹಳಗೇರಿ, ಗೋವಿಂದ ಪೂಜಾರಿ, ವಿಶ್ವನಾಥ ಹವಾಲ್ದಾರ್ ಅತೀ ಹೆಚ್ಚು ಹಾಲು ನೀಡುವ ಹೈನುಗಾರರು.
ಅಧ್ಯಕ್ಷರು
ಕೆ.ರಾಮಪ್ಪಯ್ಯ ಕಾರಂತ, ಬಿ.ಪುಂಡರಿಕಾಕ್ಷ ಹೆಬ್ಟಾರ್, ವೈ.ಚಂದ್ರಶೇಖರ ಶೆಟ್ಟಿ, ಶೇಷಪ್ಪಯ್ಯ ಮಧ್ಯಸ್ಥ, ಅನಂತಕೃಷ್ಣ ಪಡಿಯಾರ, ಪಣಿಯಪ್ಪಯ್ಯ ಕಾರಂತ, ವೆಂಕಟರಮಣ ಉಡುಪ, ಎನ್.ಮಂಜುನಾಥ ಕಾರಂತ, ಪುಂಡರೀಕ ಮಧ್ಯಸ್ಥ. ಪ್ರಸ್ತುತ ಸುಬ್ಬಣ್ಣ ಶೆಟ್ಟಿ.
- ಕೃಷ್ಣ ಬಿಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.