KMC Manipal; ಖ್ಯಾತ ಸಂತಾನೋತ್ಪತ್ತಿ ತಜ್ಞ ಡಾ. ಪ್ರತಾಪ್ ಪೂರ್ಣ ಸಮಯದ ಸಮಾಲೋಚನೆಗೆ ಲಭ್ಯ
Team Udayavani, Jun 3, 2024, 6:45 PM IST
ಮಣಿಪಾಲ: ಖ್ಯಾತ ಸಂತಾನೋತ್ಪತ್ತಿ ಔಷಧಿ ತಜ್ಞ ಮತ್ತು ಶಸ್ತ್ರಚಿಕಿತ್ಸಕ ಡಾ. ಪ್ರತಾಪ್ ಕುಮಾರ್ ಎನ್, ಈಗ ಪೂರ್ಣಕಾಲಿಕವು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಡಾ ರಾಮದಾಸ್ ಪೈ ಬ್ಲಾಕ್‌ನಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ.
ಜೂನ್ 3 ರಿಂದ ಜಾರಿಗೆ ಬರುವಂತೆ ಅವರು ಡಾ. ರಾಮದಾಸ್ ಪೈ ಬ್ಲಾಕ್‌ನಲ್ಲಿ ಪೂರ್ವ ನಿಗದಿ (appointment) ಮೂಲಕ ತಮ್ಮ ಸೇವೆಗಳನ್ನು ನೀಡಲಿದ್ದಾರೆ.
ತಮ್ಮ ಅಸಾಧಾರಣ ಪರಿಣತಿ ಮತ್ತು ಆರೈಕೆಗಾಗಿ ಗುರುತಿಸಲ್ಪಟ್ಟಿರುವ ಡಾ. ಪ್ರತಾಪ್ ಕುಮಾರ್ ಅವರು ಟೆಸ್ಟ್ ಟ್ಯೂಬ್ ಬೇಬಿ (ಐವಿಎಫ್) ಕಾರ್ಯ ವಿಧಾನಗಳಲ್ಲಿ ತಮ್ಮ ವಿಶೇಷ ಕೌಶಲ್ಯಗಳ ಮೂಲಕ 10,000 ಕ್ಕೂ ಹೆಚ್ಚು ಶಿಶುಗಳ ಜನನವನ್ನು ಸುಗಮಗೊಳಿಸಿರುವ ದಾಖಲೆ ಹೊಂದಿದ್ದಾರೆ.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಡಾ. ಪ್ರತಾಪ್ ಕುಮಾರ್ ಅವರ ಪೂರ್ಣ ಸಮಯದ ಲಭ್ಯತೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. “ಡಾ. ಪ್ರತಾಪ್ ಅವರು ಪ್ರಖ್ಯಾತ ಸಂತಾನೋತ್ಪತ್ತಿ ಔಷಧಿ ಮತ್ತು ಶಸ್ತ್ರಚಿಕಿತ್ಸಕರಾಗಿದ್ದಾರೆ, ಅವರ ಪರಿಣತಿಯು ಮಕ್ಕಳನ್ನು ಬಯಸುವ ಅಸಂಖ್ಯಾತ ದಂಪತಿಗಳಿಗೆ ನಗುವನ್ನು ತಂದಿದೆ. ಅವರು ಈಗ ಕಸ್ತೂರ್ಬಾ ಆಸ್ಪತ್ರೆಯ ಡಾ. ರಾಮದಾಸ್ ಪೈ ಬ್ಲಾಕ್ ಸಂಪೂರ್ಣವಾಗಿ ಲಭ್ಯವಿದ್ದಾರೆ ಎಂದು ಹೇಳಿದ್ದಾರೆ”.
ಸೋಮವಾರದಿಂದ ಶುಕ್ರವಾರದವರೆಗೆ, ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಪೂರ್ವ ನಿಗದಿ (appointment) ಮೂಲಕ ಡಾ. ಪ್ರತಾಪ್ ಕುಮಾರ್ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ.
ಸಮಯ ನಿಗದಿಪಡಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ದೂರವಾಣಿ: 6364469750
ವೆಬ್‌ಸೈಟ್: www.khmanipal.com
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.