ನಮ್ಮನ್ನು ತಿಳಿದು ಪರರನ್ನು ಪ್ರೀತಿಸುವುದು ನೈಜ ಧರ್ಮ: ಡಾ| ಹೆಗ್ಡೆ
Team Udayavani, Apr 24, 2018, 12:26 PM IST
ಹಿರಿಯಡಕ: ಮನುಷ್ಯನ ಸಾಮಾಜಿಕ ಜವಾಬ್ದಾರಿ ಮತ್ತು ನಡವಳಿಕೆ ಬಹಳ ಮುಖ್ಯವಾಗಿದೆ. ನಾವು ನಮ್ಮನ್ನು ತಿಳಿದುಕೊಂಡು, ಪರರನ್ನು ಪ್ರೀತಿಸುವುದೇ ನಿಜವಾದ ಧರ್ಮ. ಪ್ರತಿಯೊಬ್ಬರೂ ಅದನ್ನು ಪಾಲನೆ ಮಾಡಬೇಕು ಎಂದು ಮಣಿಪಾಲ ಮಾಹೆಯ ನಿವೃತ್ತ ಉಪಕುಲಾಧಿಪತಿ ಡಾ| ಬಿ.ಎಂ. ಹೆಗ್ಡೆ ಹೇಳಿದರು.
ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕೃತ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ, ಬ್ರಹ್ಮಕಲ ಶೋತ್ಸವ ಕಾರ್ಯಕ್ರಮದ ಅಂಗವಾಗಿ ರವಿವಾರ ನಡೆದ ಸುಧರ್ಮ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಮೈಸೂರು ವಿ.ವಿ.ಯ ನಿವೃತ್ತ ಕುಲಾಧಿಪತಿ ಪ್ರೊ| ಎನ್.ಎನ್. ಹೆಗ್ಡೆ ಮಾತ ನಾಡಿ, ನಾಡಿನಲ್ಲಿ ಸುಖ, ಶಾಂತಿ ನೆಲೆಯಾಗಬೇಕಾದರೆ ಜನತೆಗೆ ದೈವ, ದೇವರ ನಂಬಿಕೆ ಹೆಚ್ಚಬೇಕು ಎಂದರು.
ಶ್ರೀ ಬ್ರಹ್ಮಶ್ರೀ ಉಚ್ಚಿಲತ್ತಾಯ ನಿಲೇಶ್ವರ ಪದ್ಮನಾಭ ತಂತ್ರಿ ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದರು.
ದಾನಿಗಳನ್ನು ಸಮ್ಮಾನಿಸಲಾಯಿತು. ನ್ಯಾ| ವಿಶ್ವನಾಥ ಶೆಟ್ಟಿ, ಡಾ| ರತನ್ ಕೇಳ್ಕರ್, ಮುನಿಯಂಗಳ ಪ್ರಸಾದ್ ಭಟ್, ನಾಡೋಜ ಜಿ. ಶಂಕರ್, ಡಾ| ಎಂ. ಮೋಹನ ಆಳ್ವ, ಸದನಂ ನಾರಾಯಣ ಪುದುವಾಳ್, ಬಿ. ಜಗನ್ನಾಥ ಶೆಟ್ಟಿ, ಡಾ| ಶಶಿಕಿರಣ್ ಶೆಟ್ಟಿ, ಎನ್.ಬಿ. ಶೆಟ್ಟಿ, ಪ್ರಕಾಶ್ ಶೆಟ್ಟಿ ಪರೀಕ, ಪಿ.ಎ. ಕಿಣಿ, ಬಸ್ತಿ ಸರ್ವೋತ್ತಮ ಪೈ, ಕೊಡಿಬೈಲು ನಾರಾಯಣ ಹೆಗ್ಡೆ, ಅರುಣಾಕರ ಡಿ. ಶೆಟ್ಟಿ, ಸುಭಾಶ್ಚಂದ್ರ ಹೆಗ್ಡೆ, ಜಯಪ್ರಕಾಶ್ ಹೆಗ್ಡೆ, ಹರ್ಷವರ್ಧನ ಹೆಗ್ಡೆ, ಗೋವರ್ಧನದಾಸ ಹೆಗ್ಡೆ, ಅಮರ್‌ನಾಥ ಆರ್. ಶೆಟ್ಟಿ, ಎಚ್. ಕೃಷ್ಣಮೂರ್ತಿ, ಎನ್.ಬಿ. ಶೆಟ್ಟಿ, ಅರವಿಂದ ಹೆಗ್ಡೆ ಅಂಜಾರು ಬೀಡು, ಹರಿಪ್ರಸಾದ್ ಶೆಟ್ಟಿ ಅಂಜಾರು ಬೀಡು ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.