ಭೂಲೋಕದ ಸ್ವರ್ಗ ಕೊಡಚಾದ್ರಿ ಪರ್ವತ
ಮಳೆಗಾಲದಲ್ಲಿ ಇಮ್ಮಡಿಯಾದ ಕೊಡಚಾದ್ರಿ ಸೌಂದರ್ಯ
Team Udayavani, Sep 4, 2019, 5:06 AM IST
ಕುಂದಾಪುರ: ಕೊಲ್ಲೂರು ಮೂಕಾಂಬಿಕೆಯು ಮೂಕಾಸುರನನ್ನು ಸಂಹರಿಸಿದ ಸ್ಥಳ, ಆದಿ ಶಂಕರಾಚಾರ್ಯರು ಧ್ಯಾನಸ್ಥರಾದ ಬೆಟ್ಟ, ಭೂಲೋಕದ ಸ್ವರ್ಗ, ಮಲೆನಾಡಿನ ಹೊನ್ನ ಶಿಖರ ಎಂಬೆಲ್ಲ ವಿಶೇಷಣಗಳಿಂದ ಕರೆಯಿಸಿಕೊಳ್ಳುವ ಅಪರೂಪದ ಪ್ರಾಣಿ – ಪಕ್ಷಿ ಸಂಕುಲ, ಔಷಧೀಯ ಸಸ್ಯ ಸಂಪತ್ತು ಹೊಂದಿರುವ ಸಹಜ ಸುಂದರವಾದ ಕೊಡಚಾದ್ರಿ ಪರ್ವತಕ್ಕೆ ಕೊಡಚಾದ್ರಿಯೇ ಸಾಟಿ. ಭೂಲೋಕದ ಅಪ್ಸರೆ ಕೊಡಚಾದ್ರಿಯ ಸೌಂದರ್ಯ ಮಳೆಗಾಲದಲ್ಲಿ ಮತ್ತಷ್ಟು ಇಮ್ಮಡಿಯಾಗಿದೆ. ಬೆಟ್ಟವಿಡೀ ಹಬ್ಬಿರುವ ಹಚ್ಚ – ಹಸುರಿನ ಮರ – ಗಿಡಗಳ ಮಧ್ಯೆ ಚಾರಣ ಮಾಡುವುದೇ ಮನಸ್ಸು -ಕಣ್ಣಿಗೆ ಹಬ್ಬ.
ಪಶ್ಚಿಮಘಟ್ಟಗಳ ಸಾಲಿನಲ್ಲಿರುವ “ಕೊಡಚಾದ್ರಿ’ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1,343 ಮೀ. ಎತ್ತರದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ, ಕೊಲ್ಲೂರು ಸಮೀಪದ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ಪರ್ವತವು ಮಳೆಗಾಲದಲ್ಲಿ ಮಂಜು ಮುಸುಕಿದ ವಾತಾವರಣ, ಹಸುರು – ಹಸುರಾದ ಪ್ರಕೃತಿ, ಬೆಟ್ಟ, ಗುಡ್ಡಗಳು, ಧುಮ್ಮಿಕ್ಕಿ ಹರಿಯುವ ಸಣ್ಣ – ಸಣ್ಣ ಜಲಪಾತಗಳಿಂದ ಸೊಬಗನ್ನು ಮತ್ತಷ್ಟು ಹೆಚ್ಚಿಸಿಕೊಂಡಂತೆ ಭಾಸವಾಗುತ್ತಿದೆ.
ಎಲ್ಲವನ್ನೂ ಮರೆಸುವ ಚಾರಣ
ಕೆಲಸದ ಒತ್ತಡ, ಮನಸ್ಸಿನ ಜಂಜಾಟ, ದೇಹಯಾಸ ಎಲ್ಲವನ್ನೂ ಮರೆಸುವ ಪ್ರಕೃತಿ ಸೌಂದರ್ಯ ಇಲ್ಲಿದೆ. ಚಾರಣಕ್ಕಿದು ಉತ್ತಮವಾದ ಸ್ಥಳ. ಇದು ಕ್ಲಿಷ್ಟಕರ ಬೆಟ್ಟವಾಗಿದ್ದರೂ, ಇಲ್ಲಿನ ಹಚ್ಚ – ಹಸುರಿನ ಮರ – ಗಿಡಗಳು, ಗಿರಿ- ಶಿಖರಗಳು ಈಗಂತೂ ತುಂಬಾನೇ ಚೆಂದವಾಗಿ ಕಾಣುತ್ತವೆ. ಸ್ನೇಹಿತರು ಅದರಲ್ಲೂ ಒಂದೇ ಮನಸ್ಥಿತಿಯವರು ಚಾರಣ ಮಾಡಿದರೆ, ತುಂಬಾ ಆನಂದಿಸಬಹುದು. ಎಲ್ಲ ಸೊತ್ತು, ಆಹಾರವನ್ನು ಅಗತ್ಯವಾಗಿ ತೆಗೆದುಕೊಂಡು ಹೋಗಿ.
– ಶಿವಾನಂದ ಸೂರ್ಗೋಳಿ, ಚಾರಣಿಗರು
ವಿಶೇಷವೇನು?
ಪಶ್ಚಿಮ ಘಟ್ಟದ ಸೌಂದರ್ಯದ ಜತೆಗೆ ಶಂಕರಾಚಾರ್ಯರು ಧ್ಯಾನಕ್ಕೆ ಕುಳಿತ ಸ್ಥಳದಲ್ಲಿ ಶಿಲೆಯಿಂದಲೇ ನಿರ್ಮಿಸಲಾದ ಕಲ್ಲಿನ ಮಂಟಪ “ಸರ್ವಜ್ಞ ಪೀಠ’ ವಿದೆ. ಪಕ್ಕದಲ್ಲೇ ನಿಸರ್ಗದತ್ತ “ಗಣೇಶನ ಗುಹಾಲಯ’ವಿದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದು ಕಣ್ಣಿಗೆ ರಸದೌತಣ. ಬೆಟ್ಟದ ಮೇಲಿನಿಂದ ಸುಮಾರು 5 ಕಿ.ಮೀ. ಕೆಳಗೆ ನಡೆದುಕೊಂಡು ಬಂದರೆ “ಹಿಡ್ಲುಮನೆ’ ಜಲಪಾತವಿದೆ. ಇಲ್ಲಿ ಮೂಕಾಂಬಿಕಾ ದೇವಿಯ ಮಂದಿರವೊಂದಿದೆ. ಪಕ್ಕದಲ್ಲೇ ಸುಮಾರು 40 ಅಡಿ ಎತ್ತರದ ಕಬ್ಬಿಣದ ಐತಿಹಾಸಿಕ ತ್ರಿಶೂಲವೊಂದಿದೆ.
ಹೋಗುವುದು ಹೇಗೆ?
ಕೊಲ್ಲೂರಿನಿಂದ ಜೀಪ್‌ಗ್ಳು ಬಾಡಿಗೆ ಮಾಡುತ್ತಿದ್ದು, ಕೊಲ್ಲೂರು, ನಿಟ್ಟೂರು ಮತ್ತು ಹೊಸನಗರದಿಂದ ಕೊಡಚಾದ್ರಿಯ ದೇವಸ್ಥಾನದವರೆಗೆ ಹೋಗುತ್ತವೆ. ನಿಟ್ಟೂರಿನಿಂದ ಕೊಡಚಾದ್ರಿಗೆ 12 ಕಿ.ಮೀ. ಕಡಿದಾದ ಮಣ್ಣಿನ ರಸ್ತೆಯ ಮೂಲಕ ಸಂಚರಿಸಬೇಕು. ಕಾರು, ಬೈಕ್ ಇತ್ಯಾದಿ ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲ. ಚಾರಣ ಮಾಡುವುದಾದರೆ ಹೋಗಿ ಬರಲು ಸುಮಾರು 18 ಕಿ.ಮೀ. ಅಂತರವಿದೆ. ಚಾರಣಿಗರು ಅಲ್ಲೇ ಉಳಿದುಕೊಳ್ಳುವುದಾದರೆ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರಗಳಲ್ಲಿ ಮುಂಗಡ ಅನುಮತಿ ಪಡೆಯಬೇಕು. ಜೀಪ್‌ಗ್ಳು ರಾತ್ರಿ ಹೊತ್ತು ಅಲ್ಲಿ ಉಳಿದುಕೊಳ್ಳಲು ಅರಣ್ಯ ಇಲಾಖೆ ಅನುಮತಿಯಿಲ್ಲ. ಆದರೆ ಜೀಪ್‌ನಲ್ಲಿ ಹೋದವರು ಅಲ್ಲಿ ಉಳಿದುಕೊಂಡು, ಮರು ದಿನ ಬರಬಹುದು. ಹೋಗಿ ಬರುವುದಾದರೆ ಬೆಳಗ್ಗೆ 6 ರಿಂದ ಸಂಜೆ 6.30ರವರೆಗೆ ಮಾತ್ರ ಅನುಮತಿಯಿದೆ. ರಾತ್ರಿ ಉಳಿದುಕೊಳ್ಳುವವರು ಮುಂಚಿತವಾಗಿ ತಿಳಿಸಿದರೆ ಊಟದ ವ್ಯವಸ್ಥೆಯೂ ಇದೆ.
ಬರಹ: ಪ್ರಶಾಂತ್ ಪಾದೆ
ಚಿತ್ರ: ವಿ.ಬಿ. ಬೆಳ್ವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.