ಕೊಡೇರಿ: ಅವಧಿ ಮುಗಿದರೂ ಮುಗಿಯದ ಬ್ರೇಕ್ ವಾಟರ್ ಕಾಮಗಾರಿ
ಅರ್ಧದಷ್ಟೂ ಮುಗಿಯದ ಕಾಮಗಾರಿ ; ಈ ವರ್ಷದ ಜನವರಿಗೆ ಅಂತಿಮ ಗಡುವು
Team Udayavani, Jun 1, 2019, 6:00 AM IST
ಕೊಡೇರಿ ಬಂದರಿನ ದಕ್ಷಿಣ ಭಾಗದಲ್ಲಿ ನಡೆಯುತ್ತಿರುವ ಬ್ರೇಕ್ ವಾಟರ್ ಕಾಮಗಾರಿ.
ಕಿರಿಮಂಜೇಶ್ವರ: ಕೊಡೇರಿ ಮೀನುಗಾರಿಕಾ ಬಂದರಿನಲ್ಲಿ ಕಡಲ್ಕೊರೆತ ತಡೆಗಾಗಿ 33 ಕೋ.ರೂ. ವೆಚ್ಚದಲ್ಲಿ 2016 ರಲ್ಲಿ ಆರಂಭಗೊಂಡ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿಯ ಗಡುವು ಈ ವರ್ಷದ ಜನವರಿಗೆ ಅಂತ್ಯವಾದರೂ, ಕಾಮಗಾರಿ ಮಾತ್ರ ಇನ್ನು ಅರ್ಧದಷ್ಟು ಕೂಡ ಮುಗಿದಿಲ್ಲ.
ಕೊಡೇರಿಯಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯಿಂದ ಬ್ರೇಕ್ ವಾಟರ್ ಕಾಮಗಾರಿಗೆ 33 ಕೋ.ರೂ. ವೆಚ್ಚದ ಯೋಜನೆ ಮಂಜೂರಾಗಿದ್ದು, 2016 ರ ಡಿ. 22 ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇಲ್ಲಿನ ಬಂದರಿನ ದಕ್ಷಿಣ ಭಾಗ ಹಾಗೂ ಉತ್ತರ ಭಾಗದಲ್ಲಿ ತಲಾ 200 ಮೀಟರ್ ಉದ್ದದ ಬ್ರೇಕ್ ವಾಟರ್ ನಿರ್ಮಾಣ ಯೋಜನೆಯಿದೆ.
ಆದರೆ ಈಗ ದಕ್ಷಿಣ ಭಾಗದ ಕಾಮಗಾರಿ ಮಾತ್ರ ನಡೆಯುತ್ತಿದ್ದು, ಅದು ಕೂಡ 80- 100 ಮೀ. ಅಷ್ಟೇ ಮುಗಿದಿದೆ. ಅಂದರೆ ಈ ವರ್ಷದ ಜನವರಿಗೆ ಕಾಮಗಾರಿ ಮುಗಿಸಲು ಗಡುವು ನೀಡಿದರೂ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿ ಅರ್ಧ ದಷ್ಟೂ ಕಾಮಗಾರಿ ಮುಗಿಸಿಲ್ಲ ಎನ್ನುವ ಆರೋಪ ಇಲ್ಲಿನ ಮೀನುಗಾರರದ್ದು.
ಹೂಳೆತ್ತಿಲ್ಲ
ಈ 33 ಕೋ.ರೂ. ಅನುದಾನದಲ್ಲಿ ಬಂದರಿನ ಎರಡೂ ಬದಿಯ ಬ್ರೇಕ್ ವಾಟರ್ ಮಧ್ಯದಲ್ಲಿರುವ ಅಳಿವೆ ಭಾಗದಲ್ಲಿ ತುಂಬಿರುವ ಹೂಳನ್ನು ಕೂಡ ತೆಗೆಯಬೇಕು ಎನ್ನುವ ಕರಾರು ಕೂಡ ಆಗಿದೆ. ಆದರೆ ಈವರೆಗೆ ಹೂಳು ತೆಗೆಯಲು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಮುಂದಾಗಿಲ್ಲ.
ಮೀನುಗಾರರಿಗೆ ಸಮಸ್ಯೆ
ಬ್ರೇಕ್ ವಾಟರ್ ಕಾಮಗಾರಿ ಮುಗಿಯದೇ ಇರುವುದರಿಂದ, ಅದಲ್ಲದೆ ಅಳಿವೆ ಭಾಗದಲ್ಲಿ ತುಂಬಿರುವ ಹೂಳನ್ನು ಕೂಡ ತೆಗೆಯದ ಕಾರಣ, ಮೀನುಗಾರರು ಸಮಸ್ಯೆ ಎದುರಿಸಲಿದ್ದಾರೆ. ಕೊಡೇರಿಯಲ್ಲಿ 9-10 ಮಾಟು ಬಲೆ ಜೋಡಿ, 100 ಕ್ಕೂ ಮಿಕ್ಕಿ ದೋಣಿಗಳಿದ್ದು, ಸುಮಾರು 400 – 500 ಮೀನುಗಾರರು ಇಲ್ಲಿದ್ದಾರೆ. ಇದು ಸಹಜ ಬಂದರು ಆಗಿರುವುದರಿಂದ ಉಪ್ಪುಂದ ಭಾಗದವರು ಇಲ್ಲಿಗೆ ಬರುತ್ತಾರೆ. ಇವರಿಗೆಲ್ಲ ಮುಂದಿನ ಮೀನುಗಾರಿಕಾ ಋತುವಿನಲ್ಲಿ ಸಮಸ್ಯೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.