ಕೊಡೇರಿ: ಉಪ್ಪು ನೀರಿನಿಂದ ‘ಜೀವಜಲ’ಕ್ಕೆ ಸಂಕಷ್ಟ

Team Udayavani, May 26, 2019, 6:10 AM IST

kodderi

ಕುಂದಾಪುರ: ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಭಾಗದ ಮೂರೂ ಸುತ್ತಲೂ ಹೊಳೆಯಿದೆ. ಆದರೆ ಕುಡಿಯುವ ನೀರಿಗೆ ಮಾತ್ರ ಬರ ಉಂಟಾಗಿದೆ. ಕಾರಣ ಇಲ್ಲಿರುವ ಬಾವಿ, ಸಹಿತ ಎಲ್ಲ ನೀರಿನ ಮೂಲಗಳಲ್ಲಿ ಉಪ್ಪು ನೀರಿನ ಪ್ರಭಾವವಿದೆ. ಇಲ್ಲಿನ ಸುಮಾರು 150ಕ್ಕೂ ಹೆಚ್ಚು ಮನೆಗಳಿಗೆ ‘ಜೀವಜಲ’ಕ್ಕೆ ಸಂಕಷ್ಟ ಎದುರಾಗಿದೆ.

ಕೊಡೇರಿಯ ಅಕ್ಕರಮಠ ದೇವಸ್ಥಾನದ ಉತ್ತರ ಭಾಗದಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಮಸ್ಯೆಯಿದ್ದರೆ, ಇಲ್ಲಿನ ಎಡ ಮಾವಿನ ಹೊಳೆಯಲ್ಲಿ 60-70 ಮನೆಗಳಿಗೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ಟ್ಯಾಂಕರ್‌ ನೀರು ಪೂರೈಕೆ

ಕಿರಿಮಂಜೇಶ್ವರ ಗ್ರಾ.ಪಂ. ಪಂಚಾಯತ್‌ ವತಿಯಿಂದ ಕೊಡೇರಿ ಭಾಗಕ್ಕೆ ಎರಡು ದಿನಗಳಿಗೊಮ್ಮೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರತಿ ಮನೆಗೆ 150ರಿಂದ 200 ಲೀಟರ್‌ ವರೆಗೆ ಕೊಡಲಾಗುತ್ತಿದೆ. ಆದರೆ ಇದು ಸಾಲದಾಗಿದೆ. ಇನ್ನು 3 ದಿನಕ್ಕೊಮ್ಮೆ ನಳ್ಳಿ ಮೂಲಕ ಮನೆಗೆ 4-5 ಕೊಡಪಾನವಷ್ಟೇ ನೀರು ಸರಬರಾಜು ಮಾಡಲಾಗುತ್ತಿದೆ.

ಸಮಸ್ಯೆಯೇನು?

ನೀರಿನ ಸಮೃದ್ಧತೆಯಿದೆ. ಆದರೆ ಅದನ್ನು ಪಂಚಾಯತ್‌ ಸಮರ್ಪಕವಾಗಿ ನಿರ್ವಹಿಸುವಲ್ಲಿ ಎಡವಿದೆ ಎನ್ನುವುದು ಸ್ಥಳೀಯರೊಬ್ಬರ ಆರೋಪ. ಇದು ಅಲ್ಲದೆ ನಳ್ಳಿ ನೀರು ನಿರ್ವಹಣೆ ವ್ಯವಸ್ಥೆ ಸರಿಯಿಲ್ಲ. ಅದಕ್ಕೊಂದು ಸರಿಯಾದ ಸಮಯ ಕೂಡ ನಿಗದಿ ಮಾಡಿಲ್ಲ. ನೀರು ಬಿಡುವವರು ಕೂಡ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವುದು ಇಲ್ಲಿನ ಜನರ ಅಭಿಪ್ರಾಯವಾಗಿದೆ.

ರಸ್ತೆ ಸಂಪರ್ಕವಿಲ್ಲ

ಇಲ್ಲಿ ಟ್ಯಾಂಕರ್‌ ಮೂಲಕ ಪಂಚಾಯತ್‌ ನೀರು ಪೂರೈಕೆಗೆ ಗರಿಷ್ಠ ಪ್ರಯತ್ನ ಮಾಡುತ್ತಿದ್ದರೂ, ಕೊಡೇರಿ ಅಕ್ಕರಮಠ‌ ದೇವಸ್ಥಾನದ ಉತ್ತರ ಭಾಗದ ಮುಂದಕ್ಕೆ ರಸ್ತೆ ಸಂಪರ್ಕವೇ ಇಲ್ಲ. ಇಲ್ಲಿಂದ ಮುಂದಕ್ಕೆ ಟ್ಯಾಂಕರ್‌ ಸಂಚರಿಸುವುದು ಕಷ್ಟ. ಹಾಗಾಗಿ ಎಲ್ಲ ಮನೆಗಳಿಗೆ ಟ್ಯಾಂಕರ್‌ ನೀರು ಪೂರೈಸಲು ಕೂಡ ಕಷ್ಟವಾಗಿದೆ.

ಇಲ್ಲಿರುವ ಹೊಳೆಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಪಂಚಾಯತ್‌ ಹಾಗೂ ಜನಪ್ರತಿನಿಧಿಗಳು ಶಾಶ್ವತ ಯೋಜನೆಯೊಂದನ್ನು ರೂಪಿಸಲು ಮುಂದಾಗಬೇಕಿದೆ. ನಳ್ಳಿ ಮೂಲಕ ಕೊಡುವ ನೀರನ್ನು ಸರಿಯಾದ ಸಮಯಕ್ಕೆ ನೀಡುವಂತಾಗಲಿ. ಟ್ಯಾಂಕರ್‌ ನೀರನ್ನು ಇನ್ನಷ್ಟು ಹೆಚ್ಚಿಸಲಿ.

ಹೆಚ್ಚಿನ ನೀರು ಪೂರೈಕೆ

ಕೊಡೇರಿ, ಎಡಮಾವಿನ ಹೊಳೆ ಪ್ರದೇಶಕ್ಕೆ ಇನ್ನಷ್ಟು ಹೆಚ್ಚಿನ ನೀರು ಪೂರೈಕೆಗೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು. ಪಂಚಾಯತ್‌ಗೆ ಈ ವರೆಗೆ ನೀರಿನ ಸಮಸ್ಯೆ ಕುರಿತಂತೆ ಯಾವುದೇ ದೂರುಗಳು ಬಂದಿಲ್ಲ. ದೂರು ನೀಡಿದರೆ ಕೂಡಲೇ ಪರಿಹರಿಸಲು ಪ್ರಯತ್ನಿಸಲಾಗುವುದು. ಪಂಚಾಯತ್‌ ಅಧೀನದ ಬೋರ್‌ವೆಲ್ಗಳಲ್ಲಿ ನೀರಿನ ಪ್ರಮಾಣ ಈಗ ಕಡಿಮೆಯಾಗಿರುವುದರಿಂದ ಹೆಚ್ಚುವರಿಯಾಗಿ ಟ್ಯಾಂಕರ್‌ ಮೂಲಕ ನೀಡಲಾಗುತ್ತಿದೆ. ದಿನಕ್ಕೆ 6-7 ಟ್ಯಾಂಕರ್‌ ನೀರು ವಿತರಣೆ ಮಾಡುತ್ತಿದ್ದೇವೆ.
-ನವೀನ್‌ ಕುಮಾರ್‌, ಕಿರಿಮಂಜೇಶ್ವರ ಪಿಡಿಒ
ಉದಯವಾಣಿ ಆಗ್ರಹವೇನು?

ಇಲ್ಲಿರುವ ಹೊಳೆಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಪಂಚಾಯತ್‌ ಹಾಗೂ ಜನಪ್ರತಿನಿಧಿಗಳು ಶಾಶ್ವತ ಯೋಜನೆಯೊಂದನ್ನು ರೂಪಿಸಲು ಮುಂದಾಗಬೇಕಿದೆ. ನಳ್ಳಿ ಮೂಲಕ ಕೊಡುವ ನೀರನ್ನು ಸರಿಯಾದ ಸಮಯಕ್ಕೆ ನೀಡುವಂತಾಗಲಿ. ಟ್ಯಾಂಕರ್‌ ನೀರನ್ನು ಇನ್ನಷ್ಟು ಹೆಚ್ಚಿಸಲಿ.
ಕ್ರಮ ಕೈಗೊಳ್ಳಲಿ

ಇರುವ ನೀರನ್ನು ಸಮರ್ಪಕವಾಗಿ ಕೊಡಲು ಪಂಚಾಯತ್‌ ಕ್ರಮ ಕೈಗೊಳ್ಳಲಿ. ಇಲ್ಲಿ 3 ಸುತ್ತಲೂ ಹೊಳೆಯಿದ್ದರೂ, ಈ ರೀತಿ ಕುಡಿಯುವ ನೀರಿನ ಬರ ಬಂದಿರುವುದು ವಿಪರ್ಯಾಸ. ಕೊಡೇರಿ ಭಾಗಕ್ಕೆ ಇನ್ನಷ್ಟು ಹೆಚ್ಚಿನ ನೀರನ್ನು ಪಂಚಾಯತ್‌ನವರು ಪೂರೈಸಲಿ.
-ಗೋಪಾಲ್, ಕೊಡೇರಿ
– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.