ಕೊಳಲಗಿರಿ: ರಸ್ತೆ ರಿಪೇರಿಗೆ ಸ್ಥಳೀಯರ ಆಗ್ರಹ
Team Udayavani, Mar 5, 2020, 5:42 AM IST
ಬ್ರಹ್ಮಾವರ: ಹಾವಂಜೆ ಗ್ರಾಮದ ಕೊಳಲಗಿರಿಯ ಕ್ಯಾಶ್ಯೂ ಫ್ಯಾಕ್ಟರಿಯ ಎದುರು ಮುಖ್ಯ ರಸ್ತೆ ಸಮೀಪದಲ್ಲಿ ಸುಮಾರು 25 ಮನೆಗಳಿರುವ ವಸತಿ ಪ್ರದೇಶವಿದೆ.ಇಲ್ಲಿಗೆ ಸಂಪರ್ಕ ಕಲ್ಪಿಸಲು ಮಣ್ಣಿನ ರಸ್ತೆ ಮಾತ್ರವೇ ಇದ್ದು, ಮಳೆಗಾಲದಲ್ಲಿ ನಡೆದಾಡಲೂ ಕಷ್ಟದ ಪರಿಸ್ಥಿತಿ ಇದೆ. ಈ ಭಾಗದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಕಿರು ಸೇತುವೆಯ ಅಗತ್ಯವಿದೆ.
ಎಸ್‌ಸಿ ಎಸ್‌ಟಿ ಹಾಗೂ ಇನ್ನಿತರ ವರ್ಗದವರು ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು, ಶಾಲಾ ಮಕ್ಕಳಿಗೂ ಈ ರಿಂಗ್ ರಸ್ತೆಯಿಂದ ಬಹಳಷ್ಟು ಪ್ರಯೋಜನವಿದೆ.
ಈ ಭಾಗದ ಸಾರ್ವಜನಿಕರು ಮಾರುಕಟ್ಟೆ, ಕೊಳಲಗಿರಿ ಜಂಕ್ಷನ್‌ಗೆ ಬರಲು ಸುಮಾರು ಒಂದು ಕಿಲೋಮೀಟರ್ ಹೆಚ್ಚುವರಿ ಸುತ್ತುಬಳಸಿ ಬರಬೇಕಾಗುತ್ತದೆ. ಜನಪ್ರತಿನಿಧಿಗಳು ಗಮನಹರಿಸಿ ಈ ಭಾಗದಲ್ಲಿ ರಿಂಗ್ ಕಾಂಕ್ರೀಟ್ ರಸ್ತೆಯ ವ್ಯವಸ್ಥೆ ಕಲ್ಪಿಸಿಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.