“ಕೊಲ್ಲೂರು ವ್ಯಾಪ್ತಿಯ ಹಕ್ಕುಪತ್ರ ವಂಚಿತರಿಗೆ ನ್ಯಾಯ ಒದಗಿಸಲು ಬದ್ಧ’
Team Udayavani, Jul 22, 2017, 7:00 AM IST
ಕೊಲ್ಲೂರು: ಕೊಲ್ಲೂರು ವ್ಯಾಪ್ತಿಯ ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೇಯ ಅನಂತರ 94-ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಕೊಲ್ಲೂರಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಅರಣ್ಯ ಅದಿಕಾರಿಗಳೊಡನೆ ಚರ್ಚಿಸಿದ ಶಾಸಕರು ಸರ್ವೇ ನಂ. 56,121 ಜಮೀನಿನ ಹಕ್ಕುಪತ್ರ ವಿತರಣೆಯ ಗೊಂದಲದ ವಾತಾ ವರಣವನ್ನು ನಿಭಾಯಿಸುವ ಸಲು ವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಡನೆ ನಡೆಸಿದ ಚರ್ಚೆಯಲ್ಲಿ ಭಾಗವಹಿಸಿ ಕೊಲ್ಲೂರು ಪರಿಸರದಲ್ಲಿ ಬಹಳಷ್ಟು ವರ್ಷಗಳಿಂದ ವಾಸವಾಗಿರುವ ಎಲ್ಲಾ ವರ್ಗದ ಜನರಿಗೆ ಹಕ್ಕುಪತ್ರ ನೀಡಲು ಉಂಟಾಗಿರುವ ತೊಡಕನ್ನು ನಿಭಾಯಿಸಲು ಬದ್ದನಾಗಿದ್ದು ಇಲಾಖೆಯ ಅದಿಕಾರಿಗಳ ಸಮಕ್ಷಮದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಎ.ಸಿ.ಎಫ್ ಅಚ್ಚಪ್ಪ, ಅಭಯಾರಣ್ಯ ಇಲಾಖೆಯ ರೇಂಜರ್ ಸಿದ್ದೇಶ್, ತಹಶೀಲ್ದಾರ ಕಿರಣ್ ಗೌರಯ್ಯ, ತಾ.ಪಂ. ಸದಸ್ಯೆ ಗ್ರೀಷ್ಮಾ ಬಿಡೆ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷೆ ನೇತ್ರಾವತಿ, ತಾ.ಪಂ.ಮಾಜಿ ಸದಸ್ಯ ರಮೇಶ ಗಾಣಿಗ, ಪಂಚಾಯತ್ ಸದಸ್ಯರು ಸಹಕಾರಿ ಸಂಘಗಳ ನಿರ್ದೇಶಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.