ಕೋಣಿ: ಸಮಸ್ಯೆಗಳಿಗೆ ಮುಕ್ತಿ, ರುದ್ರಭೂಮಿಗೆ ಕಾಯಕಲ್ಪ
Team Udayavani, Sep 25, 2019, 5:47 AM IST
ಬಸ್ರೂರು: ಕೋಣಿ ಗ್ರಾ.ಪಂ. ವ್ಯಾಪ್ತಿಗೆ ಸಂಬಂಧಿಸಿದಂತೆ ಒಂದೆಡೆ ಕಂದಾವರ ಗ್ರಾ.ಪಂ. ಆದರೆ ಮತ್ತೂಂದೆಡೆ ಕೋಟೇಶ್ವರ ಗ್ರಾ.ಪಂ. ಇನ್ನೊಂದೆಡೆ ಕುಂದಾಪುರ ಪುರಸಭೆಯ ಗಡಿ ಬರುತ್ತದೆ. ಹೀಗಿದ್ದರೂ ಇಲ್ಲಿನ ರುದ್ರಭೂಮಿಯ ಅವ್ಯವಸ್ಥೆಯಿಂದಾಗಿ ಈ ವಿಶಾಲ ವ್ಯಾಪ್ತಿಯ ಗ್ರಾಮಸ್ಥರು ಮಾತ್ರ ಉಪಯೋಗಿಸುತ್ತಿರಲಿಲ್ಲ. ಇನ್ನೇನು ನೆಲಕ್ಕಚ್ಚಲಿದ್ದ ಮೇಲ್ಛಾವಣಿ, ಶವ ಇರಿಸಲು ಸಮರ್ಪಕವಾದ ಜಾಗದ ಕೊರತೆ ಹೀಗೆ ಅನೇಕ ಮೂಲಭೂತ ಸಮಸ್ಯೆಗಳಿದ್ದ ರುದ್ರಭೂಮಿಗೆ ಕಾಯಕಲ್ಪ ಸಿಕ್ಕಿದೆ.
ಇಲ್ಲಿನ ಅಸಮರ್ಪಕ ವ್ಯವಸ್ಥೆಯ ಬಗ್ಗೆ ಉದಯವಾಣಿ ಪತ್ರಿಕೆ ಈ ಹಿಂದೆ ವರದಿಯನ್ನೂ ಪ್ರಕಟಿಸಿತ್ತು. ಇದರಿಂದಾಗಿ ಎಚ್ಚೆತ್ತುಕೊಂಡಿರುವ ಗ್ರಾ.ಪಂ. ರುದ್ರಭೂಮಿಯನ್ನು ಉಪಯೋಗಪೂರ್ಣವಾಗಿಸುವಲ್ಲಿ ಹೆಜ್ಜೆ ಇಟ್ಟಿದೆ.
ಹೊಸ ಮೇಲ್ಛಾವಣಿ ನಿರ್ಮಾಣ, ಸುತ್ತಲೂ ಕಾಂಪೌಂಡ್ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಈ ಕೆಲಸಗಳಿಗಾಗಿ ಈಗಾಗಲೇ ಕೋಣಿ ಪಂ. 2 ಲಕ್ಷ ರೂ.ಗಳನ್ನು ವ್ಯಯಿಸಿದೆ. ನೆಲಕ್ಕೆ ಇಂಟರ್ ಲಾಕ್ ಹಾಕಲಾಗಿದ್ದು, ಈ ಹಿಂದೆ ಶವ ಸಂಸ್ಕಾರಕ್ಕಾಗಿ ಕುಂದಾಪುರಕ್ಕೆ ಹೋಗುತ್ತಿದ್ದ ಜನರು ಕೋಣಿ ರುದ್ರಭೂಮಿಯಲ್ಲೆ ಮಾಡುತ್ತಿದ್ದಾರೆ.
ಇನ್ನು ಶವವನ್ನು ಇರಿಸುವಂತಹ ಸಿಲಿಕಾನ್ ಛೇಂಬರ್ ನಿರ್ಮಾಣ ಕಾರ್ಯವಾಗಬೇಕಾಗಿದೆ. ಈ ಭರವಸೆಯನ್ನೂ ಪಂಚಾಯತ್ ಈಗಾಗಲೇ ನೀಡಿದೆ.
ಶೀಘ್ರ ಸಿಲಿಕಾನ್ ಛೇಂಬರ್
ಕೋಣಿ ಗ್ರಾ.ಪಂ.ನ ರುದ್ರಭೂಮಿಗೆ ಈಗ ಬೇಕಾಗಿರುವುದು ಶವವನ್ನು ಇರಿಸಲು ಒಂದು ಸಿಲಿಕಾನ್ ಛೆಂಬರ್ ಮಾತ್ರ. ಇದನ್ನು ಖರೀದಿಸಲು ಉಡುಪಿ, ಮಂಗಳೂರಿನಲ್ಲಿ ವಿಚಾರಿಸಿದರೂ ಸಿಗುತ್ತಿಲ್ಲ. ಶಿವಮೊಗ್ಗದಲ್ಲಿ ಓರ್ವ ಇದನ್ನು ಮಾಡಿಕೊಡುತ್ತಿದ್ದು ಅವರೊಡನೆ ಮಾತನಾಡಲಾಗಿದೆ. ಶಾಸಕ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನಿಧಿಯಿಂದ 2ಲಕ್ಷ ರೂ. ಮಂಜೂರಾಗಿದ್ದು ಆ ಹಣದಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಸಿಲಿಕಾನ್ ಛೇಂಬರ್ ಅನ್ನು ತರಲಾಗುವುದು ಮತ್ತು ಆವರಣಗೋಡೆಯನ್ನು ಪೂರ್ಣಗೊಳಿಸಲಾಗುವುದು.
-ಕೆ.ಸಂಜೀವ ಮೊಗವೀರ, ಅಧ್ಯಕ್ಷರು, ಗ್ರಾ.ಪಂ., ಕೋಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.