ಕೊಂಕಣ ರೈಲ್ವೇ: 31ನೇ ಸ್ಥಾಪನ ದಿನ: ವಿದ್ಯುದೀಕರಣ ಡಿಸೆಂಬರ್‌ಗೆ ಪೂರ್ಣ
Team Udayavani, Oct 18, 2021, 6:33 AM IST
ಉಡುಪಿ: ಕೊಂಕಣ ರೈಲ್ವೇ 30 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ 31ನೇ ಸ್ಥಾಪನ ದಿನವನ್ನು ವರ್ಚುವಲ್ ವಿಧಾನದಲ್ಲಿ ಆಚರಿಸಿತು. ಸಂಸ್ಥೆಯ ಸಿಎಂಡಿ ಸಂಜಯ ಗುಪ್ತ ಅಧ್ಯಕ್ಷತೆ ವಹಿಸಿದ್ದರು. ಕೊಂಕಣ ರೈಲ್ವೇಯ ನಿರ್ದೇಶಕ (ಮಾರ್ಗ ಮತ್ತು ಕಾಮಗಾರಿ) ಸುಭಾಶ್ ಸಿ. ಗುಪ್ತ, ನಿರ್ದೇಶಕ (ಹಣಕಾಸು) ರಾಜೇಶ್ ಎಂ. ಭಾದಂಗ್, ಸಿಎಂ (ಆಡಳಿತ) ನಂದು ತೆಲಂಗ್, ಡೆಪ್ಯುಟಿ ಸಿಪಿಒ ಶೈಲೇಶ್ ಬಾಪಟ್ ಉಪಸ್ಥಿತರಿದ್ದರು.
ರೈಲ್ವೇ ಇಲಾಖೆಯು 2020ರ ಮಾರ್ಚ್‌ನಿಂದ ರಾಷ್ಟ್ರೀಯ ಲಾಕ್‌ಡೌನ್ ಪರಿಣಾಮ ಎಲ್ಲ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಿದ್ದು ಕ್ರಮೇಣ ಹಂತ ಹಂತವಾಗಿ ಓಡಿಸಲಾರಂಭಿಸಿದೆ. ಕೊಂಕಣ ರೈಲ್ವೇಯಲ್ಲಿ ಈಗ 42 ಜೋಡಿ ಎಕ್ಸ್‌ಪ್ರೆಸ್ ಮತ್ತು 5 ಜೋಡಿ ಪ್ರಯಾಣಿಕ ರೈಲುಗಳ ಸೇವೆ ನಡೆಯುತ್ತಿದೆ. ಗಣೇಶ ಚತುರ್ಥಿ ವೇಳೆ 256 ವಿಶೇಷ ರೈಲುಗಳನ್ನು ಓಡಿಸಲಾಯಿತು.
ಒಂದು ವರ್ಷದಲ್ಲಿ ಎಂಟು ಹೊಸ ಕ್ರಾಸಿಂಗ್ ಸ್ಟೇಶನ್ ಮತ್ತು ಎಂಟು ಲೂಪ್‌ಲೈನ್, ರೋಹಾದಿಂದ ವೀರ್ ನಡುವೆ ಹಳಿ ದ್ವಿಗುಣ ಪೂರ್ಣ ಗೊಂಡಿದೆ. ಎಲೆಕ್ಟ್ರಿಫಿಕೇಶನ್ ಕೆಲಸ ಅಂತಿಮ ಹಂತದಲ್ಲಿದ್ದು ಡಿಸೆಂಬರ್ ವೇಳೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ:ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ
ಚೇನಬ್ ಸೇತುವೆ ಸಾಧನೆ
ಜಮ್ಮು ಕಾಶ್ಮೀರದಲ್ಲಿ ಕೈಗೆತ್ತಿಕೊಂಡ ಚೇನಬ್ ಸೇತುವೆ ಯೋಜನೆ ಮುಕ್ತಾಯಗೊಂಡಿರುವುದು ಕೊಂಕಣ ರೈಲ್ವೇ ತಾಂತ್ರಿಕ ಸಾಧನೆಯಾಗಿದೆ. 359 ಮೀ. ಎತ್ತರದಲ್ಲಿ ಇದು ನಿರ್ಮಾಣಗೊಂಡಿದೆ. ನೇಪಾಲ ರೈಲ್ವೇ ಇಲಾಖೆ ವಹಿಸಿಕೊಟ್ಟ ಜಯನಗರ-ಕುರ್ತಾ ರೈಲು ನಿರ್ವಹಣೆ ಕೊಂಕಣ ರೈಲ್ವೇಯ ಮೊದಲ ಅಂತಾರಾಷ್ಟ್ರೀಯ ನಿರ್ವಹಣೆ ಮತ್ತು ವಾಣಿಜ್ಯ ಯೋಜನೆಯಾಗಿದೆ.
ಅಂಕೋಲಾ-ಸುರತ್ಕಲ್ ಹೊಸ ರೋರೋ ಸೇವೆ
ಈಗ ಮಂಗಳೂರು ಬಂದರಿನಿಂದ ಕಲ್ಲಿದ್ದಲು ಸಾಗಣೆ, ಗೋವಾದ ಬಲ್ಲಿ ಕಂಟೈನರ್ ಡಿಪೋದಿಂದ ರಫ್ತು ಕಂಟೈನರ್ ನಿರ್ವಹಣೆ ಕೊಂಕಣ ರೈಲ್ವೇಗೆ ಸಿಕ್ಕಿದೆ. ಅಂಕೋಲಾದಿಂದ ಸುರತ್ಕಲ್ ವರೆಗೆ ಹೊಸ ರೋರೋ ಸೇವೆ ಆರಂಭಗೊಳ್ಳುತ್ತಿದೆ. ಇದರಿಂದ ಕೊಂಕಣ ರೈಲ್ವೇಯ ಆದಾಯ ಹೆಚ್ಚಳವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.