ಶಾಲಾ ಹಂತದಲ್ಲಿ ಕೊಂಕಣಿ ಕಲಿಕೆ: ಡಾ| ಮೋಹನ್‌ ಪೈ ಕರೆ


Team Udayavani, Mar 22, 2021, 1:47 AM IST

ಶಾಲಾ ಹಂತದಲ್ಲಿ ಕೊಂಕಣಿ ಕಲಿಕೆ: ಡಾ| ಮೋಹನ್‌ ಪೈ ಕರೆ

ಉಡುಪಿ: ಕೊಂಕಣಿ ಭಾಷಿಕರು ಶೇ. 99 ಶಿಕ್ಷಿತರಾದರೂ ಕೊಂಕಣಿ ಭಾಷಾ ಸಾಹಿತ್ಯದಲ್ಲಿ ಹಿಂದೆ ಇದ್ದಾರೆ. ಇದನ್ನು ಬಲಪಡಿಸಲು ಶಾಲಾ ಹಂತಗಳಲ್ಲಿಯೇ ಕೊಂಕಣಿ ಭಾಷೆಯನ್ನು ಕಲಿಸುವಂತಾಗಬೇಕು. ಇದಕ್ಕಾಗಿ ಸರಕಾರ ಕೊಂಕಣಿ ಶಿಕ್ಷಕರ ನೇಮಕಕ್ಕೆ ಮುಂದಾಗಬೇಕು ಎಂದು ಕೊಂಕಣಿ ಸಾಹಿತ್ಯ ಸಮ್ಮೇಳನಾಧ್ಯಕ್ಷ, ನಿವೃತ್ತ ವೈದ್ಯಕೀಯ ಪ್ರಾಧ್ಯಾಪಕ ಡಾ| ಕಸ್ತೂರಿ ಮೋಹನ್‌ ಪೈ ಆಶಿಸಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಎರಡು ದಿನಗಳ ಕಾಲ ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಏರ್ಪಡಿಸಿದ ಕೊಂಕಣಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂಗ್ಲಿಷ್‌ಗಿರುವಂತೆ ಕೊಂಕಣಿ ಪಠ್ಯ ಪುಸ್ತಕವೂ ಏಕರೂಪತೆಯನ್ನು (ಸ್ಟಾಂಡರ್ಡ್‌) ಹೊಂದಿರಬೇಕು. ಕೊಂಕಣಿ ಭಾಷೆಯನ್ನು ಶಾಲಾ ಹಂತಗಳಲ್ಲಿ ಬೆಳೆಸಬೇಕು. ಕೊಂಕಣಿ ಶಿಕ್ಷಕರ ನೇಮಕಕ್ಕೆ ಸರಕಾರ ಕ್ರಮ ವಹಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಡಾ| ಮೋಹನ್‌ ಪೈ ಹೇಳಿದರು.

ಸಮ್ಮೇಳನದ ಯಶಸ್ವಿಗೆ ಸ್ಥಳೀಯ ಸದಸ್ಯರು, ಸಮ್ಮೇಳನ ಸಮಿತಿಯು ವಿಶೇಷ ಪರಿಶ್ರಮ ವಹಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ| ಕೆ. ಜಗದೀಶ ಪೈ ಹೇಳಿದರು.

ಉಡುಪಿ ಧರ್ಮಪ್ರಾಂತದ ಬಿಷಪ್‌ ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅವರು ಅಕಾಡೆಮಿಯು ಭಾಷೆ, ಸಂಸ್ಕೃತಿಗೆ ಉತ್ತೇಜನ ನೀಡುತ್ತಿದೆ. ವಿಶೇಷ ಆಚಾರ ವಿಚಾರ, ಮೌಲ್ಯಗಳನ್ನು ಹೊಂದಿದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸಂಸ್ಕೃತಿಯ ಬೇರುಗಳನ್ನುಹೊಂದಿದ ಭಾಷೆ ಕೊಂಕಣಿಯಾಗಿದೆ. ಈಗ ಅಮೆರಿಕ ಸಹಿತ ವಿದೇಶಗಳಲ್ಲೂ ಕೊಂಕಣಿ ಭಾಷಿಗರ ಸಂಘಟನೆಗಳಿವೆ ಎಂದರು.

ಪುರಾತನವಾದ ಕೊಂಕಣಿ ಭಾಷೆಯ ಸಂಸ್ಕೃತಿಯನ್ನು ಉಳಿಸಲು ಸಮ್ಮೇಳನ ಕಾಳಜಿ ವಹಿಸಿದೆ ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಶ್ಲಾ ಸಿದರು.

ಚೀನದವರು ಚೀನೀ ಭಾಷೆಯ ಮೂಲಕ ಜಾಗತಿಕ ಮಟ್ಟಕ್ಕೆ ಏರಿದರು.ಮಲ ಯಾಳದವರು ಶಿಕ್ಷಿತರಾದರೂ ಮಾತೃಭಾಷೆಯನ್ನು ಬಿಟ್ಟುಕೊಡುವು ದಿಲ್ಲ. ಅದೇ ರೀತಿ ಕೊಂಕಣಿ ಭಾಷಿಕರು ತಮ್ಮ ಭಾಷೆಯನ್ನು ಬಿಟ್ಟು ಕೊಡ ಬಾರದು. ನವಾಯತ್‌ ಮುಸ್ಲಿಮರ ಭಾಷೆಯೂ  ಕೊಂಕಣಿ ಆಗಿದೆ ಎಂದು ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ನಕ್ವಾ ಯಾಹ್ಯಾ ಹೇಳಿದರು.

ಭಾಷಾ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಡಬೇಕಾಗಿದೆ. ವಿಶ್ವ ಕೊಂಕಣಿ ಕೇಂದ್ರದ ಮೂಲಕ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಸಮ್ಮೇಳನದ ಗೌರವ ಸಲಹೆಗಾರ ಡಾ| ನಂದಗೋಪಾಲ ಶೆಣೈ ಹೇಳಿದರು. ಉದ್ಯಮಿಗಳಾದ ಮಂಗಳೂರಿನ ನಿಶಾಂತ್‌ ಶೇಟ್‌, ಹುಬ್ಬಳ್ಳಿಯ ಸತೀಶ್‌ ಶೇಜವಾಡ್ಕರ್‌ ಶುಭ ಕೋರಿದರು. ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್‌, ಉದ್ಯಮಿ ವಿಶ್ವನಾಥ ಶೆಣೈ, ಮಂಗಳೂರು ಪೂರ್ಣಾ

ನಂದ ಪ್ರತಿಷ್ಠಾನದ ಡಿ. ರಮೇಶ ನಾಯಕ್‌, ಅಕಾಡೆಮಿ ಸದಸ್ಯೆ ಪೂರ್ಣಿಮಾ ಸುರೇಶ ನಾಯಕ್‌, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಅಮೃತ್‌ ಶೆಣೈ, ಕಾರ್ಯಾಧ್ಯಕ್ಷ ಮಹೇಶ ಠಾಕೂರ್‌, ಉಪಾಧ್ಯಕ್ಷ ಗಣೇಶ ನಾಯಕ್‌ ಕಲ್ಮರ್ಗಿ, ಪೆರ್ಣಂಕಿಲ ಶ್ರೀಶ ನಾಯಕ್‌, ಅಕಾಡೆಮಿ ರಿಜಿಸ್ಟ್ರಾರ್‌ ಮನೋಹರ ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮೇಳನದ ಸಲಹೆಗಾರ ಕುಯಿ ಲಾಡಿ ಸುರೇಶ್‌ ನಾಯಕ್‌ ಸ್ವಾಗತಿಸಿ, ಸಾಣೂರು ನರಸಿಂಹ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು.  ಮುಕಾರಿ ವರಸ್‌  ಕೆಡ್ಯಾಲಾಂತು ಸಮ್ಮೇಳನ್‌ ಮುಕಾರಿ ವರಸ್‌ ಕೊಡ್ಯಾಲಾಂತು ಕೊಂಕಣಿ ಸಾಹಿತ್ಯ ಸಮ್ಮೇಳನ್‌ ಆಯೋಜನ್‌ ಕೊರ್ಚಾಕ್‌ ಮಣಿಪಾಲ್‌ ಕೊಂಕಣಿ ಸಾಹಿತ್ಯ ಸಮ್ಮೇಳನ್‌ ನಿರ್ಣಯ್‌ ಗೆತ್ಲಾ… (ಮುಂದಿನ ವರ್ಷ ಮಂಗಳೂರಿನಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಮಣಿಪಾಲದ ಸಮ್ಮೇಳನ ನಿರ್ಣಯ

ವನ್ನು ಅಂಗೀಕರಿಸಿದೆ) ಸಾಹಿತ್ಯ ಸಮ್ಮೇಳನ ಅಂಗೀಕರಿಸಿದ ನಿರ್ಣಯ

ಗಳನ್ನು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಕೆ.ಜಗದೀಶ ಪೈ “ಜೈ ಕೊಂಕಣಿ’ ಉದ್ಗಾರದ ಮೂಲಕ ಪ್ರಕಟಿಸಿದರು.

ನಿರ್ಣಯಗಳು :

ಶಾಲೆಗಳಲ್ಲಿ ಮಾತೃಭಾಷೆಯಾಗಿ ಕೊಂಕಣಿ ಕಲಿಕೆ

 ಸ್ನಾತಕೋತ್ತರ ಸ್ತರದಲ್ಲಿ ಕೊಂಕಣಿ ಅಧ್ಯಯನ ವಿಷಯ, ಶಿಕ್ಷಕರ ನೇಮಕ

 42 ಭಾಷಿಕರನ್ನು ಒಟ್ಟಿಗೆ ತರುವ ಕಾರ್ಯಕ್ರಮ ಆಯೋಜನೆ

 ಮಂಗಳೂರಿನಲ್ಲಿ ಕೊಂಕಣಿ ಅಧ್ಯಯನ ಮತ್ತು ಸಂಶೋಧನ ಕೇಂದ್ರ ತೆರೆಯಲು ಹೆಚ್ಚುವರಿ 3 ಕೋ.ರೂ. ಅನುದಾನ

ಅಕಾಡೆಮಿ ಅನುದಾನ 2 ಕೋ.ರೂ.ಗೆ ಏರಿಕೆ

ಸಮ್ಮೇಳನಾಧ್ಯಕ್ಷರ  1968ರ ನೆನಪು :

ನಾನು ಎಂಬಿಬಿಎಸ್‌ ಶಿಕ್ಷಣವನ್ನು ಮಣಿಪಾಲದಲ್ಲಿ ಪಡೆಯುತ್ತಿರುವಾಗ (1968) ಮಣಿಪಾಲದ ಗೀತಾ ಮಂದಿರದಲ್ಲಿದ್ದ ಡಾ| ಟಿಎಂಎ ಪೈಯವರು ಯಾವುದೇ ಸಮುದಾಯದ ಕೊಂಕಣಿ ಭಾಷಿಗರಿದ್ದರೆ ಅವರನ್ನು ವಿಚಾರಿಸಿ ವಿಶೇಷ ಆಸ್ಥೆ ತೋರಿಸುವ ಮೂಲಕ “ಕೊಂಕಣಿಗರೆಲ್ಲ ಒಂದು’ ಎಂಬ ಸಂದೇಶ ಸಾರುತ್ತಿದ್ದರು. ಈಗ ಅದರ ಪಕ್ಕದಲ್ಲಿಯೇ ಆರ್‌ಎಸ್‌ಬಿ ಸಭಾಭವನ ಎದ್ದು ನಿಂತಿರುವುದು ಸಂತೋಷ ಎಂದು ಡಾ| ಕಸ್ತೂರಿ ಮೋಹನ್‌ ಪೈ ಹೇಳಿದರು.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.