ಕೋಟ ಹೋಬಳಿ ವ್ಯಾಪ್ತಿ: ವ್ಯಾಪಕ ಮಳೆ ಹಾನಿ
Team Udayavani, Jul 11, 2019, 5:05 AM IST
ಕೋಟ: ಮಂಗಳವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಗೆ ಕೋಟ ಹೋಬಳಿಯಲ್ಲಿ ವ್ಯಾಪಕ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಮೆಸ್ಕಾಂನ ಸಾಹೇಬ್ರಕಟ್ಟೆ ವಲಯ ವ್ಯಾಪ್ತಿಯಲ್ಲಿ 12 ಹಾಗೂ ಸಾಸ್ತಾನದಲ್ಲಿ 7, ಕೋಟದಲ್ಲಿ 8 ಸೇರಿದಂತೆ ಒಟ್ಟು 27ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ ಹಾಗೂ 11ಕ್ಕೂ ಹೆಚ್ಚು ಮನೆ, ಕೊಟ್ಟಿಗೆಗೆ ಹಾನಿಯಾಗಿದೆ.
ವಿದ್ಯುತ್ ಕಂಬಕ್ಕೆ ಹಾನಿ
ಅಚ್ಲಾಡಿಯ ರಬ್ಬರ್ ತೋಟ ಸಮೀಪ 6 ಹಾಗೂ ಗರಿಕೆಮಠ, ಅಚ್ಲಾಡಿ ಗುಡ್ಡಿ ಸೇರಿದಂತೆ 3 ಮತ್ತು ಕಳ್ಳಾಡಿಯಲ್ಲಿ 3 ವಿದ್ಯುತ್ ಕಂಬಗಳು ಸೇರಿದಂತೆ ಒಟ್ಟು 12 ಕಂಬಗಳು ಧರೆಗುರುಳಿವೆ.
ಸಾಸ್ತಾನದ ಯಕ್ಷಿಮಠ, ದಂಡೆ ಬೆಟ್ಟು, ಪಾಂಡೇಶ್ವರ, ಮಾಬುಕಳ, ಕೋಡಿರಸ್ತೆ, ಹಪ್ಪಳಬೆಟ್ಟು, ಹಂಗಾರಕಟ್ಟೆ ಸೇರಿದಂತೆ 7 ಕಂಬಗಳು ಮತ್ತು ಕೋಟ ವ್ಯಾಪ್ತಿಯ 8 ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
11 ಮನೆ, ಕೊಟ್ಟಿಗೆಗೆ ಹಾನಿ
ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಗರಿಕೆಮಠದ ಬಾಬು, ಅನಿತಾ, ಪದ್ದು, ರಾಧಾ, ಚಂದ್ರ ಕುಮಾರ್, ರತ್ನಾ, ಲಲಿತಾ, ಮುತ್ತು ಹಾಗೂ ತಂಗಾಡಿಯ ಸಂತೋಷ ಅವರ ಮನೆಯ ಮೇಲೆ ಮರಬಿದ್ದು ಒಟ್ಟು 1 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಹಾಗೂ ಅಚ್ಲಾಡಿಯ ರಮಣಿ, ಗಿಳಿಯಾರಿನ ಸಂಜೀವ ಪೂಜಾರಿಯವರ ಮನೆ ಮತ್ತು ಗುಂಡ್ಮಿ ಮಡಿವಾಳರಕೇರಿ ನಾರಾಯಣ ಮಡಿವಾಳ ಅವರ ಶೌಚಾಲಯದ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ಶಿರಿಯಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾನಿಯಾದ ಪ್ರದೇಶಗಳಿಗೆ ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಸದಸ್ಯ ಗುಂಡು, ಕಾರ್ಯದರ್ಶಿ ಆನಂದ ನಾಯ್ಕ, ಗ್ರಾಮಕರಣಿಕ ಕೃಷ್ಣ ಮರಕಾಲ ಹಾಗೂ ವಿ.ಎ. ಶರತ್ ಶೆಟ್ಟಿ ಭೇಟಿ ನೀಡಿ ಹಾನಿಯ ಕುರಿತು ಪರಿಶೀಲಿಸಿದರು. ಗಿಳಿಯಾರಿನಲ್ಲಿ ಹಾನಿಗೊಂಡ ಪ್ರದೇಶಕ್ಕೆ ವಿ.ಎ. ಚೆಲುವರಾಜು ಭೇಟಿ ನೀಡಿದರು ಮತ್ತು ಕೋಟ ಕಂದಾಯ ಕಚೇರಿಯ ಉಪತಹಶೀಲ್ದಾರ ಚಂದ್ರಹಾಸದ ಬಂಗೇರ ವರದಿ ಪಡೆದ ಮೇಲಾಧಿಕಾರಿಗಳಿಗೆ ರವಾನಿಸಿದರು.
ವಿದ್ಯುತ್ ಕಟ್, ಮೆಸ್ಕಾಂ ಮಿಂಚಿನ ಕಾರ್ಯಾಚರಣೆ
ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಹಾನಿಯಾಗಿದ್ದರಿಂದ ಮಂಗಳ ವಾರ ಸಂಜೆ 7ಗಂಟೆಯಿಂದ ಅಪರಾಹ್ನ 12ರ ತನಕ ವಿದ್ಯುತ್ ವ್ಯತ್ಯಯವಾಗಿತ್ತು. ಬೆಳಗ್ಗೆ ಬೇಗನೆ ಕಾರ್ಯಚರಣೆ ಆರಂಭಿಸಿದ ಮೆಸ್ಕಾಂ ಸಿಬಂದಿ ಮರಗಳು ಹಾಗೂ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸಿ ತ್ವರಿತಗತಿಯಲ್ಲಿ ವಿದ್ಯುತ್ ಸಂಪರ್ಕ ನೀಡಲು ನಿರಂತರವಾಗಿ ಶ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.