Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
ಕುಂದಾಪುರ-ತಲಪಾಡಿ ರಾ. ಹೆದ್ದಾರಿ ನಿರ್ವಹಣೆಯಲ್ಲಿ ಸಮಸ್ಯೆಗಳ ಸರಮಾಲೆ; ಹೈವೇ ಕ್ಯಾಂಟೀನ್ ಬಂದ್, ಶೌಚಾಲಯಗಳಿಲ್ಲ; ಅಡಚಣೆರಹಿತ ಸಂಚಾರಕ್ಕೆ ಕುತ್ತು
Team Udayavani, Nov 28, 2024, 3:17 PM IST
ಕೋಟ: ಕುಂದಾಪುರ- ತಲಪಾಡಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಲ್ಲಿ ಸಾಲು-ಸಾಲು ಸಮಸ್ಯೆಗಳು ಕಂಡು ಬರುತ್ತಿವೆ. ಹೈವೇ ಕ್ಯಾಂಟೀನ್ ಸೌಲಭ್ಯ, ಬೀದಿ ದೀಪ ನಿರ್ವಹಣೆ, ಅಂಗವಿಕಲರಿಗೆ ಶೌಚಾಲಯ ವ್ಯವಸ್ಥೆ ಹೀಗೆ ಹಲವಾರು ಬಗೆಯ ಸೌಕರ್ಯ ನೀಡುವಲ್ಲಿ ಕಂಪೆನಿ ಹಿಂದುಳಿದಿದ್ದು ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರಿಗೆ ಕುಡಿಯಲು ನೀರು, ಲಘು ಆಹಾರಗಳು ಸುಲಭವಾಗಿ ಸಿಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲ ಟೋಲ್ ಪ್ಲಾಜಾದಿಂದ 200-250 ಮೀಟರ್ ದೂರದೊಳಗೆ ಮಿನಿ ಕ್ಯಾಂಟೀನ್‌ಗಳು ಸೇವೆ ನೀಡಬೇಕು ಎಂದು 2022ರಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿಯಮ ರೂಪಿಸಿತ್ತು. ಅದರಂತೆ ಹೈವೇ ನೆಸ್ಟ್ ಎಂಬ ಮಿನಿ ಕ್ಯಾಂಟೀನ್‌ಗಳು ಕಾರ್ಯಾರಂಭಿಸಿದ್ದವು. ಆದರೆ ಇದೀಗ ಐದಾರು ತಿಂಗಳಿಂದ ಉಡುಪಿ, ದ.ಕ. ಉಭಯ ಜಿಲ್ಲೆಗಳಲ್ಲಿ ಈ ಕ್ಯಾಂಟೀನ್‌ಗಳ ಸ್ಥಗಿತಗೊಂಡಿದೆ. ಹೆದ್ದಾರಿಯಲ್ಲಿ ರಾತ್ರಿ 11 ಗಂಟೆ ವೇಳೆಗೆ ಎಲ್ಲ ಕ್ಯಾಂಟೀನ್, ಅಂಗಡಿಗಳು ಬಾಗಿಲು ಮುಚ್ಚುವುದರಿಂದ ಪ್ರಯಾಣಿಕರಿಗೆ ಆಹಾರ-ನೀರಿಗೆ ತೊಂದರೆ ಉಂಟಾಗುತ್ತದೆ.
ಈ ಬಗ್ಗೆ ಕೇಳಿದರೆ ಈ ಕ್ಯಾಂಟೀನ್‌ಗಳು ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದ ಮೂಲಕವೇ ನಿರ್ವಹಣೆಗೊಳ್ಳುತ್ತದೆ. ಹೀಗಾಗಿ ಇದು ಕಾರ್ಯ ಸ್ಥಗಿತಗೊಂಡಿರುವ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ರಸ್ತೆ ನಿರ್ವಹಣೆ ಕಂಪೆನಿಯವರು ಹೇಳುತ್ತಾರೆ. ಪ್ರಯಾಣಿಕರಿಗೆ ಹೈವೇ ನೆಸ್ಟ್ ಕ್ಯಾಂಟೀನ್ ಅಗತ್ಯವಿದ್ದು ಆದಷ್ಟು ಬೇಗ ಪುನಃ ಆರಂಭಗೊಳ್ಳಬೇಕಿದೆ.
ನೀರಿನ ಎಟಿಎಂ, ಟಾಯ್ಲೆಟ್ ಬೇಕು
ಹೈವೇ ಕ್ಯಾಂಟೀನ್‌ಗಳ ಅಕ್ಕ-ಪಕ್ಕದಲ್ಲೇ ನೀರಿನ ಎ.ಟಿ.ಎಂ. ಇರಬೇಕು. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಮತ್ತು ಟೋಲ್ ಪ್ಲಾಜಾದ ಎರಡೂ ಕಡೆ ಕ್ಯಾಂಟೀನ್ ಇದ್ದು ಇದರ ಪಕ್ಕದಲ್ಲೇ ಶೌಚಾಲಯವಿರಬೇಕು. ವಿಕಲಚೇತನರು ಶೌಚಾಲಯಕ್ಕೆ ಹೋಗಿ ಬರುವಂತೆ ವ್ಯವಸ್ಥೆ ಮಾಡಿರಬೇಕು ಎನ್ನುವ ನಿಯಮವಿದೆ. ಆದರೆ ಎಲ್ಲ ಕಡೆಗಳಲ್ಲಿ ರಸ್ತೆಯ ಒಂದು ಕಡೆಯಲ್ಲಿ ಮಾತ್ರ ಶೌಚಾಲಯ ಕಂಡುಬರುತ್ತದೆ. ಅಲ್ಲಿ ಕೂಡ ವಿಕಲಚೇತನರಿಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ.
ಹಲವು ಕಡೆ ಬಾಯ್ದೆರೆದ ರಸ್ತೆಗಳು
ವಾಹನಕ್ಕೆ ಟೋಲ್ ಪಾವತಿಸಿದ ಅನಂತರ ಅಡಚಣೆ ರಹಿತ ಸಂಚಾರಕ್ಕೆ ಪೂರಕವಾದ ರಸ್ತೆ ವ್ಯವಸ್ಥೆ ಇರಬೇಕು ಎನ್ನುವ ನಿಯಮವಿದೆ. ಆದರೆ ಹೆದ್ದಾರಿಯಲ್ಲಿ ಸಾಸ್ತಾನದಿಂದ ಕುಂದಾಪುರ ತನಕ ರಸ್ತೆಗಳು ಹಲವು ಕಡೆ ಬಾಯ್ದೆರೆದಿದ್ದು ನಿಧಾನವಾಗಿ ಮುಂದೆ ಸಾಗಬೇಕಾದ ಪರಿಸ್ಥಿತಿ ಇದೆ. ಬೀದಿ ದೀಪ ಹಾಳಾದರೆ 24 ಗಂಟೆಯೊಳಗೆ ಅದರ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎನ್ನುವ ನಿಯಮವಿದೆ. ಅದೂ ಕೂಡ ಪಾಲನೆಯಾಗುತ್ತಿಲ್ಲ.
ಹೆದ್ದಾರಿಯಲ್ಲಿ ವಾಹನಗಳು ಕೆಟ್ಟು ನಿಂತರೆ ಅದನ್ನು ಬದಿಗೆ ಸರಿಸಲು ಟೋಯಿಂಗ್ ವಾಹನದ ಸೌಲಭ್ಯವಿರಬೇಕು. ಆದರೆ ದೊಡ್ಡ ವಾಹನಗಳು ಕೆಟ್ಟು ನಿಂತರೆ ಟೋಯಿಂಗ್ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ ಎನ್ನುವ ದೂರುಗಳಿದೆ.
ರಾತ್ರಿ 11 ಗಂಟೆ ಬಳಿಕ ಪ್ರಯಾ ಣಿಕರಿಗೆ ಆಹಾರ- ನೀರಿಗೆ ತೊಂದರೆ
ಈಗಾಗಲೇ ಸೂಚನೆ ನೀಡಿದ್ದೇನೆ
ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಹೆದ್ದಾರಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ, ಸಂಸದರು
ಕ್ಯಾಂಟೀನ್ ಟೆಂಡರ್ ಹಂತದಲ್ಲಿದೆ
ಹೈವೇ ಕ್ಯಾಂಟೀನ್ ಟೆಂಡರ್ ಹಂತದಲ್ಲಿದೆ. ಡಾಮರು ಮಿಶ್ರಣ ಘಟಕ ಮಳೆಗಾಲದ ಕಾರಣಕ್ಕೆ ಸ್ಥಗಿತಗೊಂಡಿದ್ದರಿಂದ ರಸ್ತೆ ದುರಸ್ತಿ ತಡವಾಯಿತು. ಶೀಘ್ರವಾಗಿ ದುರಸ್ತಿ ಆರಂಭಿಸಲಾಗುವುದು. ಅಂಗವಿಕಲರ ಶೌಚಾಲಯ, ಎರಡೂ ಕಡೆ ಶೌಚಾಲಯ ಮೊದಲಾದ ನಿಯಮ 2020ರಲ್ಲಿ ರೂಪಿಸಲಾಗಿದ್ದು, ಈ ರಸ್ತೆಯ ಒಡಂಬಡಿಕೆ 2010ರಲ್ಲೇ ನಡೆದಿರುವುದರಿಂದ ಈ ಸೌಲಭ್ಯಗಳು ಒಳಗೊಂಡಿಲ್ಲ.
-ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.