ಕೋಟ ಮೆಸ್ಕಾಂ ಉಪವಿಭಾಗ ಜನಸಂಪರ್ಕ ಸಭೆ
Team Udayavani, Oct 26, 2017, 7:10 AM IST
ಕೋಟ: ಮೆಸ್ಕಾಂ ಕೋಟ ಉಪವಿಭಾಗ ವ್ಯಾಪ್ತಿಯ ಗ್ರಾಹಕರ ಜನಸಂಪರ್ಕ ಸಭೆ ಇಲಾಖೆಯ ಉಡುಪಿ ಜಿಲ್ಲಾ ಅಧೀಕ್ಷಕ ಶರತ್‌ಚಂದ್ರ ಅವರ ಅಧ್ಯಕ್ಷತೆಯಲ್ಲಿ ಕೋಟ ಉಪವಿಭಾಗ ಕಚೇರಿಯಲ್ಲಿ ಅ.25ರಂದು ನಡೆಯಿತು. ಈ ಸಂದರ್ಭ ಮೆಸ್ಕಾಂಗೆ ಸಂಬಂಧಿಸಿ ಗ್ರಾಹಕರ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
24 ಗಂಟೆ ಸೇವೆಗೆ ಬೇಡಿಕೆ
ಉಪವಿಭಾಗದಲ್ಲಿ ದಿನದ 24ಗಂಟೆ ಸಾರ್ವಜನಿಕರಿಗೆ ಸೇವೆ ನೀಡುವುದಾಗಿ ತಿಳಿಸಲಾಗಿದೆ ಜತೆಗೆ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಆದರೆ ರಾತ್ರಿಪಾಳಿಯಲ್ಲಿ ಸಿಬಂದಿಗಳ ಕೊರತೆ ಇರುವುದರಿಂದ ರಾತ್ರಿ 10ಗಂಟೆಯ ಅನಂತರ ಅವಘದ ನಡೆದಾಗ ಸಮರ್ಪಕ ಸೇವೆ ದೊರಕುತ್ತಿಲ್ಲ. ಆದ್ದರಿಂದ ಅಗತ್ಯ ಸಿಬಂದಿಗಳನ್ನು ನೇಮಕ ಮಾಡಿ ದಿನದ 24ಗಂಟೆ ಸೇವೆ ಸಿಗುವಂತೆ ಮಾಡಬೇಕು ಎಂದು ಗ್ರಾಹಕರ ಪರವಾಗಿ ಕೋಟ ಶ್ರೀಕಾಂತ್ ಶೆಣೈ ವಿನಂತಿಸಿದರು.
ಎ.ಟಿ.ಪಿ. ಕೇಂದ್ರ ಸ್ಥಾಪನೆಗೆ ಬೇಡಿಕೆ
ದಿನದ 24ಗಂಟೆ ಬಿಲ್ ಪಾವತಿಗೆ ಅನುಕೂಲವಾಗುವಂತೆ ಯಂತ್ರಚಾಲಿತ ಎ.ಟಿ.ಪಿ. ಯಂತ್ರವನ್ನು ಕೋಟದಲ್ಲಿ ಅಳವಡಿಸಬೇಕು. ಇದರಿಂದ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಅನುಕೂಲವಾಗುತ್ತದೆ ಎಂದು ಗ್ರಾಹಕರು ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಅಧೀಕ್ಷಕರು ತಿಳಿಸಿದರು.
ತಿಂಗಳಿಗೊಮ್ಮೆ ವಿದ್ಯುತ್ ಗುತ್ತಿಗೆದಾರರ ಸಭೆ ನಡೆಸಿ : ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಹಾಗೂ ಹೊಸ ಆದೇಶಗಳ ಕುರಿತು ವಿಚಾರ ವಿನಿಮಯ ನಡೆಸುವ ಸಲುವಾಗಿ ಪ್ರತಿ ತಿಂಗಳು ಬ್ರಹ್ಮಾವರ ವಿಭಾಗ ಕಚೇರಿಯಲ್ಲಿ ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಸಭೆ ನಡೆಸಬೇಕು ಎಂದು ವಿದ್ಯುತ್ ಗುತ್ತಿಗೆದಾರರು ಬೇಡಿಕೆ ಸಲ್ಲಿಸಿದರು. ಈ ಕುರಿತು ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಕಂದಾಯ ವಿಭಾಗ ಆರಂಭಿಸದ ಕುರಿತು ಅಸಮಾಧಾನ : ಕೋಟದಲ್ಲಿ ಕಂದಾಯ ವಿಭಾಗ ಆರಂಭಿಸುವಂತೆ ಹಲವು ಸಮಯದಿಂದ ಬೇಡಿಕೆ ಸಲ್ಲಿಸಿದ್ದರು ಇದುವರೆಗೆ ಸ್ಥಾಪನೆಯಾಗದ ಕುರಿತು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು. ತಾಂತ್ರಿಕ ಸಮಸ್ಯೆಯಿಂದ ಕಂದಾಯ ವಿಭಾಗ ಸ್ಥಾಪನೆ ವಿಳಂಬವಾಗಿದ್ದು ಈ ಕುರಿತು ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೋಟದ ಬಿಲ್ ಪಾವತಿ ಕೇಂದ್ರದಲ್ಲಿ ಅಪರಾಹ್ನ ಕೂಡ ಬಿಲ್ ಪಡೆಯುವ ವ್ಯವಸ್ಥೆಯಾಗಬೇಕು ಎನ್ನುವ ಬೇಡಿಕೆ ಕೇಳಿ ಬಂತು.
ಡಿಸೆಂಬರ್ ಅಂತ್ಯದೊಳಗೆ ದೀನ್‌ದಯಾಳ್ ಯೋಜನೆ: ಪಂಡಿತ್ ದೀನ್‌ದಯಾಳ್ ಉಪಾಧ್ಯಾ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದವರಿಗೆ ಇದುವರೆಗೆ ಸಂಪರ್ಕ ದೊರೆತಿಲ್ಲ ಎಂದು ವಡ್ಡರ್ಸೆ ಗ್ರಾ.ಪಂ. ಸದಸ್ಯ ಚಂದ್ರಶೇಖರ ಶೆಟ್ಟಿ ತಿಳಿಸಿದರು. ದೀನ್‌ದಯಾಳ್ ಯೋಜನೆಗೆ ತಾಂತ್ರಿಕ ಸಮಸ್ಯೆಯಿಂದಾಗಿ ತಂತಿ ಅಳವಡಿಕೆಗೆ ಅನುಮತಿ ದೊರೆತಿಲ್ಲ. ಡಿಸೆಂಬರ್ ಅಂತ್ಯದೊಳಗೆ ಯೋಜನೆಯ ಪ್ರಯೋಜನ ಫಲಾನುಭವಿಗಳಿಗೆ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೋಟ ಗ್ರಾ.ಪಂ. ಸದಸ್ಯರಾದ ಸಂತೋಷ ಪ್ರಭು, ಅಜಿತ್ ಕೋಟ, ಪಾಂಡು ಅವರು ಕೋಟ ವ್ಯಾಪ್ತಿಯಲ್ಲಿನ ವಿವಿಧ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಸೆಳೆದರು ಹಾಗೂ ಕಾವಡಿ ಪಡುಮಾನಂಬಳ್ಳಿಯಲ್ಲಿನ ವಿದ್ಯುತ್ ತಂತಿ ಸಮಸ್ಯೆ ಸಭೆಯಲ್ಲಿ ಪ್ರಸ್ತಾವವಾಯಿತು. ಬಿ.ಪಿ.ಎಲ್. ಕಾರ್ಡ್ ಇಲ್ಲದವರು ವಿದ್ಯುತ್ ಸಂಪರ್ಕ ಪಡೆಯಲು ಅನರ್ಹರಲ್ಲ. ಕಾರ್ಡ್‌ಗೆ ಅರ್ಜಿಸಲ್ಲಿಸಿದ ಪ್ರತಿಯನ್ನು ಹಾಜರುಪಡಿಸಿದರು ಸಂಪರ್ಕ ಕಲ್ಪಿಸುವುದಾಗಿ ಅಧೀಕ್ಷಕರು ತಿಳಿಸಿದರು.
ಕೋಟ ಉಪವಿಭಾಗದ ಮುಖ್ಯಸ್ಥ ಪ್ರತಾಪ್‌ಚಂದ್ರ ಹಾಗೂ ಮೆಸ್ಕಾಂ ಅಧಿಕಾರಿಗಳಾದ ಗುರುಪ್ರಸಾದ್, ವೈಭವ ಶೆಟ್ಟಿ ಹಾಗೂ ಶರಣಪ್ಪ ಮತ್ತು ವಿದ್ಯುತ್ ಗುತ್ತಿಗೆದಾರರು, ಗ್ರಾಹಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.