ಅಪರಿಚಿತ ವಾಹನ ಢಿಕ್ಕಿಯಾಗಿ ರಸ್ತೆಯಲ್ಲಿ ಮಲಗಿದ್ದ ಹಸು ಸಾವು : ಸಿ.ಸಿ.ಟಿವಿಯಲ್ಲಿ ಸೆರೆ
Team Udayavani, Jul 5, 2021, 5:19 PM IST
ಸಿ.ಸಿ.ಟಿವಿ ದೃಶ್ಯ
ಕೋಟ : ಬ್ರಹ್ಮಾವರ- ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಯಡ್ತಾಡಿ ಸೊಸೈಟಿ ಬಳಿ ರಸ್ತೆಯ ಮೇಲೆ ಮಲಗಿದ್ದ ಎರಡು ಹಸುಗಳಿಗೆ ಅಪರಿಚಿತ ವಾಹನವೊಂದು ಇಂದು (ಸೋಮವಾರ, ಜುಲೈ 5) ಬೆಳಗಿನ ಜಾವ ಢಿಕ್ಕಿ ಹೊಡೆದು ಪರಾರಿಯಾಗಿದ್ದು ಅಪಘಾತದ ತೀವೃತೆಗೆ ಹೆಣ್ಣು ಹಸು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಡು ಹಸು ಗಂಭೀರವಾಗಿ ಗಾಯಗೊಂಡಿದೆ.
ಇದನ್ನೂ ಓದಿ : ಜನರಿಗೂ ಮುನನವೇ ಸಾರ್ವಜನಿಕರ ಖರೀದಿಗೆ ಎಲ್ ಐ ಸಿ ಷೇರು ಮುಕ್ತ..?
ರಸ್ತೆ ಮಧ್ಯ ಮಲಗಿದ್ದು ಹಸುಗಳನ್ನು ಚಾಲಕ ಗಮನಿಸದೆ ನೇರವಾಗಿ ಢಿಕ್ಕಿ ಹೊಡೆದಿದ್ದಾನೆ. ಮೃತಪಟ್ಟ ಹಸುವನ್ನು ಊರಿನವರ ಸಹಕಾರದಿಂದ ಧಪನ್ ಮಾಡಲಾಯಿತು. ನಾಲ್ಕು ಕಾಲು ಮತ್ತು ದೇಹದ ವಿವಿಧ ಭಾಗಕ್ಕೆ ಗಂಭೀರ ಗಾಯಗೊಂಡ ಗಂಡು ಕರುವಿಗೆ ಸಾಹೇಬ್ರಕಟ್ಟೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್ ಚಿಕಿತ್ಸೆ ನೀಡಿದ್ದಾರೆ.
ಅಪಘಾತದ ವೀಡಿಯೋ ಸ್ಥಳೀಯ ಸಹಕಾರಿ ಕೇಂದ್ರದ ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದ್ದು ಮನಕಲುಕುವಂತಿದೆ.
ಇದನ್ನೂ ಓದಿ : ಬೆಳಪು : ಆಕ್ಸಿಜನ್ ಘಟಕಕ್ಕೆ ಸಚಿವ ಜಗದೀಶ್ ಶೆಟ್ಟರ್ ಭೇಟಿ, ಪರಿಶೀಲನೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.