ಸೋರುವ ಕಟ್ಟಡ: ಆರಕ್ಷಕರಿಗೇ ರಕ್ಷಣೆ ಇಲ್ಲ


Team Udayavani, Jun 25, 2018, 6:00 AM IST

kota-police-home.jpg

ಕೋಟ: ಮಳೆಗಾಲ ಬಂತೆಂದರೆ ಕೋಟ ಪೊಲೀಸ್‌ ಠಾಣೆ ಪರಿಸ್ಥಿತಿ ಅಸಹನೀಯವಾಗುತ್ತದೆ. ಇಲ್ಲಿನ ಠಾಣೆಯ ಕಟ್ಟಡ ಶಿಥಿಲಗೊಂಡು ಸೋರುವ ಸಮಸ್ಯೆ ಒಂದು ಕಡೆಯಾದರೆ, ಕರ್ತವ್ಯ ಮುಗಿಸಿ ಪೊಲೀಸರು ವಸತಿಗೆ ತೆರಳಿದರೆ ಅಲ್ಲೂ ವಾಸಿಸುವುದು ಸಮಸ್ಯೆಯಾಗಿದೆ.
  
ಹಳೆಯ ಕಟ್ಟಡ 
ಕೋಟ ಪೊಲೀಸ್‌ ಠಾಣೆ ಮೊದಲು ಮಣೂರಿನಲ್ಲಿ  ಲಕ್ಷ್ಮೀನಾರಾಯಣ ಹೊಳ್ಳ ಎನ್ನುವವರ ಖಾಸಗಿ ಜಾಗದಲ್ಲಿತ್ತು. ಅನಂತರ ಹೊಳ್ಳರು ಮಣೂರಿನ ಜಾಗವನ್ನು ವಾಪಸು ಪಡೆಯಲು ಹಳೆ ಮನೆಯ ಸಾಮಗ್ರಿ ಬಳಸಿ ಕೋಟ ಸರಕಾರಿ ಜಾಗದಲ್ಲಿ ಠಾಣೆ ನಿರ್ಮಿಸಿದರು. 1996ರಲ್ಲಿ ಠಾಣೆಯನ್ನು  ಈ ಕಟ್ಟಡಕ್ಕೆ  ಸ್ಥಳಾಂತರಿಸಲಾಯಿತು. ಆದರೆ ಈ ಕಟ್ಟಡ ಇದೀಗ ಶಿಥಿಲಗೊಂಡಿದ್ದು ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. 

ಮಳೆಗಾಲದಲ್ಲಿ ಸೋರುತಿಹುದು…
ಠಾಣೆ ಅತ್ಯಂತ ಕಿರಿದಾಗಿದ್ದು  ಸಿಬಂದಿಗೆ ಕಾರ್ಯ ನಿರ್ವಹಿಸಲು ಇಕ್ಕಟ್ಟಾಗಿದೆ. ಹತ್ತಾರು ಮಂದಿ ಒಟ್ಟಿಗೆ ಆಗಮಿಸಿದರೆ ನಿಲ್ಲಲೂ ಜಾಗವಿಲ್ಲ. ಹೊರಗಿನ ಜಗಲಿಯಲ್ಲಿ ನಾಲ್ಕೈದು ಮಂದಿ ಮಾತ್ರ  ಕುಳಿತುಕೊಳ್ಳ ಬಹುದು. ಚುನಾವಣೆ ಮುಂತಾದ ಸಂದರ್ಭ ಸಾರ್ವಜನಿಕರಿಂದ ಪಡೆಯುವ ಶಸ್ತಾÅಸ್ತ್ರಗಳನ್ನು ಇಡಲು ಸರಿಯಾದ ವ್ಯವಸ್ಥೆ ಇಲ್ಲ. ಮಹಿಳಾ ಸಿಬಂದಿಗೆ ಪ್ರತ್ಯೇಕ ಶೌಚಾಲಯವಿಲ್ಲ.  ಜೋರಾಗಿ ಮಳೆ ಬಂದರೆ ಠಾಣೆಯ ಹಂಚಿನ ಮಾಡು ಸೋರಿ ಕಡತಗಳು, ಕಂಪ್ಯೂಟರ್‌ ಒದ್ದೆಯಾಗುತ್ತದೆ ಮತ್ತು ಠಾಣೆಯ ಒಳಗೆ ನೀರು ನಿಲ್ಲುತ್ತದೆ. ಪ್ರತಿ ವರ್ಷ ಮಳೆಗಾಲಕ್ಕೆ ಮುನ್ನ  ಮಾಡಿಗೆ ಟಾರ್ಪಾಲಿನ್‌ ಹೊದೆಸುವ ಕಾರ್ಯವನ್ನು ಪೊಲೀಸರು ಮಾಡುತ್ತಾರೆ.  

ವಸತಿಗೃಹದಲ್ಲಿ ಅಸಹನೀಯ ಬದುಕು
ಪೊಲೀಸರ ವಸತಿಗೃಹದಲ್ಲಿ ಪರಿಸ್ಥಿತಿ ಸೋಚನೀಯವಾಗಿದೆ.  ಹಂಚು ಒಡೆದು ಮಳೆಯ ನೀರು ಗೋಡೆಗೆ ಬಿದ್ದು ಪಾಚಿ ಕಟ್ಟಿದೆ. ಕೋಣೆಗಳು ತುಂಬ ಇಕ್ಕಟ್ಟಾಗಿವೆ. ರಾತ್ರಿ ಜೋರಾಗಿ ಮಳೆ ಬಂದರೆ ನಿದ್ದೆ ಬಿಟ್ಟು ನೀರು ಹೊರಗಡೆ ಚೆಲ್ಲುತ್ತಿರಬೇಕು. ಶೌಚಾಲಯ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಹೀಗಾಗಿ ಹೆಚ್ಚಿನ ಸಿಬಂದಿ ವಸತಿಗೃಹವನ್ನು ಉಪಯೋಗಿಸುತ್ತಿಲ್ಲ. ಹೊಸ ವಸತಿಗೃಹದಲ್ಲಿ ಕೇವಲ 6 ಕುಟುಂಬಕ್ಕೆ ಮಾತ್ರ ಅವಕಾಶವಿದ್ದು, ಸುಮಾರು 20ಕ್ಕೂ ಹೆಚ್ಚು  ಸಿಬಂದಿಗೆ ಸರಿಯಾದ ವಸತಿ ಗೃಹದ ಸೌಲಭ್ಯವಿಲ್ಲ. 

ಪೊಲೀಸ್‌ ಹೌಸಿಂಗ್‌ ಬೋರ್ಡ್‌ ಜವಾಬ್ದಾರಿ
ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಠಾಣೆ, ವಸತಿಗೃಹ ಇನ್ನಿತರ ಕಟ್ಟಡಗಳ ರಚನೆ, ನಿರ್ವಹಣೆ ಪೊಲೀಸ್‌ ಹೌಸಿಂಗ್‌ ಬೋರ್ಡ್‌ ಮೂಲಕ ನಡೆಯುತ್ತದೆ. ಪೊಲೀಸ್‌ ಉನ್ನತ ಅಧಿಕಾರಿಗಳು ಈ ಸಂಸ್ಥೆಗೆ ಸಮಸ್ಯೆ ಕುರಿತಷ್ಟೇ ವಿವರಿಸಬಹುದು. ಹೀಗಾಗಿ ಇಲ್ಲಿನ ಪೊಲೀಸ್‌ ಸಿಬಂದಿ ಉನ್ನತ ಅಧಿಕಾರಿಗಳಲ್ಲಿ ಸಮಸ್ಯೆ ಹೇಳಿಕೊಂಡರು ಏನೂ ಮಾಡಲಾಗದ ಪರಿಸ್ಥಿತಿ ಇದೆ.  

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಠಾಣೆಗೆ ಹೊಸ ಕಟ್ಟಡ ನಿರ್ಮಿಸುವಂತೆ ಸ್ಥಳೀಯರು ಸಾಕಷ್ಟು ಹೋರಾಟ ನಡೆಸಿದ್ದಾರೆ. 07-02-2015ರಲ್ಲಿ ಬೆಂಗಳೂರಿನ ಉನ್ನತ ಪೊಲೀಸ್‌ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಂತೆ  ಪೊಲೀಸ್‌ ಹೌಸಿಂಗ್‌ ಬೋರ್ಡ್‌ ಮೂಲಕ ಠಾಣೆಯ ಕಟ್ಟಡ ಹಾಗೂ ವಸತಿಗೃಹ ನಿರ್ಮಾಣಕ್ಕೆ  ಸುಮಾರು 75 ಲ.ರೂ. ಅಂದಾಜು ವೆಚ್ಚದಲ್ಲಿ ನೀಲಿನಕಾಶೆ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ರವಾನಿಸಲಾಗಿತ್ತು ಹಾಗೂ ಅನಂತರ ಪೊಲೀಸ್‌ ಮಹಾ ನಿರ್ದೇಶನಾಲಯ 12-05-2017ರಲ್ಲಿ  ರಾಜ್ಯದಲ್ಲಿ ಒಟ್ಟು 16 ಪೊಲೀಸ್‌ ಠಾಣೆ, 1 ವೃತ್ತ ನಿರೀಕ್ಷಕರ ಕಚೇರಿ, 1 ಉಪವಿಭಾಗ ಕಚೇರಿ ನಿರ್ಮಾಣಕ್ಕೆ  ಅನುಮೋದನೆ ನೀಡಿತ್ತು. ಇದರಲ್ಲಿ  ಉಡುಪಿ ಜಿಲ್ಲೆಯ ಕೋಟ ಪೊಲೀಸ್‌ ಠಾಣೆ ಹಾಗೂ ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ಕೂಡ ಒಳಗೊಂಡಿತ್ತು. ಈಗ ಒಂದು ವರ್ಷ ಕಳೆದರೂ ಕಾಮಗಾರಿ ಸುಳಿವೇ ಇಲ್ಲದಾಗಿದೆ.

ಶೀಘ್ರ ಕ್ರಮ ಕೈಗೊಳ್ಳಿ
ಕೋಟ ಠಾಣೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ವಸತಿಗೃಹದಲ್ಲಿ ಯಾರೂ ಕೂಡ ವಾಸವಿರಲು ಸಾಧ್ಯವಿಲ್ಲ. 2016ರಲ್ಲಿ ಪೊಲೀಸ್‌ ಹೌಸಿಂಗ್‌ ಬೋರ್ಡ್‌ 75ಲಕ್ಷದ ನೀಲಿನಕಾಶೆ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ರವಾನಿಸಿತ್ತು ಹಾಗೂ  2017ರಲ್ಲಿ ಕಾಮಗಾರಿಗೆ ಅನುಮೋದನೆ ದೊರಕಿತ್ತು. ಆದರೆ ಇದುವರೆಗೆ ಮುಂದಿನ ಪ್ರಕ್ರಿಯೆ  ನಡೆದಿಲ್ಲ. ಆದಷ್ಟು ಶೀಘ್ರ ಈ ಕುರಿತು ಕ್ರಮ ಕೈಗೊಳ್ಳಬೇಕು.
– ಕೋಟ ಗಿರೀಶ್‌ ನಾಯಕ್‌ (ಕೋಗಿನಾ) ಸಾಮಾಜಿಕ ಹೋರಾಟಗಾರರು

– ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

UP-Puttige

Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.