ಕೋಟೇಶ್ವರ ಗ್ರಾಮಸಭೆ: ನೀರಿನ ಸುವ್ಯವಸ್ಥೆ ಚರ್ಚೆ
Team Udayavani, Mar 21, 2017, 4:41 PM IST
ಕೋಟೇಶ್ವರ : ಕೋಟೇಶ್ವರ ಗ್ರಾ.ಪಂ.ನ ಗ್ರಾಮಸಭೆಯು ಇಲ್ಲಿನ ಶಾರದಾ ಕಲ್ಯಾಣ ಮಂಟಪದಲ್ಲಿ ಮಾ. 20ರಂದು ನಡೆಯಿತು.
ಅರಲ್‌ಗುಡ್ಡೆ ಹಾಗೂ ಕುಂಬ್ರಿ ಮುಂತಾದೆಡೆ ನೀರು ಸರಬರಾಜಿಗೆ ಪೈಪ್‌ಲೈನ್ ಜೋಡಿಸುವ ಪ್ರಕ್ರಿಯೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಾರಾಯಣ ಬಿಲ್ಲವ ಅವರು ಇರುವ ನೀರಿನ ವ್ಯವಸ್ಥೆ ಅಸ್ತವ್ಯಸ್ತವಾಗಿರುವ ಈ ಸಂದರ್ಭದಲ್ಲಿ ಪರ್ಯಾಯವಾಗಿ ಪೈಪ್ ಜೋಡಣೆಯು ಇನ್ನಷ್ಟು ಸಮಸ್ಯೆಗೆ ಕಾರಣವಾಗುವುದು ಎಂದರು.
ಪ್ರಶ್ನೆಗೆ ಉತ್ತರಿಸಿದ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ ಅವರು ಕುಡಿಯುವ ನೀರಿನೊಡನೆ ನೀರು ಸರಬರಾಜು ವ್ಯವಸ್ಥೆಯನ್ನು ವಾರಾಹಿ ಮೂಲಕ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಾಗ ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀಪತಿ ಹೆಬ್ಟಾರ್ ಹಾಗೂ ಜಯಲಕ್ಷ್ಮೀ ಆಚಾರ್ಯ ಅವರು ಮಧ್ಯಪ್ರವೇಶಿಸಿ ಪೈಪ್‌ಲೈನ್ ವ್ಯವಸ್ಥೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಮುಂಗೈಗೆ ಬೆಲ್ಲ ಒರೆಸುವ ಸೊಲ್ಲು ಎಲ್ಲೂ ಸಲ್ಲದು. ವಾರಾಹಿ ಯೋಜನೆಯ ನೀರಿನ ವ್ಯವಸ್ಥೆ ಯನ್ನು ಈ ಭಾಗಕ್ಕೆ ಅಳವಡಿಸಲು ಅನೇಕ ರೀತಿಯ ಮಾನದಂಡ ಬಳಸಬೇಕಾಗುವುದು ಹಾಗಾಗಿ ಭರವಸೆಯ ಮಾತುಗಳ ಬದಲು ಅನುಷ್ಠಾನಗೊಳಿಸುವ ಕ್ರಮವನ್ನು ಕೈಗೆತ್ತಿಕೊಳ್ಳಬೇಕೆಂದರು.
ಸ್ಥಳೀಯ ನಿವಾಸಿ ಬುದ್ದರಾಜ ಶೆಟ್ಟಿ ಅವರು ಮಾತನಾಡಿ ಹಾಲಾಡಿ ರಸ್ತೆಯ ಒಂದು ಪರಿಧಿಯ ತನಕ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವ ಈ ದಿಸೆಯಲ್ಲಿ ಆ ಭಾಗದಲ್ಲಿ ಪೈಪ್‌ಲೈನ್ ಬಳಕೆಯ ಪ್ರಕ್ರಿಯೆಯನ್ನು ಅದರೊಡನೆ ಜೋಡಿಸಿಕೊಳ್ಳುವುದು ಸೂಕ್ತವೆಂದರು.
ಹಳೆಅಳಿವೆ ಮುಖ್ಯರಸ್ತೆಯ ಮೆಸ್ಕಾಂ ಇಲಾಖೆಯ ವಿದ್ಯುತ್ ಕಂಬಗಳ ತಂತಿಗಳು ಜೀರ್ಣಾವಸ್ಥೆಯಲ್ಲಿದ್ದು ಕಳೆದ 3 ತಿಂಗಳಿನಿಂದ ಇಲಾಖೆಗೆ ಆ ಬಗ್ಗೆ ಮನವಿ ಸಲ್ಲಿಸಿ ಗ್ರಾಮ ಪಂಚಾಯತ್‌ನ ಗಮನಕ್ಕೆ ತಂದರೂ ಅಲ್ಲಿ ಮೆಸ್ಕಾಂ ಇಲಾಖೆ ಸ್ಪಂದಿಸದಿರುವುದು ಇಲಾಖೆಯ ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆ ಭಾಗದ ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ ಸಭೆಯ ಗಮನ ಸೆಳೆದರು.
ಆಗ ಮೆಸ್ಕಾಂ ಅಧಿಕಾರಿ ಹಾರಿಕೆ ಉತ್ತರ ನೀಡಿರುವುದು ಬಹಳಷ್ಟು ಚರ್ಚೆಗೆ ಗ್ರಾಸವಾಯಿತು. ಅನಂತರ ಅವರು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಅಂಗವಿಕಲ ರಿಗೆ ನೀಡಲಾದ ತಲಾ 3,000 ರೂ. ಚೆಕ್‌ನ್ನು ಸಾಂಕೇತಿಕವಾಗಿ ಇಬ್ಬರಿಗೆ ಹಸ್ತಾಂತರಿಸಲಾಯಿತು. ಸಭಾಧ್ಯಕ್ಷತೆ ಯನ್ನು ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ ವಹಿಸಿದ್ದರು.
ನೊಡೆಲ್ ಅಧಿಕಾರಿ ಡಾ| ಪೂರ್ಣಿಮಾ, ತಾ.ಪಂ. ಸದಸ್ಯೆ ರೂಪಾ ಪೈ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊ„ಲಿ, ಕೋಟೇಶ್ವರ ಗ್ರಾ.ಪಂ. ಗ್ರಾಮ ಲೆಕ್ಕಿಗ ದಿನೇಶ್, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಪಿಡಿಒ ಮೋಹನ್‌ರಾವ್ ಸ್ವಾಗ ತಿಸಿ, ಲೆಕ್ಕಾಧಿಕಾರಿ ಶಿವರಾಮ್, ಪಂ.ನ ಆಯ ವ್ಯಯ ಪಟ್ಟಿಯನ್ನು ವಾಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.