ಕೋಟತಟ್ಟು ಗ್ರಾ.ಪಂ.: ಕುಡಿಯುವ ನೀರಿಗಾಗಿ ಹಂದಟ್ಟು ನಿವಾಸಿಗಳ ಪ್ರತಿಭಟನೆ
Team Udayavani, Aug 20, 2019, 5:37 AM IST
ಕೋಟ: ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಹಂದಟ್ಟು ನಿವಾಸಿಗಳು ಕುಡಿಯುವ ನೀರಿಗೆ ಆಗ್ರಹಿಸಿ ಆ. 19ರಂದು ಗ್ರಾ.ಪಂ. ಎದುರು ಕೊಡಪಾನ ಹಿಡಿದು ಪ್ರತಿಭಟನೆ ನಡೆಸಿದರು.
ಈ ಪ್ರದೇಶ ಆವೆ (ಕೊಜೆ) ಮಣ್ಣಿನಿಂದ ಕೂಡಿದ್ದು ಎಲ್ಲ ಬಾವಿಗಳಲ್ಲಿ ಕೆಂಪು ನೀರು ಸಿಗುತ್ತದೆ. ಹೀಗಾಗಿ ಇಲ್ಲಿನ 100 ಕುಟುಂಬಗಳು ಪ್ರತಿದಿನವೂ ನಳ್ಳಿ ನೀರನ್ನೆ ಅವಲಂಭಿಸಿವೆ. ಆದರೆ ಹಲವು ದಿನಗಳಿಂದ ಈ ಭಾಗಕ್ಕೆ ನೀರಿನ ಪೂರೈಕೆಯಾಗುತ್ತಿಲ್ಲ.
ನೀರಿಗಾಗಿ ಪರಿತಪಿಸುತ್ತಿದ್ದೇವೆ
ನಾಲ್ಕೈದು ದಿನಕ್ಕೆ ಆಗೊಮ್ಮೆ-ಈಗೊಮ್ಮೆ ನೀರು ಬರುತ್ತದೆ. ಒಂದೆರಡು ವರ್ಷದಿಂದ ಈ ಸಮಸ್ಯೆ ಇದೆ. ಒಂದು ಕೊಡಪಾನ ನೀರಿಗಾಗಿ ಕಿ.ಮೀ. ಸುತ್ತಾಡಬೇಕು. ಕೆಲವು ದಿನದಿಂದ ಮನೆಯ ಮೇಲ್ಛಾವಣಿಯ ಮಳೆಯ ನೀರನ್ನು ನೇರವಾಗಿ ಬಳಕೆ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಪೂರ್ಣ ಮಹಿಳೆಯರೇ ಸೇರಿದ್ದು ವಿಶೇಷವಾಗಿತ್ತು.
ಕೆಲವರು ನಳ್ಳಿಯಿಂದ ಅಕ್ರಮ ಸಂಪರ್ಕ ಪಡೆದು ತೋಟ, ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹ ಮಾಡುತ್ತಾರೆ ಮತ್ತು ವಾಟರ್ ಮ್ಯಾನ್ ಸರಿಯಾಗಿ ಕಾರ್ಯನಿರ್ವಹಿಸು ವುದಿಲ್ಲ. ಸಮಸ್ಯೆಯನ್ನು ಸರಿಪಡಿಸುವ ತನಕ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.
ಪರಿಹಾರದ ಭರವಸೆ
ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಹಾಗೂ ಪಿಡಿಒ ಶೈಲಜಾ ಪೂಜಾರಿ ಮನವಿ ಸ್ವೀಕರಿಸಿ ಮಾತನಾಡಿ, ಮೂರು ದಿನಗಳಲ್ಲಿ ಅಕ್ರಮ ಸಂಪರ್ಕವನ್ನು ಗುರುತಿಸಿ ಕ್ರಮಕೈಗೊಳ್ಳಲಾಗುವುದು ಮತ್ತು ನೀರಿನ ಪೂರೈಕೆಗೆ ಇರುವ ಸಮಸ್ಯೆಯನ್ನು ದುರಸ್ತಿಪಡಿಸಲಾಗುವುದು. ವಾಟರ್ ಮ್ಯಾನ್‌ಗೆಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಅನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ವಾರ್ಡ್ ಸದಸ್ಯ ಜಯಪ್ರಕಾಶ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಕಾರ್ಯದರ್ಶಿ ಮೀರಾ ಹಾಗೂ ಸದಸ್ಯರಾದ ವಾಸು ಪೂಜಾರಿ, ಸತೀಶ್ ಉಪಸ್ಥಿತರಿದ್ದರು. ಹಂದಟ್ಟು ನಿವಾಸಿಗಳಾದ ಪುಷ್ಪಾ, ಆಶಾ, ಜಲಜಾ, ಗ್ರಾ.ಪಂ. ಸದಸ್ಯೆ ಅಕ್ಕು, ರತ್ನಾ, ಸವಿತಾ, ದೀಪಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಅನುದಾನ ಮೀಸಲಿರಿಸಲಾಗಿದೆ
ಇಲ್ಲಿನ ಕುಡಿಯುವ ನೀರಿನ ಕಾಮಗಾರಿಗಾಗಿ ಜಿ.ಪಂ.ನಿಂದ 10.50ಲಕ್ಷ ಮತ್ತು 14ನೇ ಹಣಕಾಸು ನಿಧಿಯಿಂದ 3.63ಸಾವಿರ ಮೀಸಲಿರಿಸಿದ್ದೇವೆ. ಆದರೆ ಮಳೆಗಾಲ ಕಳೆಯುವ ತನಕ ಕಾಮಗಾರಿ ನಡೆಸಲು ಅಸಾಧ್ಯ. ಮಳೆಗಾಲ ಮುಗಿಯುತ್ತಿದ್ದಂತೆ ಶಾಶ್ವತ ಕಾಮಗಾರಿ ನಡೆಸುತ್ತೇವೆ. ಸಮಸ್ಯೆಗೆ ಕಾರಣ ಪತ್ತೆಹಚ್ಚಿ ಬಗೆಹರಿಸುತ್ತೇವೆ ಎಂದು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಹಾಗೂ ಸದಸ್ಯ ಜಯಪ್ರಕಾಶ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.