ಕೊಡಿ ಹಬ್ಬಕ್ಕೆ ದೇಶ-ವಿದೇಶಗಳಿಂದ ಗ್ರಾಮಸ್ಥರ ಆಗಮನ
ಜೀರ್ಣೋದ್ಧಾರ ಕಾರ್ಯಕ್ಕೆ ತಾಂಬೂಲಾರೂಢ ಪ್ರಶ್ನೆ ಮಹತ್ವ
Team Udayavani, Dec 10, 2019, 5:25 AM IST
ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೊಡಿ ಹಬ್ಬ ವೀಕ್ಷಿಸಲು ದೇಶ ವಿದೇಶದಲ್ಲಿ ನೆಲೆಸಿರುವ ಆಸುಪಾಸಿನ ಗ್ರಾಮಸ್ಥರು ಊರಿಗೆ ಆಗಮಿಸಿ ದ್ದಾರೆ. ಸಂಭ್ರಮದ ಕೊಡಿ ಹಬ್ಬ ಆಚರಣೆಗೆ ವಿವಿಧ ಸಂಘಟನೆಗಳು ಸಹಿತ ಗ್ರಾಮಸ್ಥರು ಅಣಿಯಾಗಿದ್ದು ನಾನಾ ರೀತಿಯ ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಂಗಡಿ ಮುಂಗಟ್ಟುಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತಿದೆ. ರಾಜ್ಯದ ನಾನಾ ಕಡೆಗಳಿಂದ ವ್ಯಾಪಾರ ವ್ಯವಹಾರಕ್ಕಾಗಿ ಅನೇಕ ಮಂದಿ ವಿವಿಧ ಪರಿಕರಗಳೊಡನೆ ಆಗಮಿಸಿದ್ದಾರೆ. ದೇಗುಲದ ಸುತ್ತಮುತ್ತ ಅಲ್ಲದೆ ಪೇಟೆಯಲ್ಲಿ ಆಟಿಕೆಯ ಅಂಗಡಿಸಹಿತ ತಿಂಡಿ ತಿನಿಸುಗಳ ಅಂಗಡಿಗಳು ತಲೆ ಎತ್ತಿವೆ.
ತಾಂಬೂಲಾರೂಢ ಪ್ರಶ್ನೆ: ದೇಗುಲದ ಜೀರ್ಣೋದ್ಧಾರದ ಕಾರ್ಯದ ಬಗ್ಗೆ ಕೇರಳದ ಜೋತಿಷಿ ಅವರ ತಾಂಬೂಲಾರೂಢ ಪ್ರಶ್ನೆಯ ಅನಂತರ ಪ್ರಾಯಶ್ಚಿತ್ತ ವಿಧಿ ನಡೆಸಿ ಆರಂಭಗೊಂಡ 50 ಲಕ್ಷ ರೂ. ವೆಚ್ಚದ ಅಡುಗೆ ಮನೆ ಹಾಗೂ ಭೋಜನ ಶಾಲೆಯ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಗರ್ಭಗುಡಿಯ ಮಾಡಿಗೆ ತಾಮ್ರದ ಹೊದಿಕೆ, ಹಿತ್ತಾಳೆಯ ಕವಚದೊಂದಿಗೆ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆಯ ಕಾರ್ಯ ನಡೆಯುತ್ತಿದೆ. 1400 ವರ್ಷಗಳ ಇತಿಹಾಸ ಹೊಂದಿರುವ ಶ್ರೀಕೋಟಿಲಿಂಗೇಶ್ವರ ದೇಗುಲದಲ್ಲಿ ಎಪ್ರಿಲ್ ತಿಂಗಳಲ್ಲಿ ಧ್ವಜಸ್ತಂಭ ಪ್ರತಿಷ್ಟಾಪನೆ ಪ್ರಯುಕ್ತ ಮತ್ತೂಂದು ರಥೋತ್ಸವ ನಡೆಯಲಿದೆ. ಕಾರಣೀಕ ಕ್ಷೇತ್ರವಾದ ಇಲ್ಲಿ ಸಲಾಂ ಮಂಗಳಾರತಿ ಇಂದಿಗೂ ನಡೆಯುತ್ತಿದ್ದು ಸರ್ವಧರ್ಮಗಳ ಸಮನ್ವಯದ ಪ್ರತೀಕವಾಗಿದೆ.
ಅಲಂಕಾರಗೊಳ್ಳುತ್ತಿರುವ ತೇರು: ಉಭಯ ಜಿಲ್ಲೆಗಳಲ್ಲೇ ಆತೀ ಎತ್ತರದ ರಥವಾಗಿದ್ದು ಇದರ ಗಾಲಿಯು ಪುರಾತನ ಕಾಲದ ಪರಂಪರೆಯ ಗತ ವೈಭವವನ್ನು ಸಾರುತ್ತದೆ. ತೇರಿಗೆ ವಿಶೇಷ ಪುಷ್ಪಾಲಂಕಾರಗೊಳಿಸಲು ಸಂಘಟನೆಗಳು ಮುಂದಾಗಿದೆ.
ನೆಲೆ ಊರಿದ ಕಬ್ಬು
ತಲೆತಲಾಂತರಗಳಿಂದ ನಂಬಿಕೆಯ ಪ್ರತೀಕವಾದ ಕೊಡಿ ಹಬ್ಬದಂದು ಕಬ್ಬಿನ ಕೊನೆ ಮನೆಗೊಯ್ಯುವ ಪರಂಪರೆ ಇಂದಿಗೂ ಪ್ರಸ್ತುತವಾಗಿ ಉಳಿದಿದೆ.
ಕೋಟಿತೀರ್ಥದ ಸುತ್ತ ಅಕ್ಕಿ ಚೆಲ್ಲಬೇಡಿ
ಕೋಟೇಶ್ವರ: ಕೊಡಿಹಬ್ಬದಂದು ಶ್ರೀ ಕೋಟಿಲಿಂಗೇಶ್ವರ ದೇವರ ದರ್ಶನದೊಂದಿಗೆ ಹಲವಾರು ಭಕ್ತರು ಕೋಟಿತೀರ್ಥ ಕೆರೆಯನ್ನು ಸುತ್ತಿ ಪ್ರದಕ್ಷಿಣೆಗೈಯುತ್ತಾರೆ. ಈ ಸಂದರ್ಭ ಅಕ್ಕಿಯನ್ನು ಕೆರೆದಂಡೆಯ ಮೇಲೆ ಚೆಲ್ಲುತ್ತಾರೆ. ಹೀಗೆ ದಿನವಿಡೀ ಚೆಲ್ಲಲ್ಪಟ್ಟ ಅಕ್ಕಿರಾಶಿಯು ಮಣ್ಣು, ಧೂಳಿನೊಂದಿಗೆ ಮಿಶ್ರವಾಗಿ ದಿನವಿಡೀ ಜನರ ಓಡಾಟದಿಂದ ತುಳಿಯಲ್ಪಟ್ಟು ಉಪಯೋಗರಹಿತವಾಗುತ್ತಿದೆ. ಮಣ್ಣುಮಿಶ್ರಿತ ಈ ಅಕ್ಕಿ ಬಳಸಲು ಯೋಗ್ಯವಾಗಿರುವುದಿಲ್ಲ, ಪ್ರಾಣಿ ಪಕ್ಷಿಗಳು ಕೂಡಾ ತಿನ್ನುವುದಿಲ್ಲ.
ಇಲ್ಲಿ ಅಕ್ಕಿ ಹಾಕುವುದಕ್ಕಾಗಿಯೇ ದೇವಸ್ಥಾನದಲ್ಲಿ ಹಾಗೂ ಕೆರೆದಂಡೆ ಬದಿಯಲ್ಲಿ ಆಡಳಿತ ಮಂಡಳಿಯವರು ಸೂಕ್ತ ಆಕರಗಳನ್ನು ಇರಿಸಿರುತ್ತಾರೆ. ಅಕ್ಕಿಯನ್ನು ಈ ಆಕರಗಳಲ್ಲಿ ಹಾಕುವುದರಿಂದ ದೇಗುಲದ ಮಹಾ ಸಂತರ್ಪಣೆಗೆ ಅಕ್ಕಿಯನ್ನು ಬಳಸಬಹುದು. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಅಕ್ಕಿ ವ್ಯರ್ಥವಾಗುವುದನ್ನು ತಪ್ಪಿಸಬಹುದು.
ಎಲ್ಲ ಭಕ್ತರೂ ಅಕ್ಕಿಯನ್ನು ಕೆರೆಬದಿ ಚೆಲ್ಲದೇ ನಿಗದಿತ ಸ್ಥಳದಲ್ಲಿಯೇ ಹಾಕಬೇಕು. ಅಮೂಲ್ಯವಾದ ಆಹಾರ ಪದಾರ್ಥ ವ್ಯರ್ಥವಾಗುವುದನ್ನು ತಪ್ಪಿಸಬೇಕು. ಇದು ಕೂಡಾ ದೇವರ ಸೇವೆಯೇ ಆಗಿದೆ ಎಂದು ಕೋಟೇಶ್ವರ ಯಜ್ಞ ನಾರಾಯಣ ಉಳ್ಳೂರ ಅವರು ಮನವಿ ಮಾಡಿದ್ದಾರೆ.
ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.