ಸಪ್ತಕ್ಷೇತ್ರಗಳಲ್ಲೊಂದಾದ ಪುರಾಣಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇಗುಲ
Team Udayavani, Jan 5, 2020, 5:25 AM IST
ಕೋಟೇಶ್ವರ: ಕುಂದಾಪುರ ತಾಲೂಕಿನ ಪ್ರಸಿದ್ಧ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಕೊಡಿಹಬ್ಬ ಉಡುಪಿ ಜಿಲ್ಲೆಯ ಪ್ರಧಾನ ಉತ್ಸವಗಳಲ್ಲೊಂದಾಗಿದೆ. ಶೈವಾಗಮ ಪದ್ಧತಿಯಂತೆ ನಿತ್ಯ ಪೂಜೆ ಹಾಗೂ ವಿಶೇಷ ಕಟ್ಲೆ ವಿನಿಯೋಗಗಳು ನಡೆಯುತ್ತವೆ. ಧನುರ್ಮಾಸದ ಈ ಅವಧಿಯಲ್ಲಿ ಸೂರ್ಯಾಸ್ತಮಾನದ ಮೊದಲು ಇಲ್ಲಿ ಪೂಜೆ ನಡೆಯುತ್ತದೆ.ಧನುರ್ಮಾಸ ಪೂಜೆಯನ್ನು ಪಶ್ಚಿಮ ಜಾಗರಣೆ ಪೂಜೆ ಎಂದೂ ಕರೆಯಲಾಗುತ್ತದೆ. ಎಲ್ಲ ಪೂಜಾಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನೆರವೇರುತ್ತದೆ.
ಇತಿಹಾಸ
ಧ್ವಜಪುರವೆಂದು ಖ್ಯಾತಿ ಹೊಂದಿದ ಈ ದೇಗುಲವು 1200 ವರ್ಷಗಳ ಇತಿಹಾಸ ಹೊಂದಿದೆ.ದೇಗುಲದ ಪರಂಪರೆ, ಇತಿಹಾಸವನ್ನು ಅವಲೋಕಿಸಿದರೆ ಸ್ಥಳ ಪುರಾಣವು ವಿಶೇಷತೆ ಪಡೆದಿದೆ. ಹೊಯ್ಸಳ, ಕೆಳದಿ, ಆಳುಪ ಹಾಗೂ ಸೂರಾಲಿನ ತೋಳಾರ ಅರಸರು ಈ ದೇಗುಲದಲ್ಲಿ ಆಡಳಿತ ನಡೆಸಿದ ಬಗ್ಗೆ ಅನೇಕ ಲಿಖೀತ ಕುರುಹುಗಳಿವೆ.
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರಾತಃಪೂಜೆ, ಉದಯಬಲಿ, ಮಧ್ಯಾಹ್ನ ಮಹಾಪೂಜೆ, ಸಾಯಂಪೂಜೆ ಹಾಗೂ ರಾತ್ರಿ 8 ಗಂಟೆಗೆ ಮಹಾಪೂಜೆ ಸಾಂಗವಾಗಿ ನಡೆಯುತ್ತದೆ.
-ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು,
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.