ನೆಲಗಡಲೆ ಕೊಯ್ಯಲು ಬಂತು ಯಂತ್ರ; ಹೆಚ್ಚು ಕೆಲಸ ಕಡಿಮೆ ಖರ್ಚು


Team Udayavani, Mar 13, 2017, 12:45 PM IST

0903kde2-2.jpg

ಕೃಷಿ ಚಟುವಟಿಕೆಯಲ್ಲಿ ಈಗ ಯಂತ್ರಗಳದ್ದೇ ಕಾರುಬಾರು. ಭತ್ತದ ಸಸಿ ನೆಡಲು ನಾಟಿ ಯಂತ್ರ, ಭತ್ತ ಕೊಯ್ಲು ಮಾಡಲು ಕಟಾವು ಯಂತ್ರವಾದರೆ ನೆಲಗಡಲೆ ಕೊಯ್ಯಲು ಕೂಡ ರೈತ ಯಂತ್ರಗಳ ಮೊರೆ ಹೋಗುವಂತಾಗಿದೆ. ಕೃಷಿ ಕೆಲಸ ಮಾಡಲು ಕೂಲಿ ಆಳುಗಳು ಸಿಗುವುದಿಲ್ಲ ಎಂಬ ಕೂಗಿಗೆ ಯಂತ್ರಗಳು ರೈತನ ಕೈ ಹಿಡಿಯುತ್ತಿರುವುದು ಕೃಷಿ ಕ್ಷೇತ್ರದ ಬೆಳವಣಿಗೆಗೆ ಆಶಾದಾಯಕವಾಗಿ ಪರಿಣಮಿಸುತ್ತಿದೆ.

ಕರಾವಳಿಯ ಮರವಂತೆ ಸಮೀಪದ ಬಿಜೂರು, ಉಪ್ಪುಂದ, ಖಂಬದಕೋಣೆ, ನಾಗೂರು, ಕಿರಿಮಂಜೇಶ್ವರ ಮುಂತಾದ ಭಾಗಗಳಲ್ಲಿ ಈಗ ನೆಲಗಡಲೆ ಬೆಳೆ ಕೊಯ್ಲು ಸಮಯವಾಗಿದ್ದು, ಈ ಹಿಂದಿನಂತೆ ರೈತರು ಗದ್ದೆಗಳಲ್ಲಿ ನೆಲಗಡಲೆ ಗಿಡಗಳನ್ನು ಕಿತ್ತು ದಿನಗಟ್ಟಲೆ ಗದ್ದೆಗಳಲ್ಲಿ ಕುಳಿತು ಕೊಯ್ಯುವ (ಗಿಡದಿಂದ ಬೇರ್ಪಡಿಸುವ) ಕಾರ್ಯದಲ್ಲಿ ನಿರತವಾಗುವ ಅಗತ್ಯವಿಲ್ಲ, ಅನಿವಾರ್ಯವೂ ಅಲ್ಲ.  ಈಗ ಗದ್ದೆಗಳಲ್ಲಿ ನೆಲಗಡಲೆ ಫಸಲನ್ನು ಗಿಡದಿಂದ ಬೇರ್ಪಡಿಸುವ ಯಂತ್ರಗಳ ಸದ್ದು ಜೋರಾಗಿಯೇ ಕೇಳಿಬರುತ್ತಿದೆ.

ಕರಾವಳಿಗೆ ಕಾಲಿಟ್ಟ ನೆಲಗಡಲೆ ಒಕ್ಕರಣೆ ಯಂತ್ರ
ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಗಿಡದಿಂದ ನಲೆಗಡಲೆ ಫಸಲನ್ನು ಬೇರ್ಪಡಿಸುವ ಒಕ್ಕರಣೆ ಯಂತ್ರವನ್ನು ಕೃಷಿಕ ನಾಗರಾಜ ದೇವಾಡಿಗ ಅವರು ಮೊದಲ ಬಾರಿಗೆ ಪರಿಚಯಿಸಿದ್ದು, ಕೃಷಿ ಕೆಲಸದ ಬಗ್ಗೆ ಜನರ ನಿರಾಸಕ್ತಿ, ಕೂಲಿ ಆಳುಗಳ ಕೊರತೆ, ದಿನದಿಂದ ದಿನಕ್ಕೆ ಏರುತ್ತಿರುವ ಸಂಬಳ ಇವುಗಳನ್ನೆಲ್ಲ ಮನಗಂಡ ಇವರು ಹೊರ ಜಿಲ್ಲೆಗಳಲ್ಲಿ ಸುತ್ತಾಡಿ ಯಂತ್ರದ ಕುರಿತು ಸಂಪೂರ್ಣ ತಿಳಿದುಕೊಂಡು ಎರಡು ವರ್ಷಗಳ ಹಿಂದೆ ಯಂತ್ರವನ್ನು ಈ ಭಾಗಕ್ಕೆ ತಂದು ಬಳಕೆ ಮಾಡಿದಾಗ ಇದರಲ್ಲಿ ಯಶಸ್ಸು ದೊರಕಿತು.  ಇತರೆ ರೈತರು ಉಪಯೋಗ ಮಾಡಿದಾಗ ಕೂಲಿಗಳಿಗೆ ತಗುಲುವ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಹಾಕಿದಾಗ ಗಣನೀಯ ವ್ಯತ್ಯಾಸ ಕಂಡುಬಂದಿರುವುದರಿಂದ ರೈತರಿಗೆ ಇದು ಒಂದು ರೀತಿಯಲ್ಲಿ ವರದಾನವಾಗಿ ಕಂಡಿತು.

ಕಡಿಮೆ ಖರ್ಚು ಹೆಚ್ಚು ಕೆಲಸ
ಒಂದು ಕೂಲಿ ಆಳು ದಿನಕ್ಕೆ ಒಂದರಿಂದ ಎರಡು ಚೀಲ ನೆಲಗಡಲೆ ಕೊಯ್ದರೆ ಯಂತ್ರವು ಒಂದು ಗಂಟೆಗೆ ಸುಮಾರು 20 ರಿಂದ 25 ಚೀಲದಷ್ಟು ನೆಲಗಡಲೆಯನ್ನು ಗಿಡದಿಂದ ಬೇರ್ಪಡಿಸುತ್ತದೆ. ಎರಡು ಗಂಟೆಗೆ ಒಂದು ಎಕರೆಯಷ್ಟು ಗಿಡಗಳನ್ನು ಕಟಾವು ಮಾಡುತ್ತದೆ ಎಂದು ಹೇಳುತ್ತಾರೆ. ಒಂದು ದಿನಕ್ಕೆ  ಒಬ್ಬರಿಗೆ (ಮಹಿಳೆಯರಿಗೆ) 300 ರೂ. ವೇತನವಾದರೆ, ಯಂತ್ರದ ಒಂದು ಗಂಟೆ ಬಾಡಿಗೆ 800 ರೂ. ಮಾತ್ರ. ಇದರ ಜತೆಗೆ ಗಿಡಗಳನ್ನು ಸಣ್ಣದಾಗಿ ಕಟಾವು ಮಾಡುವುದರಿಂದ ಜಾನುವಾರುಗಳಿಗೆ ತಿನ್ನಲು ಮಳೆಗಾಲದ ಆಹಾರಕ್ಕಾಗಿ  ಮತ್ತೂಮ್ಮೆ ಸಿದ್ಧಪಡಿಸುವ ಅಗತ್ಯವಿರುವುದಿಲ್ಲ, ಅದಕ್ಕೆ ತಗಲುವ ಇತರೆ ಖರ್ಚು ಉಳಿತಾಯ ಸಾಧ್ಯವಾಗಿದೆ.

ದುಬಾರಿ ಸಂಬಳ ಜತೆಗೆ, ಕೂಲಿ ಆಳುಗಳ ಕೊರತೆಯಿಂದ ರೋಸಿ ಹೋಗಿರುವ ರೈತರಿಗೆ ಯಂತ್ರದ ಆಗಮನದಿಂದಾಗಿ ಕೃಷಿ ಚಟುವಟಿಕೆಗೆ ಮಾಡುವ ವೆಚ್ಚಗಳಲ್ಲಿ ಒಂದಿಷ್ಟು ಕಡಿಮೆಯಾಗಿರುವುದು ರೈತರ ಸಂತೋಷಕ್ಕೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಕೃಷಿಗಳಲ್ಲಿ ಹೊಸ ಯಂತ್ರಗಳ ಬಳಕೆ ಹೆಚ್ಚುತ್ತಿರುವುದು ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ.

ಕಡಿಮೆ ಹಣ 
ವರ್ಷದಿಂದ ವರ್ಷಕ್ಕೆ ಕೂಲಿ ಆಳುಗಳ ಕೊರತೆ ಏರುತ್ತಿರುವ ಸಂಬಳದಿಂದಾಗಿ ಹೆಚ್ಚು  ಖರ್ಚು ವೆಚ್ಚಗಳಿಂದಾಗಿ ಕೃಷಿಯಲ್ಲಿ ಲಾಭಾಂಶ ಕಾಣಲು ಸಾಧ್ಯವಾಗುತ್ತಿಲ್ಲ. ಇಂದು ಹಣ ಕೊಟ್ಟರೂ ಕೂಲಿ ಆಳುಗಳು ಸಿಗುತ್ತಿಲ್ಲವಾದ್ದರಿಂದ ಯಂತ್ರದ ಬಳಕೆ ಉಪಯುಕ್ತ ವಾಗಿದೆ. ನೆಲಗಡಲೆ ಕೈಯಿಂದ ಕೊಯ್ಯಲು ಕೆಲವು ದಿನಗಳು ಬೇಕಾಗುತ್ತದೆ, ಸಾವಿರಾರು ರೂಪಾಯಿ ಅಗತ್ಯವಿದೆ. ಆದರೆ ಈ ಯಂತ್ರದಿಂದ ಕಡಿಮೆ ಹಣದಲ್ಲಿ 
ಕೆಲಸವು ಒಂದೆರಡು ಗಂಟೆಗಳಲ್ಲಿ ಮುಗಿಯುತ್ತದೆ. 

– ನಾಗರಾಜ ದೇವಾಡಿಗ, ಕೃಷಿಕರು

– ಕೃಷ್ಣ ಬಿಜೂರು

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.