ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳಿಗೆ ಲಕ್ಷಾಂತರ ರೂ. ನಷ್ಟ

ಕೊರೊನಾ ಭೀತಿ ಹಿನ್ನೆಲೆ ಸಂಚಾರ ಸ್ಥಗಿತ

Team Udayavani, Mar 17, 2020, 5:53 AM IST

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳಿಗೆ ಲಕ್ಷಾಂತರ ರೂ. ನಷ್ಟ

ಉಡುಪಿ: ಕೊರೊನಾ ವೈರಸ್‌ ಭೀತಿಯಿಂದ ಉಡುಪಿ ಜಿಲ್ಲೆಯಿಂದ ದೂರದ ಊರಿಗೆ ಖಾಸಗಿ ಹಾಗೂ ಸರಕಾರಿ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ತೀವ್ರವಾಗಿ ಕುಸಿತ ಕಂಡಿದ್ದು, ಸಾರಿಗೆ ವ್ಯವಸ್ಥೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರು, ಮೈಸೂರು, ಬಿಜಾಪುರ, ಹಾಸನ, ಹೈದರಾಬಾದ್‌, ಮುಂಬಯಿ ಸೇರಿದಂತೆ ದೂರ-ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಶೇ.40ರಷ್ಟು ಕುಸಿತವಾಗಿದೆ. ಇನ್ನು ಎಪ್ರಿಲ್‌-ಮೇ ತಿಂಗಳಿಗೆ ಸಂಬಂಧಿಸಿದಂತೆ ಆನ್‌ಲೈನ್‌ ಬುಕ್ಕಿಂಗ್‌ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸೀಟುಗಳು ಖಾಲಿಯಿದ್ದರೂ ಜನರು ಟಿಕೆಟ್‌ ಬುಕ್‌ ಮಾಡಲು ಮುಂದೆ ಬರುತ್ತಿಲ್ಲ. ಕೆಎಸ್‌ಆರ್‌ಟಿಸಿಗೆ ನಿತ್ಯ 3 ಲ.ರೂ.ನಂತೆ ಮೂರು ದಿನದಲ್ಲಿ ಉಡುಪಿ ಡಿಪೋಗೆ 9 ಲ.ರೂ. ನಷ್ಟವಾಗಿದೆ ಎಂದು ಉಡುಪಿ ಡಿಪೋ ಸಿಬಂದಿ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರೇ ಇಲ್ಲ!
ಮಾರ್ಚ್‌ ತಿಂಗಳಿನಲ್ಲಿ ಪರೀಕ್ಷೆ ಸಮಯವಾಗಿರುವುದರಿಂದ ಬಸ್‌ ಟಿಕೆಟ್‌ ಬುಕ್‌ ಅಷ್ಟಾಗಿ ಇರುವುದಿಲ್ಲ. ಆದರೆ ಎಪ್ರಿಲ್‌- ಮೇ ತಿಂಗಳ ಬಸ್‌ಗಳ ಮಾರ್ಚ್‌ ಅಂತ್ಯದೊಳಗೆ ಬುಕ್‌ ಆಗಿರುತ್ತಿದ್ದವು. ಉಡುಪಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ -ಉಡುಪಿಗೆ ಬರುವ ಪ್ರಯಾಣಿಕರ ಸಂಖ್ಯೆ ಕೊರೊನಾ ಭೀತಿಯಿಂದ ಸಂಪೂರ್ಣ ಕುಸಿದಿದೆ ಎಂದು ಬಸ್‌ ಟಿಕೆಟ್‌ ಏಜೆನ್ಸಿ ಮಾಲಕ ವಿನಾಯಕ ತಿಳಿಸಿದರು.

ಸಿಟಿ ಬಸ್‌ ಖಾಲಿ
ಕೊರೊನಾ ಭೀತಿಯಿಂದಾಗಿ ಸಿಟಿ ಬಸ್‌ನಲ್ಲಿ ಶೇ. 40ರಷ್ಟು ಪ್ರಯಾಣಿಕರ ಕೊರತೆ ಉಂಟಾಗಿದೆ. ನಗರದ ವಿವಿಧ ಭಾಗಗಳಿಗೆ 80 ಬಸ್‌ಗಳು ಸಂಚರಿಸುತ್ತವೆ. ಇದೀಗ ನಿತ್ಯ ಒಂದು ಬಸ್‌ಗೆ 3,000ನಂತೆ 2.80 ಲ.ರೂ. ನಷ್ಟವಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕಷ್ಟ. ಹಾಗಂತ ಸಿಟಿ ಬಸ್‌ ಮಾರ್ಗವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಸುರೇಶ್‌ ನಾಯಕ್‌ ತಿಳಿಸಿದರು.

ವಿಷ್ಣು ಸಹಸ್ರನಾಮ, ನಾರಾಯಣ ಮಂತ್ರ ಪಠನೆಯಿಂದ ವೈರಸ್‌ ನಿಗ್ರಹ
ಪಡುಬಿದ್ರಿ: ಆಯುರ್ವೇದದ ಆಷೇìಯ ಗ್ರಂಥ ಶುಶ್ರುತ ಸಂಹಿತೆಯಲ್ಲಿ ಶುಶ್ರುತನೇ ಸ್ವತಃ ಪ್ರಸ್ತುತ ಪಡಿಸಿರುವಂತೆ ವಿಷ್ಣು ಸಹಸ್ರನಾಮವು ಯಾವುದೇ ವೈರಸ್‌ಗಳ ನಿಗ್ರಹಕ್ಕೆ ಪರಿಣಾಮಕಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಆಯುಷ್‌ ಸಂಘದ ಅಧRಕ್ಷ ಡಾ| ಎನ್‌. ಟಿ. ಅಂಚನ್‌ ಹೇಳಿದ್ದಾರೆ.

ಈಗಾಗಲೇ ಈ ಕುರಿತಾದ ಮಾಹಿತಿಯು ವೈರಲ್‌ ಆಗುತ್ತಿದೆ. ಸಹಸ್ರನಾಮ ಪಠಣ ತಿಳಿಯದಿದ್ದಲ್ಲಿ ನಾರಾಯಣ ಆಷ್ಟಾಕ್ಷರ ಮಂತ್ರ ಅಥವಾ ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನಾದರೂ ಒಂದಿಷ್ಟು ಶುದ್ಧ ಜಲಕ್ಕೆ ಒಂದೆರಡು ತುಳಸೀ ದಳಗಳನ್ನು ಹಾಕಿ ಕನಿಷ್ಠ 108 ಬಾರಿ ಪಠಿಸಬೇಕು. ಪಠನದ ಬಳಿಕ ಅದನ್ನು ಸೇವಿಸಿದಲ್ಲಿ ಅದು ಒಂದು ಉತ್ತಮ ಔಷಧವಾಗಿ ವೈರಸ್‌ಗಳನ್ನು ಕೊಲ್ಲುವುದಾಗಿಯೂ ಡಾ| ಅಂಚನ್‌ ತಿಳಿಸಿದ್ದಾರೆ.

ಆಯುರ್ವೇದದ ಪ್ರಕಾರ ಅಮೃತ ಬಳ್ಳಿ, ತ್ರಿಕಟು (ಇಪ್ಪಿಲಿ, ಶುಂಠಿ ಮತ್ತು ಮೆಣಸು), ಭದ್ರಮುಷ್ಟಿ, ಶ್ರೀ ಗಂಧ ಇವುಗಳ ಚೂರ್ಣವನ್ನು ತಯಾರಿಸಿ ಕಷಾಯದ ರೂಪದಲ್ಲಿ ನಿತ್ಯ ಸೇವನೆ ಮಾಡುತ್ತಾ ಬಂದಲ್ಲಿ ಸೂಕ್ಷ್ಮಾಣು (ವೈರಾಣು) ಜೀವಿಗಳ ವಿರುದ್ಧ ದೇಹದ ರಕ್ಷಣೆಯನ್ನು ಮಾಡಬಹುದಾಗಿದೆ ಮತ್ತು ಇದರಿಂದ ದೇಹದ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಬಹುದೆಂದೂ ಗ್ರಂಥೋಕ್ತ ಆಧಾರ ಸಹಿತ ಡಾ| ಎನ್‌.ಟಿ.ಅಂಚನ್‌ ತಿಳಿಸಿರುತ್ತಾರೆ.

ನಂದಿಕೂರು ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಜಾತ್ರೆ ಆಚರಣೆಗೆ ಕ್ರಮ ಪಡುಬಿದ್ರಿ:ಕೊರೊನಾ ಹಿನ್ನೆಲೆ ಹಾಗೂ ರಾಜ್ಯ ಸರಕಾರದ ಆದೇಶದ ಮೇರೆಗೆ ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಗೆ ಚ್ಯುತಿಯಾಗದಂತೆ ಮಾ. 18ರಂದು ನಡೆಯುವ ಜಾತ್ರಾ ಮಹೋತ್ಸವವನ್ನು ಅತ್ಯಂತ ಸರಳ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು.

ಈ ಬಾರಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಹಾಕುವಂತಿಲ್ಲ. ಆಯೋಜಿತ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ ಎಂದು ಶ್ರೀ ದೇವಸ್ಥಾನದ ಆಡಳಿತಾಧಿಕಾರಿ ಎನ್‌.ಉಮಾಶಂಕರ ರಾವ್‌ ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆ್ಯಂಬುಲೆನ್ಸ್‌ ಸೇವೆ ಉಚಿತ
ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತರು ಬಿಸಿಲ ತಾಪದಿಂದ ರಕ್ತದ ಒತ್ತಡಗಳಿಂದ ಅಸ್ವಸ್ಥರಾಗಿ ಪ್ರಜ್ಞೆತಪ್ಪಿ ಬಿದ್ದರೂ ಆಸ್ಪತ್ರೆಗೆ ದಾಖಲು ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೇ ಅಸಹಾಯಕರಾಗಿ ಬಿದ್ದುಕೊಂಡವರನ್ನು ಕಂಡರೆ ತತ್‌ಕ್ಷಣ ಉಡುಪಿ ಜಿÇÉಾ ನಾಗರಿಕ ಸಮಿತಿಯ ಉಚಿತ ಸೇವೆಯ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ತಿಳಿಸಬಹುದು ಎಂದು ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದರು.

ನಗರ-ಸ್ತಬ್ಧ
ಹೆಚ್ಚಾಗಿ ಸಾರ್ವಜನಿಕರು ಸೇರುವ ವಾಣಿಜ್ಯ ಮಳಿಗೆ ಗಳ‌ು ಸೋಮವಾರ ಸಹ ಬಂದ್‌ ಆಗಿದ್ದವು. ಕಲ್ಪನಾ, ಡಯಾನಾ, ಅಲಂಕಾರ್‌, ಆಶಿರ್ವಾದ್‌ ಸೇರಿದಂತೆ 4 ಚಿತ್ರಮಂದಿರ ಸೇರಿದಂತೆ 2 ಮಲ್ಟಿಫ್ಲೆಕ್ಸ್‌ಗಳು ಬಂದ್‌ ಆಗಿವೆ. ಮಕ್ಕಳ ಆರೊಗ್ಯದ ದೃಷ್ಟಿಯಿಂದ ಐಸ್‌ ಕ್ರೀಮ್‌ ಮನೆ-ಮನೆಗೆ ಸೈಕಲ್‌ ಮೂಲಕ ತೆರಳಿ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಟಾಪ್ ನ್ಯೂಸ್

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.