ಇಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕೋಟೇಶ್ವರದಿಂದ ನೂತನ ಬ್ರಹ್ಮರಥ ರವಾನೆ
Team Udayavani, Sep 30, 2019, 5:52 AM IST
ಕೋಟೇಶ್ವರ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯ ಕೋಟೇಶ್ವರದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಪೂರ್ಣಗೊಂಡಿದ್ದು ಸೆ.30ರಂದು ಬ್ರಹ್ಮರಥ ರವಾನೆಯಾಗಲಿದೆ.
ಕೋಟೇಶ್ವರದ ರಥಶಿಲ್ಪಿಗಳಾದ ಲಕ್ಷ್ಮೀ ನಾರಾಯಣ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ 2018ರ ಮಾ.15ರಂದು ರಥ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು.ಒಂದೂವರೆ ವರ್ಷದ ಅನಂತರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಪುರಾತನ ಬ್ರಹ್ಮರಥದ ಅಳತೆ, ಆಯ, ವಿನ್ಯಾಸ, ಶಿಲ್ಪಕಲಾ ಕೃತಿಗಳನ್ನೇ ಈ ರಥ ಹೊಂದಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯ ಅವರು ಅತ್ಯಾಕರ್ಷಕವಾಗಿ ನಿರ್ಮಿಸಿರುವ ಈ ರಥವು ಪ್ರಾಚೀನ ಶಿಲ್ಪಕಲೆಗೆ ಧಕ್ಕೆ ಬಾರದಂತೆ ನಿರ್ಮಿಸಲಾಗಿದೆ.
ವಿಶೇಷ ಪೂಜೆ
ರವಿವಾರದಂದು ರಾತ್ರಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ವಿಶೇಷ ಪೂಜೆ ನಡೆಯಿತು.ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಹಿತ ಸಮಿತಿಯ ಸದಸ್ಯರು, ಕ್ಷೇತ್ರದ ಭಕ್ತರು, ಕೋಟಿಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು ವಿವಿಧ ಧಾರ್ಮಿಕ ಮುಖಂಡರು, ಗ್ರಾಮಸ್ಥರು ಭಾಗವಹಿಸಿದರು.
ಸೆ.30ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನೂತನ ರಥ ರವಾನೆ ಉದ್ಯಮಿ ಹಾಗೂ ಜಯಕರ್ನಾಟಕ ಸಂಸ್ಥಾಪಕ ಎನ್. ಮುತ್ತಪ್ಪ ರೈ ದೇರ್ಲ ಹಾಗೂ ಉದ್ಯಮಿ ಅಜಿತ ಶೆಟ್ಟಿ ಕಡಬ ಜಂಟಿಯಾಗಿ ರೂ 2.5 ಕೋಟಿ ವೆಚ್ಚದ ನೂತನ ಬ್ರಹ್ಮರಥವನ್ನು ಈ ಕ್ಷೇತ್ರಕ್ಕೆ ಕಾಣಿಕೆ ರೂಪವಾಗಿ ಸಮರ್ಪಿಸಲಿದ್ದಾರೆ. ಸೆ.30ರಂದು ಬೆಳಗ್ಗೆ ಕುಕ್ಕೆ ಕ್ಷೇತ್ರದ ನೂತನ ರಥವು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಕೋಟ, ಸಾಲಿಗ್ರಾಮ, ಬ್ರಹ್ಮಾವರ, ಉಡುಪಿ, ಕಾಪು, ಮುಲ್ಕಿ, ಬಪ್ಪನಾಡು, ಸುರತ್ಕಲ್ ಮಾರ್ಗವಾಗಿ ಸಾಗುವುದು. ಮಾರ್ಗದುದ್ದಕ್ಕೂ ಎದುರಾಗುವ ದೇಗುಲಗಳಲ್ಲಿ ಪೂಜೆ ಪೂರೈಸಿ ಸಾಗುವುದು.
ಅ.1ರಂದು ಮಂಗಳೂರಿನಿಂದ ಹೊರಟು ಬಿ.ಸಿ. ರೋಡ್, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ಅಲಂಕಾರು ಮಾರ್ಗವಾಗಿ ಬಲ್ಯಕ್ಕೆ ಸಾಗುವುದು. ಅಲ್ಲಿಂದ ಬೆಳಗ್ಗೆ 10 ಗಂಟೆಗೆ ಹೊರಟು ಕಡಬ ತಲುಪಿ ವಾಹನ ಜಾಥಾ ಮೂಲಕ ಬಿಳಿನೆಲೆ, ಕೈಕಂಬ ಮೂಲಕ ಕರೆತರಲಾಗುವುದು.
ಕುಳುRದದಿಂದ ಬ್ರಹ್ಮರಥ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪುರಪ್ರವೇಶ ಮಾಡಲಿದೆ ಎಂದು ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಅವರು ಸೆ.29ರಂದು ಕೋಟೇಶ್ವರಕ್ಕೆ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ನೂತನ ಬ್ರಹ್ಮರಥ ವೀಕ್ಷಿಸಿ, ಲಕ್ಷ್ಮೀ ನಾರಾಯಣ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯ ಅವರ ರಥ ನಿರ್ಮಾಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.