ಕುಂಭಾಶಿ: ಆನೆಗುಡ್ಡೆ ಶ್ರೀ ವಿನಾಯಕನಿಗೆ 6 ಸಾವಿರ ಕಡುಬು ನೈವೇದ್ಯ
Team Udayavani, Mar 16, 2017, 2:44 PM IST
ತೆಕ್ಕಟ್ಟೆ (ಆನೆಗುಡ್ಡೆ): ಪುರಾಣ ಪ್ರಸಿದ್ಧ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಾ. 16ರಂದು ನಡೆಯುವ ಸಂಕಷ್ಟ ಹರ ಚತುರ್ಥಿಯ ಹಿನ್ನೆಲೆಯಲ್ಲಿ ವಿಶೇಷವಾಗಿ ಶ್ರೀದೇವರಿಗೆ ಸುಮಾರು 16 ಸಾವಿರ ಕಡಬು (ಮೂಡೆ) ನೈವೇದ್ಯಗೊಳ್ಳಲಿದ್ದು ಅನಂತರ ಭಕ್ತರಿಗೆ ಕಡುಬು (ಮೂಡೆ) ಪ್ರಸಾದ ವಿತರಣಾ ಕಾರ್ಯಕ್ಕಾಗಿ ದೇಗುಲದಲ್ಲಿ ಸಕಲ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
16 ಸಾವಿರ ಕಡುಬು (ಮೂಡೆ) ತಯಾರಿಯ ಹಿಂದೆ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಸಂಕಷ್ಟ ಹರ ಚತುರ್ಥಿಯ ಹಿನ್ನೆಲೆಯಲ್ಲಿ ಶ್ರೀದೇವರಿಗೆ ಸುಮಾರು 16 ಸಾವಿರ ಕಡುಬು (ಮೂಡೆ) ತಯಾರಿಯ ಪೂರ್ವ ಸಿದ್ಧತೆಗಾಗಿ ಸುಮಾರು ಒಂದು ವಾರದಿಂದಲೂ ಹಾಲಾಡಿ, ಹೊಸಂಗಡಿ ಮುಂತಾದ ಗ್ರಾಮೀಣ ಭಾಗದಿಂದ ಓಲೆಗಳನ್ನು (ಕುಂದಾಪ್ರ ಕನ್ನಡದಲ್ಲಿ ಮುಂಡ್ಕನೊಲಿ) ತಂದು 25 ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ಕಡುಬಿನ ಓಲೆ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ ಹಾಗೂ ಸುಮಾರು 500 ಕೆ.ಜಿ. ಅಕ್ಕಿ ಹಾಗೂ ಉದ್ದಿನ ಬೇಳೆ ಪ್ರಮಾಣಕ್ಕನುಸಾರವಾಗಿ ಐದು ಅರೆಯುವ ಯಂತ್ರಗಳನ್ನು ಬಳಸಿಕೊಂಡು 25 ಕ್ಕೂ ಅಧಿಕ ಮಂದಿ ನುರಿತ ಪಾಕಶಾಸ್ತ್ರಜ್ಞರು ಮಾ. 15ರ ರಾತ್ರಿಯಿಂದಲೇ ನಿರಂತರವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.
ವಿಶೇಷವಾಗಿ ಸಂಕಷ್ಟ ಹರ ಚತುರ್ಥಿಯಂದು ನಂಬಿದ ಸಹಸ್ರಾರು ಭಕ್ತರು ಆನೆಗುಡ್ಡೆ ಶ್ರೀ ವಿನಾಯಕ ದೇವರ ದರ್ಶನ ಪಡೆದು ಸೇವೆಯನ್ನು ಮಾಡಿಸಿಕೊಂಡು ಇಷ್ಟಾರ್ಥವನ್ನು ಪಡೆದು ಕೃತಾರ್ಥರಾಗುತ್ತಾರೆ. ಅಂಗಾರಕ ಚತುರ್ಥಿಯ ದಿನವು ಅತ್ಯಂತ ಮಂಗಳಕರವಾದುದು.
– ಕೆ. ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿಗಳು
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಾ. 16ರಂದು ನಡೆಯುವ ಸಂಕಷ್ಟ ಹರ ಚತುರ್ಥಿಯ ಹಿನ್ನೆಲೆಯಲ್ಲಿ ದೇಗುಲದ ಇತಿಹಾಸದಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ದೇವರ ಪರಮ ಭಕ್ತರು ಹಾಗೂ ದೇಗುಲದ ಅರ್ಚಕ ಮನೆತನದವರಾದ ಕೃಷ್ಣಾನಂದ ಉಪಾಧ್ಯಾಯರು ಸುಮಾರು 16 ಸಾವಿರ ಕಡುಬು (ಮೂಡೆ) ಶ್ರೀದೇವರಿಗೆ ನೈವೇದ್ಯ ನೀಡುತ್ತೇನೆ ಎಂದು ಸಂಕಲ್ಪ ಹೊಂದಿದ್ದಾರೆ.
– ಕುಂಭಾಶಿ ರವಿರಾಜ್ ಉಪಾಧ್ಯಾಯ, ಆನುವಂಶಿಕ ಪರ್ಯಾಯ ಅರ್ಚಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ
Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.