![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 12, 2024, 5:52 PM IST
ಕುಂದಾಪುರ: ಇಲ್ಲಿನ ಹೆಂಗವಳ್ಳಿಯ ರೆಸಾರ್ಟ್ ವೊಂದರಲ್ಲಿ ಕುಟುಂಬ ಸದಸ್ಯರೊಂದಿಗೆ ರಜೆಯ ಸಂಭ್ರಮ ಕಳೆಯಲೆಂದು ಹೋಗಿದ್ದ ಬಾಲಕ ಈಜು ಕೊಳದಲ್ಲಿ ಇಳಿದಾಗ ಮುಳುಗಿ ಪ್ರಾಣ ಕಳೆದುಕೊಂಡ ಘಟನೆ ಏಪ್ರಿಲ್ 11 ರಂದು ಮಧ್ಯಾಹ್ನ 2 ಗಂಟೆಗೆ ನಡೆದಿದೆ.
ಹೂಡೆಯ ಆರಿಝ್ ಉಮ್ಮರ್ ಸೌಕುರ್(10) ಮೃತ ಬಾಲಕ. ಹೂಡೆಯ ಇಬಾದುಲ್ಲ ಅವರು ಕುಟುಂಬ ಸಮೇತರಾಗಿ ರೆಸಾರ್ಟ್ ಗೆ ಹೋಗಿದ್ದು, ಆರಿಝ್ ಮಕ್ಕಳೊಂದಿಗೆ ಆಟ ಆಡುತ್ತ ನೀರಿನಲ್ಲಿ ಬಿದ್ದಿದ್ದಾನೆ. ಈಜು ಕೊಳ ಮತ್ತು ಸುತ್ತಮುತ್ತಲೂ ಹತ್ತಾರು ಜನರಿದ್ದರೂ ಎಲ್ಲರೂ ಸಂಭ್ರಮಿಸುತ್ತಿದ್ದ ಕಾರಣ ಆತನನ್ನು ರಕ್ಷಿಸುವುದು ಸಾಧ್ಯವಾಗಲಿಲ್ಲ. ಬೊಬ್ಬೆ ಕೇಳಿ ಕುಟುಂಬ ಸದಸ್ಯರು ಮತ್ತು ಸ್ಥಳದಲ್ಲಿದ್ದವರು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ, ಹಾಲಾಡಿಯ ಆಸ್ಪತ್ರೆಗೆ ಬಂದು ಪರಿಶೀಲಿಸಿದಾಗ ವೈದ್ಯರು ಆರಿಝ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಾಲಕನ ಸಾವಿಗೆ ರೆಸಾರ್ಟ್ ನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ, ಲೈಫ್ ಜಾಕೆಟ್ ಮತ್ತು ಲೈಫ್ ಗಾರ್ಡ್ ಹಾಗೂ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದು ಆರೋಪ ಕೇಳಿ ಬಂದಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.