ಕುಂದಾಪುರ: ಮುಂದುವರಿದ ಮರಳಿನ ಉರುಳು
ಸರಕಾರಿ ಮರಳಿನಲ್ಲಿ ಬರೀ ಕಲ್ಲು
Team Udayavani, May 17, 2019, 6:03 AM IST
ಕುಂದಾಪುರ: ಮರಳಿನ ಹೆಸರಿನಲ್ಲಿ ಅದೆಷ್ಟೋ ಚುನಾವಣೆಗಳು ಬಂದವು, ಹೋದವು. ಮರಳಿನ ಲಾಭ ಪಡೆದು ಕೆಲವರು ಗೆದ್ದರು, ಕೆಲವರು ಬಿದ್ದರು. ಆದರೆ ಮರಳು ಸಮಸ್ಯೆ ಇದುವರೆಗೂ ಇತ್ಯರ್ಥವಾಗಲೇ ಇಲ್ಲ. ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಯತ್ನಿಸಿದೆಯಾದರೂ ಕುಂದಾಪುರ ತಾಲೂಕಿನಲ್ಲಿ ಮರಳು ದೊರೆಯಲು ಇದುವರೆಗೂ ಯಾವುದೇ ಕ್ರಮ ಗಳಾಗಿಲ್ಲ. ಕೊಡುತ್ತಿರುವ ಸ್ವಲ್ಪ ಮರಳಿನಲ್ಲೂ ಬರಿ ಕಲ್ಲು.
ಅಸಲಿಗೆ ಮಳೆಗಾಲದ ಎರಡು ತಿಂಗಳ ನಿಷೇಧ ಅವಧಿ ಮುಗಿದು ಕಳೆದ ವರ್ಷ ಆ. 1ರಿಂದಲೇ ಮರಳುಗಾರಿಕೆ ಆರಂಭವಾಗಬೇಕಿತ್ತು. ಸಿಆರ್‌ಝೆಡ್ ವ್ಯಾಪ್ತಿಯ ಮರಳು ದಿಬ್ಬ ತೆರವುಗಾರಿಕೆಯೂ ನಡೆದಿಲ್ಲ, ನಾನ್ ಸಿಆರ್‌ಝೆಡ್ ವ್ಯಾಪ್ತಿಯ ಮರಳುಗಾರಿಕೆಗೆ ಉಡುಪಿಯಲ್ಲಿ ಅನುಮತಿ ದೊರೆತಿದ್ದರೂ ಕುಂದಾಪುರದಲ್ಲಿ ದೊರೆತಿಲ್ಲ. ಇದರಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಬಾಕಿಯಾದ ಮನೆ ಕಟ್ಟಡ ಕಾಮಗಾರಿ ಇನ್ನೂ ಅರ್ಧಕ್ಕೆ ನಿಂತಿದೆ. ಬ್ಯಾಂಕ್ ಸಾಲ ಮಾಡಿ ಮನೆ ಅಥವಾ ವಾಣಿಜ್ಯ ಕಟ್ಟಡ ಕಟ್ಟಲಾರಂಭಿಸಿದವರು ಅತ್ತ ಬ್ಯಾಂಕಿಗೆ ಕಂತು ತುಂಬಲಾರದೇ, ಇತ್ತ ಕಟ್ಟಡ ಕಾಮಗಾರಿ ಪೂರೈಸಲಾಗದೇ ಒದ್ದಾಡುತ್ತಿದ್ದಾರೆ. ಬ್ಯಾಂಕ್‌ಗೆ ಕಂತು ಸಮರ್ಪಕವಾಗಿ ಕಟ್ಟದಿದ್ದರೆ ಸಾಲಗಾರರ ವಿಶ್ವಾಸಾರ್ಹತೆ (ಸಿಬಿಲ್ ರೇಟ್) ಕೂಡ ಕಡಿಮೆಯಾಗುತ್ತದೆ. ಸಾಲದ ಮೂರು ಕಂತು ಬಾಕಿಯಾದರೆ ಮುಂದಿನ ಕಾನೂನು ಕ್ರಮಕ್ಕೆ ಬ್ಯಾಂಕ್‌ನವರು ಮುಂದಾಗುವ ಆತಂಕ ಸಾಲಗಾರರದ್ದಾಗಿದೆ. ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಬೇಕೆಂದು ಮನೆ ದುರಸ್ತಿಗೆ ಮುಂದಾದವರಿಗೆ ಮರಳಿಲ್ಲದ ಆಘಾತ.
ಮರಳು ಪೂರೈಕೆ
ಜಿಲ್ಲಾಡಳಿತ ವಿವಿಧ ಇಲಾಖೆಗಳಿಗೆ ಮರಳು ದಿಬ್ಬ ಗುರುತಿಸಿ ಸರಕಾರಿ ದರದಲ್ಲಿ ನೀಡುವಂತೆ ಸೂಚನೆ ನೀಡಿದೆ. ಆದರೆ ಅದು ಸಾಲುತ್ತಿಲ್ಲ. ಜತೆಗೆ ದರವೂ ಹೆಚ್ಚಾಯಿತು ಎಂಬ ಅಭಿಪ್ರಾಯ ಇದೆ. ಸರಕಾರದ ವಸತಿ ಯೋಜನೆಗೆ 1.25 ಲಕ್ಷ ರೂ. ಅನುದಾನ ಕೊಟ್ಟರೆ ಅದರಲ್ಲಿ 6 ಲೋಡು ಮರಳು ಬರುವುದಿಲ್ಲ. ಕೆಆರ್‌ಐಡಿಎಲ್ ಮೂಲಕ ಹಾಲಾಡಿ ಹೊಳೆಯಿಂದ ಮರಳು ನೀಡಲು ಅವಕಾಶ ಇದೆ. ಆದರೆ ಅಲ್ಲಿನ ಮರಳಿನಲ್ಲಿ ಕಲ್ಲಿನ ಪ್ರಮಾಣವೇ ಹೆಚ್ಚಾದ ಕಾರಣ ಜನರಿಗೆ ಉಪಕಾರಕ್ಕಿಂತ ಉಪದ್ರವೇ ಆಗುತ್ತಿದೆ. 50 ಶೇ.ದಷ್ಟು ಕೂಡ ಉತ್ತಮ ಮರಳು ಇರುವುದಿಲ್ಲ ಎನ್ನುತ್ತಾರೆ ಮರಳು ತಂದ ಫಲಾನುಭವಿಗಳು. ಇದರಿಂದಾಗಿ ಅನೇಕರು ಮರಳು ಬೇಕೆಂದು ಡಿಡಿ ಕೊಟ್ಟವರು ಇಂತಹ ಮರಳು ಬೇಕಿಲ್ಲ ಎಂದು ಹಣ ವಾಪಸ್ ಪಡೆಯುತ್ತಿರುವ ವಿದ್ಯಮಾನ ನಡೆದಿದೆ ಎನ್ನಲಾಗಿದೆ.
ಸ್ಥಗಿತ
ಅಗತ್ಯವಿರುವ ಇಲಾಖೆಗಳಿಗೆ ಮರಳು ದಿಬ್ಬ ಗುರುತಿಸಿ ನೀಡಲಾಗುತ್ತಿದೆ. ಆದರೆ ಲೋಕೋಪಯೋಗಿ ಇಲಾಖೆಗೆ ಇನ್ನೂ ನೀಡಿಲ್ಲ. ಎರಡು ದಿಬ್ಬಗಳನ್ನು ಗುರುತಿಸಲಾಗಿದ್ದರೂ ಚುನಾವಣೆ ಘೊಷಣೆಯಾದ ಕಾರಣ ಪ್ರಕ್ರಿಯೆ ಬಾಕಿಯಾಗಿದೆ. ಇದರಿಂದಾಗಿ ಬಹುತೇಕ ಸರಕಾರಿ ಕಾಮಗಾರಿಗಳು ಸ್ಥಗಿತಗೊಂಡಿವೆ. ತುರ್ತು ಕಾಮಗಾರಿಗೆ ಉಡುಪಿಯಿಂದ ಮರಳು ತರಲಾಗುತ್ತಿದೆ. ಇದು ಟೆಂಡರ್ ವಹಿಸಿಕೊಂಡ ದರಕ್ಕಿಂತ ದುಬಾರಿಯಾಗುತ್ತಿದೆ ಎನ್ನುತ್ತಾರೆ ಗುತ್ತಿಗೆದಾರರು.
ಸರಕಾರಿ ಮರಳು ಖಾಸಗಿಯಷ್ಟು ಅಲ್ಲದಿದ್ದರೂ ದೂರದಿಂದ ತರಬೇಕಾದ ಕಾರಣ ದುಬಾರಿಯಾಗಿದೆ. ಹಾಲಾಡಿಯಿಂದ ಬೈಂದೂರಿಗೆ 5 ಸಾವಿರ ರೂ., ಹೆಮ್ಮಾಡಿಗೆ 4 ಸಾವಿರ ರೂ. ಲಾರಿ ಬಾಡಿಗೆ ಇದೆ. 3 ಯುನಿಟ್ ಮರಳು ತುಂಬುವ ಸಾಮರ್ಥ್ಯದ ಲಾರಿಗೆ ಕೇವಲ 2 ಯುನಿಟ್ ಮಾತ್ರ ಕಳುಹಿಸಲಾಗುತ್ತಿದೆ. ಇದರಿಂದಾಗಿ ಹೆಚ್ಚುವರಿ ಬೇಕಾದರೆ ಎರಡನೇ ಬಾರಿ ಹೋಗಬೇಕಾದ ಅನಿವಾರ್ಯ. 8 ಯುನಿಟ್ ಮರಳಿಗೆ 20,500 ರೂ. ದರ ವಿಧಿಸಲಾಗುತ್ತಿದೆ. ಆದರೆ ಕಲ್ಲು ಹೆಚ್ಚಾದ ಕಾರಣ ನಷ್ಟವಾಗುತ್ತಿದೆ ಎಂದು ಫಲಾನುಭವಿಗಳು ದೂರುತ್ತಿದ್ದಾರೆ.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.