ಕುಂದಾಪುರ: ಕಾರ್ಟೂನ್ ಹಬ್ಬಕ್ಕೆ ಚಾಲನೆ
Team Udayavani, Nov 24, 2019, 5:09 AM IST
ಕುಂದಾಪುರ: ಭಾರತೀಯ ಶೈಕ್ಷಣಿಕ ಪದ್ಧತಿ ಬ್ರಿಟಿಷರಿಗೆ ಬೇಕಾದ ಮಾದರಿಯಲ್ಲಿ ಇದ್ದು ನಮ್ಮತನವನ್ನು ಉಳಿಸಿಕೊಳ್ಳುವ ಗುರುಕುಲ ಮಾದರಿಯ ಜೀವನ ಪದ್ಧತಿಯನ್ನು ಕಲಿಸುವ ಶೈಕ್ಷಣಿಕ ವ್ಯವಸ್ಥೆ ಬೇಕಿದೆ ಎಂದು ಸಿನೆಮಾ ನಟ ರಿಷಬ್ ಶೆಟ್ಟಿ ಹೇಳಿದರು.
ಅವರು ಶನಿವಾರ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನ. 23ರಿಂದ 26ರ ವರೆಗೆ ನಗುವಿನ ಹಾದಿಯಲ್ಲಿ ಕಾರ್ಟೂನ್ ಯಾತ್ರೆ ಎಂಬ ಕಾರ್ಟೂನ್ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ಗಾಂಧಿ -150 ಈಶ್ವರ ಅಲ್ಲಾ ತೇರೋ ನಾಮ್ ಕುರಿತು ದಿಕ್ಸೂಚಿ ಭಾಷಣಗೈದು, ಅಸ್ಪೃಶ್ಯತೆ, ಸೌಹಾರ್ದ, ಮಹಿಳಾ ಸಬಲೀಕರಣವನ್ನು ಗಾಂಧಿ ಅನುಸರಣಯೋಗ್ಯವಾಗಿ ತೋರಿಸಿಕೊಟ್ಟಿದ್ದಾರೆ. ಆದರೆ ನಾವಿನ್ನೂ ಅದರ ಅನುಷ್ಠಾನದಲ್ಲಿ ಪರಿಪೂರ್ಣತೆ ಸಾಧಿಸಿಲ್ಲ. ಬೇರೆಯವರು ತಪ್ಪು ಮಾಡಿದಾಗಲೂ ಸ್ವಯಂ ಶಿಕ್ಷೆ ಅನುಭವಿಸುತ್ತಿದ್ದ ಜಗತ್ತಿನ ಏಕೈಕ ನಾಯಕ ಎಂದರೆ ಗಾಂಧಿ ಮಾತ್ರ ಎಂದರು.
ಮಣಿಪಾಲ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ| ವರದೇಶ ಹಿರೇಗಂಗೆ, ಸಮಾಜದ ಓರೆಕೋರೆಗಳನ್ನು ಹೇಳುವುದು ಮಾಧ್ಯಮ. ಇವುಗಳನ್ನು ನಿಲ್ಲಿಸಿದರೂ ಅಭಿವ್ಯಕ್ತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮಾ ನಿರ್ಮಾಪಕ ಯಾಕೂಬ್ ಗುಲ್ವಾಡಿ, ಕಾರ್ಯಕ್ರಮದ ಸಂಘಟಕ ಕಾಟೂìನಿಸ್ಟ್ ಸತೀಶ್ ಆಚಾರ್ಯ ಉಪಸ್ಥಿತರಿದ್ದರು.
ಹಿರಿಯ ವ್ಯಂಗ್ಯಚಿತ್ರಗಾರರಾದ ವಿ.ಜಿ. ನರೇಂದ್ರ ಬೆಂಗಳೂರು, ಸುರೇಂದ್ರ ಚೆನ್ನೈ, ಪವರ್‌ಲಿಫ್ಟರ್ ವಿಶ್ವನಾಥ ಗಾಣಿಗ ಅವರನ್ನು ಸಮ್ಮಾನಿಸಲಾಯಿತು. ರಿಷಬ್ ಶೆಟ್ಟಿ ಅವರಿಗೆ ಕುಂದಾಪುರ ಪರಿಸರದ ಕನ್ನಡ ಶಾಲೆಗಳ ಮಕ್ಕಳಿಂದ ಗೌರವ ನಮನ ಸಲ್ಲಿಸಲಾಯಿತು.
ಅವಿನಾಶ್ ಕಾಮತ್ ನಿರ್ವಹಿಸಿದರು. ನಾನಾ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕ್ಯಾರಿಕೇಚರ್ ಬಿಡಿಸಿ ಬರುವ ನಿಧಿಯನ್ನು ಚಿತ್ರನಿಧಿ ಮೂಲಕ ಅರ್ಹರಿಗೆ ನೀಡುವ ಯೋಜನೆಯಿದೆ. ಇನ್ನು ಮೂರು ದಿನಗಳಲ್ಲಿ ವ್ಯಂಗ್ಯಚಿತ್ರಕಾರರ ಜತೆ ಸಂವಾದ, ನಗೆ ಹಬ್ಬ ಇತ್ಯಾದಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.