ಕುಂದಾಪುರ: ಹಿಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ನಿರೀಕ್ಷೆ
ಹಿಂಗಾರಿನಲ್ಲಿ 3,720 ಹೆ. ಗುರಿ ; 1,816 ಹೆ. ಸಾಧನೆ; ಮುಂಗಾರಿನಲ್ಲಿ ಶೇ. 97ರಷ್ಟು ಸಾಧನೆ
Team Udayavani, Dec 19, 2019, 4:10 AM IST
ಕುಂದಾಪುರ: ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಮುಂಗಾರಿನಲ್ಲಿ ಶೇ. 97 ರಷ್ಟು ಗುರಿ ಸಾಧಿಸಲಾಗಿದ್ದು, ಹಿಂಗಾರು ಹಂಗಾಮಿನಲ್ಲಿಯೂ ರೈತರಿಂದ ಉತ್ತಮ ಬೆಳೆಯ ನಿರೀಕ್ಷೆ ಹೊಂದಲಾಗಿದೆ. ಈ ಬಾರಿಯ ಹಿಂಗಾರು ಹಂಗಾಮಿನಲ್ಲಿ ಒಟ್ಟು 3,720 ಹೆಕ್ಟೇರ್ ಪ್ರದೇಶಗಳಲ್ಲಿ ಕೃಷಿ ಬೆಳೆಯ ಗುರಿ ಹೊಂದಲಾಗಿದ್ದು, ಈ ಪೈಕಿ ಈವರೆಗೆ 1,816 ಹೆಕ್ಟೇರ್ ಪ್ರದೇಶಗಳಲ್ಲಿ ಗುರಿ ಸಾಧಿಸಲಾಗಿದೆ. ಜನವರಿವರೆಗೂ ಕೃಷಿ ಚಟುವಟಿಕೆ ನಡೆಯಲಿದ್ದು, ಈ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
3 ಹೋಬಳಿಗಳಾದ ಕುಂದಾಪುರ, ಬೈಂದೂರು ಹಾಗೂ ವಂಡ್ಸೆಯನ್ನು ಒಳಗೊಂಡ ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಈ ಭಾಗದಲ್ಲಿ ಭತ್ತ, ಉದ್ದು, ನೆಲಗಡಲೆ, ಹೆಸರು, ಹುರುಳಿ, ಅಲಸಂಡೆ, ಮುಸುಕಿನ ಜೋಳ ಹಾಗೂ ಕಬ್ಬು ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ. ಇದರಲ್ಲಿ ಈವರೆಗೆ ಶೇ.48 ರಷ್ಟು ಕೂಡ ಗುರಿ ಸಾಧಿಸಲಾಗಿದೆ. ಆದರೆ 1,335 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿಯ ಹೊಂದಿದ್ದು, ಈ ಪೈಕಿ ಈವರೆಗೆ ಕೇವಲ 520 ಹೆಕ್ಟೇರ್ ಪ್ರದೇಶದಲ್ಲಿ ಅಷ್ಟೇ ಬೆಳೆಯಲಾಗಿದೆ. ಭತ್ತ ಕೃಷಿಯ ಗುರಿ ನಿಗದಿಯ ಶೇ.38 ರಷ್ಟು ಮಾತ್ರ ಸಾಧ್ಯವಾಗಿದೆ.
ಎಷ್ಟೆಷ್ಟು?
ಉದ್ದು ಒಟ್ಟಾರೆ 875 ಹೆ. ಗುರಿಯಲ್ಲಿ 560 ಹೆ. ಬೆಳೆಸಲಾಗಿದೆ. ಹೆಸರು ಬೆಳೆ 40 ಹೆ. ಗುರಿಯಿದ್ದು, ಇದರಲ್ಲಿ 8 ಹೆ. ಗುರಿ ಸಾಧ್ಯವಾಗಿದೆ. ಅಲಸಂಡೆ ಬೆಳೆ 40 ಹೆ. ಪ್ರದೇಶದಲ್ಲಿ ಗುರಿಯಿದ್ದು, ಈ ವರೆಗೆ ಎಲ್ಲಿಯೂ ಬೆಳೆಸಲಾಗಿಲ್ಲ. ಮುಸುಕಿನ ಜೋಳವನ್ನು 5 ಹೆ. ಪ್ರದೇಶದಲ್ಲಿ ಬೆಳೆಸಲಾಗಿದೆ. ಕಬ್ಬು 28 ಹೆ. ಪ್ರದೇಶದಲ್ಲಿ ಬೆಳೆಯಲಾಗಿದೆ.
ಮುಂಗಾರು ಶೇ.97 ಸಾಧನೆ
ಅವಿಭಜಿತ ಕುಂದಾಪುರ ತಾಲೂಕಿನ 3 ಹೋಬಳಿಗಳಲ್ಲಿ ಒಟ್ಟು ಸೇರಿ ಮುಂಗಾರು ಹಂಗಾಮಿನಲ್ಲಿ ಶೇ. 97 ರಷ್ಟು ಗುರಿ ಸಾಧಿಸಲಾಗಿದೆ. ಒಟ್ಟಾರೆ 13,725 ಹೆ. ಪ್ರದೇಶದಲ್ಲಿ ಕೃಷಿ ಮಾಡುವ ಗುರಿ ಹೊಂದಲಾಗಿದ್ದು, ಈ ಪೈಕಿ 13,370 ಹೆ. ಪ್ರದೇಶದಲ್ಲಿ ಬೆಳೆಸಲಾಗಿದೆ.
ನೆಲಗಡಲೆ ಗರಿಷ್ಠ
ಜಿಲ್ಲೆಯಲ್ಲಿಯೇ ಅತ್ಯಧಿಕ ನೆಲಗಡಲೆ ಬೆಳೆಯುವ ತಾಲೂಕು ಕುಂದಾಪುರವಾಗಿದೆ. ಈ ಬಾರಿ ಒಟ್ಟು 1,430 ಹೆ. ಗುರಿಯಿದ್ದು, ಇದರಲ್ಲಿ 695 ಹೆ. ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಪೈಕಿ ಕುಂದಾಪುರ ಹೋಬಳಿಯಲ್ಲಿ 200 ಹೆ. ಪೈಕಿ 190 ಹೆ., ಬೈಂದೂರಲ್ಲಿ 500 ಹೆ. ಹಾಗೂ ವಂಡ್ಸೆಯಲ್ಲಿ ಕೇವಲ 5 ಹೆ. ಪ್ರದೇಶದಲ್ಲಿ ಅಷ್ಟೇ ಬೆಳೆಯಲಾಗಿದೆ.
ಉತ್ತಮ ಬೆಳೆ ಸಾಧ್ಯತೆ
ಈ ಬಾರಿ ಮುಂಗಾರಿನಲ್ಲಿಯೂ ಮಳೆಯ ಪ್ರಮಾಣ ಚೆನ್ನಾಗಿ ಇದ್ದುದರಿಂದ ಎಲ್ಲೆಡೆ ಉತ್ತಮ ಕೃಷಿಯಾಗಿದೆ. ಹಿಂಗಾರಿನಲ್ಲಿಯೂ ಉತ್ತಮ ಮಳೆಯಾಗಿದ್ದು, ಒಳ್ಳೆಯ ಬೆಳೆಯಾಗುವ ನಿರೀಕ್ಷೆಯಿದೆ. ಉದ್ದು, ನೆಲಗಡಲೆ ಬೆಳೆಸಲು ರೈತರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು 88 ಕ್ವಿಂಟಾಲ್ ಭತ್ತ, 12.60 ಕ್ವಿಂಟಾಲ್ ಉದ್ದು, 205 ಕ್ವಿಂಟಾಲ್ ನೆಲಗಡಲೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ.
– ರೂಪಾ, ಸಹಾಯಕ ಕೃಷಿ ನಿರ್ದೇಶಕಿ, ಕುಂದಾಪುರ
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.