ಕುಂದಾಪುರ ಅಗ್ನಿಶಾಮಕ ಇಲಾಖೆಗೆ ಇಕ್ಕಟ್ಟಾದ ರಸ್ತೆಯೇ ಅಡ್ಡಿ!
Team Udayavani, Jul 26, 2018, 6:00 AM IST
ಬಸ್ರೂರು : ಅವಘಡಗಳೇನಾದರೂ ಸಂಭವಿಸಿದಲ್ಲಿ ಕುಂದಾಪುರ ಅಗ್ನಿಶಾಮಕ ಠಾಣೆಯಿಂದ ವಾಹನಗಳು ತರಾತುರಿಯಲ್ಲಿ ಹೊರಡುವುದು ಕಷ್ಟ. ಕಾರಣ ಇಲ್ಲಿನ ತೀವ್ರ ಇಕ್ಕಟ್ಟಾದ ರಸ್ತೆ!
ಕುಂದಾಪುರದ ಕೋಣಿಯಿಂದ 6 ಕಿ.ಮೀ. ದೂರದ ಕೋಣಿಯಲ್ಲಿ ರಾಜ್ಯ ಹೆದ್ದಾರಿಯಿಂದ 1.5 ಕಿ.ಮೀ. ದೂರದಲ್ಲಿ ಅಗ್ನಿಶಾಮಕ ಠಾಣೆಯಿದೆ. ಆದರೆ ರಸ್ತೆ ತೀವ್ರ ಇಕ್ಕಟ್ಟಾಗಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.
ಇಕ್ಕಟ್ಟಿನ ರಸ್ತೆಯಲ್ಲಿ ಬಂಧಿ!
ಕುಂದಾಪುರದ ಹಳೆ ಬಸ್ ನಿಲ್ದಾಣದ ಬಳಿ 1992ರಿಂದ ಕಾರ್ಯಾಚರಿಸುತ್ತಿದ್ದ ಠಾಣೆ 1998ರಲ್ಲಿ ಕೋಣಿ ಬದಿಗೆ ಸ್ಥಳಾಂತರವಾಗಿತ್ತು. ಸಿಬಂದಿಗಳಿಗೆ 14 ವಸತಿಗೃಹಗಳೂ ಇಲ್ಲಿವೆ. ಕುಂದಾಪುರ ಪುರಸಭಾ ವ್ಯಾಪ್ತಿಯ ಹೊರಗೆ ಈ ಠಾಣೆಯಿದ್ದು ಸಂಪರ್ಕ ರಸ್ತೆ ಸಮರ್ಪಕವಾಗಿಲ್ಲ. ಈ ಠಾಣೆಗೆ ಬೈಂದೂರು, ಹಂಗಾರಕಟ್ಟೆ ಸೇತುವೆ, ಬೆಳ್ವೆ-ಮಡಾಮಕ್ಕಿ -ಕಾಸನಮಕ್ಕಿ-ಅಮಾಸೆಬೈಲು ತನಕ ವ್ಯಾಪ್ತಿಯಿದ್ದು ಇಲ್ಲಿಂದ ಅಗತ್ಯ ಬಿದ್ದಾಗ ಇಕ್ಕಟ್ಟಾದ ರಸ್ತೆಯಲ್ಲೇ ಹೊರಡಬೇಕಾಗುತ್ತದೆ. ಇದಕ್ಕಾಗಿ ರಸ್ತೆ ಅಗಲೀಕರಣ ಅಗತ್ಯವಾಗಿದೆ.
ಮನವಿ
ರಸ್ತೆ ಅಗಲೀಕರಣಗೊಳಿಸುವಂತೆ ಅಗ್ನಿಶಾಮಕ ಠಾಣಾ ಅಧಿಕಾರಿ ವೆಂಕಟರಮಣ ಮೊಗೇರ ಅವರು ಮೇಲಧಿ ಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇನ್ನು ರಸ್ತೆ ಅಗಲೀಕರಣ ಮಾತ್ರ ನಡೆದಿಲ್ಲ.
ಮನವಿ ಮಾಡಲಾಗಿದೆ
ಇಲ್ಲಿನ ಸಂಪರ್ಕ ರಸ್ತೆಯ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಪ್ರಯೋಜನವಾಗಿಲ್ಲ . ಅಗ್ನಿ ಅವಘಡಗಳು ಸಂಭವಿಸಿದ ತಕ್ಷಣ ತೆರಳಲು ಅಗಲ ಕಿರಿದಾದ ರಸ್ತೆಯು ತೊಡಕಾಗಿದೆ.
– ವೆಂಕಟರಮಣ ಮೊಗೇರ,
ಠಾಣಾಧಿಕಾರಿ, ಕುಂದಾಪುರ ಅಗ್ನಿಶಾಮಕ ಠಾಣೆ
ಮೊದಲೇ ಯೋಚಿಸಬೇಕಿತ್ತು
ಕೋಣಿಯಲ್ಲಿ ಠಾಣೆ ಸ್ಥಾಪನೆಯಾಗುವ ಸಂದರ್ಭದಲ್ಲೆ ನಾನು ಗ್ರಾ.ಪಂ. ಸದಸ್ಯನಾಗಿ ಈ ಇಕ್ಕಟ್ಟಿನ ರಸ್ತೆಯ ಬಗ್ಗೆ ಪ್ರಸ್ತಾಪಿಸಿದ್ದೇನೆ. ಆದರೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈಗ ಸಾಲು ಸಾಲು ಮನೆಗಳಿರುವುದರಿಂದ ಅಗಲೀಕರಣ ಗ್ರಾ.ಪಂ.ಗೆ ಸಾಧ್ಯವಾಗುತ್ತಿಲ್ಲ. ಸರಕಾರ ಇಲ್ಲಿ ವಾಸಿಸುವ ಮಂದಿಗೆ ಬೇರೆಡೆ ಜಾಗ ಕಲ್ಪಿಸಿ ಪರಿಹಾರ ನೀಡಿದರೆ ಇಕ್ಕಟ್ಟಿನ ರಸ್ತೆ ಅಗಲ ಮಾಡಬಹುದು.
– ಕೆ. ಸಂಜೀವ ಮೊಗವೀರ,
ಅಧ್ಯಕ್ಷರು, ಗ್ರಾ.ಪಂ. ಕೋಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.