ಮುಂಬೈನಿಂದ ಸರಕು ಸಾಗಾಟ ವಾಹನದಲ್ಲಿ ಬಂದಿದ್ದ ಮಂಡ್ಯ ಸೋಂಕಿತನಿಗಿದೆಯೇ ಕುಂದಾಪುರ ನಂಟು?
ವಿವಿಧ ಪೆಟ್ರೋಲ್ ಬಂಕ್ ಗಳಲ್ಲಿ ಪರಿಶೀಲನೆ
Team Udayavani, Apr 27, 2020, 10:43 PM IST
ಕುಂದಾಪುರ: ಮುಂಬಯಿನಿಂದ ಸರಕು ಸಾಗಾಟ ವಾಹನದಲ್ಲಿ ಬಂದಿದ್ದ ಮಂಡ್ಯ ಮೂಲದ ವ್ಯಕ್ತಿಯೊಬ್ಬನಿಗೆ ಈಗ ಕೋವಿಡ್ 19 ಸೋಂಕು ಇರುವುದು ಪತ್ತೆಯಾಗಿದ್ದು, ಆತ ಕುಂದಾಪುರ ಭಾಗದ ಪೆಟ್ರೋಲ್ ಬಂಕ್ ವೊಂದರಲ್ಲಿ ಸ್ನಾನ ಮಾಡಿರುವುದಾಗಿ ತಿಳಿದು ಬಂದಿದ್ದು,ಆದರೆ ಆ ಪೆಟ್ರೋಲ್ ಬಂಕ್ ಯಾವುದೆಂದು ಪೊಲೀಸರು ಹಾಗೂ ಆರೋಗ್ಯ ಇಲಾಖೆಯವರು ಪರಿಶೀಲನೆ ನಡೆಸುತ್ತಿದ್ದಾರೆ.
ಬೀಚ್ ಸಮೀಪದ ಬಂಕ್ ವೊಂದರಲ್ಲಿ ಸ್ನಾನ ಮಾಡಿರುವುದಾಗಿ ಸೋಂಕಿತ ವ್ಯಕ್ತಿ ಹೇಳಿದಂತೆ ಶಿರೂರಿನಿಂದ ಕುಂದಾಪುರದವರೆಗಿನ ಪೆಟ್ರೋಲ್ ಬಂಕ್ ಗಳ ಪೈಕಿ ತ್ರಾಸಿಯಲ್ಲಿರುವ ಪೆಟ್ರೋಲ್ ಬಂಕ್ ಮಾತ್ರವಿದ್ದು, ತಪಾಸಣೆ ನಡೆಸಿದಾಗ ಅಲ್ಲಿಗೆ ಬರಲಿಲ್ಲ. ಅಲ್ಲಿಂದ ಹೆದ್ದಾರಿಯಲ್ಲಿ ಎ.21 ರ ಸಂಜೆ 5.19 ಕ್ಕೆ ಸಂಚರಿಸಿದ್ದು, ತಲ್ಲೂರಿನ ಪೆಟ್ರೋಲ್ ಬಂಕ್ ಕೂಡ ಅಲ್ಲವೆಂದು ತಿಳಿದು ಬಂದಿದ್ದು, ಅಲ್ಲಿ ಸಂಜೆ 6.10ರ ಸುಮಾರಿಗೆ ಸಂಚರಿಸಿದ್ದು, ಕುಂದಾಪುರದ ಸಂಗಮ್ ಬಳಿಯ ಪೆಟ್ರೋಲ್ ಬಂಕ್ ನಲ್ಲಿಯೂ ತಪಾಸಣೆ ನಡೆಸಲಾಗಿದ್ದು, ಅಲ್ಲಿಯೂ ಪೆಟ್ರೋಲ್ ಹಾಕಿಲ್ಲ. ಆದರೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಆ ವಾಹನ ಸಾಸ್ತಾನ ಟೋಲ್ ಗೇಟ್ ನಿಂದ ಮುಂದಕ್ಕೆ ಸಂಚರಿಸಿದ್ದು, ಅಂದರೆ ಸಂಜೆ 6 ಗಂಟೆಯಿಂದ ಬೆಳಗ್ಗಿನ ಜಾವ 3ಗಂಟೆಯವರೆಗೆ ಆ ವಾಹನ ಕುಂದಾಪುರ, ಕೋಟೇಶ್ವರ, ತೆಕ್ಕಟ್ಟೆ, ಕೋಟ, ಸಾಸ್ತಾನವರೆಗಿನ ಎಲ್ಲಿಯಾದರೂ ಒಂದು ಕಡೆ ನಿಲ್ಲಿಸಿರಬಹುದು. ಈ ವ್ಯಾಪ್ತಿಯಲ್ಲಿ ಬರುವ ಪೆಟ್ರೋಲ್ ಬಂಕ್ ಗಳಲ್ಲಿ ಎಲ್ಲಿಯಾದರೂ ಒಂದು ಕಡೆ ಸ್ನಾನ ಮಾಡಿರಬಹುದು ಎನ್ನಲಾಗುತ್ತಿದೆ.
ಒಂದು ವೇಳೆ ಆತ ಇಲ್ಲಿಯೇ ಸ್ನಾನ ಮಾಡಿರುವುದು ಖಾತ್ರಿಯಾದರೆ, ಪೆಟ್ರೋಲ್ ಬಂಕ್ ನ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಯನ್ನು ಕಂಟೋನ್ಮೆಂಟ್ ವಲಯವೆಂದು ಘೋಷಿಸಿ, ಸೀಲ್ ಡೌನ್ ಮಾಡಲು ಡಿಸಿಯವರು ಆದೇಶಿಸಿದ್ದಾರೆ. ಜತೆಗೆ ಪೆಟ್ರೋಲ್ ಬಂಕ್ ನ ಎಲ್ಲ ಸಿಬಂದಿಯನ್ನು ಹಾಗೂ ಆ ದಿನ ಶಿರೂರು ಗಡಿಯಲ್ಲಿನ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲರನ್ನು ಕೂಡ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸುವ ಸಾಧ್ಯತೆಯಿದೆ.
ಸೀಲ್ ಡೌನ್ ಮಾಡಿಲ್ಲ
ಕುಂದಾಪುರ ಭಾಗ ಯಾವ ಪೆಟ್ರೋಲ್ ಬಂಕ್ ಗಳನ್ನು ಕೂಡ ಸೀಲ್ ಡೌನ್ ಮಾಡಿಲ್ಲ. ಶಿರೂರಿನಿಂದ ಕುಂದಾಪುರ ವರೆಗಿನ ಪೆಟ್ರೋಲ್ ಬಂಕ್ ಗಳ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
-ಹರಿರಾಂ ಶಂಕರ್, ಕುಂದಾಪುರ ಎಎಸ್ ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.