ಮಿನಿ ವಿಧಾನ ಸೌಧ ಸ್ಲ್ಯಾಬ್ ಗೆ ತೇಪೆ
ಕಚೇರಿ ಸಿಬಂದಿಗೆ ಭಯದಲ್ಲೇ ಕಾರ್ಯನಿರ್ವಹಿಸುವ ಅನಿವಾರ್ಯ
Team Udayavani, Mar 19, 2020, 5:27 AM IST
ಕುಂದಾಪುರ: ಮಳೆ ಗಾಲದಲ್ಲಿ ಸೋರುತ್ತಿದ್ದ, ಕಾಂಕ್ರೀಟಿನ ಚಕ್ಕೆ ಗಳೇ ಉದುರಿ ಬೀಳುತ್ತಿದ್ದ ಮಿನಿ ವಿಧಾನ ಸೌಧದ ಸ್ಲ್ಯಾಬ್ ಗೆ ತೇಪೆ ಹಾಕಲಾಗಿದೆ.
ಫೌಂಡೇಶನ್ ಹಾಕುವಾಗಲೇ ಅಪಶಕುನ ಪ್ರಾರಂಭವಾಗಿ ಉದ್ಘಾಟನೆ ದಿನವೇ ಗಾರೆ ಬಿದ್ದು ಸುದ್ದಿಯಾಗಿದ್ದ ಮಿನಿ ವಿಧಾನಸೌಧದಲ್ಲಿ 23 ಸರಕಾರಿ ಕಚೇರಿ ಕಾರ್ಯಾರಂಭ ಮಾಡುತ್ತಿದೆ. ಮೂರು ಬಾರಿ ಸ್ಲ್ಯಾಬ್ ಗಾರೆ ಕಳಚಿಬೀಳುವ ಮೂಲಕ ದೊಡ್ಡ ಸುದ್ದಿಯಾಗಿತ್ತು. ಅನಂತರ ಮಳೆಗಾಲದಲ್ಲಿ ಕಟ್ಟಡ ಸೋರುವ ಮೂಲಕ ಮತ್ತೂಮ್ಮೆ ಸುದ್ದಿಯಾಯಿತು. ಎರಡನೇ ಬಾರಿ ಸ್ಲ್ಯಾಬ್ ಸಿಮೆಂಟ್ ಪ್ಲಾಸ್ಟರ್ ಸಿಬಂದಿ ಮೇಲೆ ಬಿದ್ದು, ಅದೃಷ್ಟವಶಾತ್ ಅನಾಹುತ ನಡೆಯದೇ ಸುದ್ದಿಗೆ ಗ್ರಾಸವಾಗಿತ್ತು. ಈಗ ಸೋರುವ ಸ್ಲಾéಬ್ ಮೇಲೆ ಮತ್ತೂಂದು ಸುತ್ತಿನ ಸಿಮೆಂಟ್ ಹಾಕಲಾಗಿದೆ.
ಸೋರುವುದು ನಿಂತಿಲ್ಲ
ಮಿನಿ ವಿಧಾನ ಸೌಧದಲ್ಲಿ ಧೈರ್ಯವಾಗಿ ಕೆಲಸ ಮಾಡೋದಕ್ಕೆ ಸಿಬಂದಿ ಹೆದರುತ್ತಾರೆ. ಮಳೆಗಾಲ ಬಂದರಂತೂ ಸಿಬಂದಿ ಕೊಡೆ ಹಿಡಿದು ಕೂರುವ ಸ್ಥಿತಿ. ಲೋಕೋಪಯೋಗಿ ಇಲಾಖೆ ಮೂಲಕ ಮಿನಿ ವಿಧಾನ ಸೌಧ ಕಟ್ಟಡ ಮಾಡಿದ್ದು, ಮಳೆ ನೀರು ಸೋರದಂತೆ ಸ್ಲಾéಬ್ ಮೇಲೆ ಕೂಡು ಸಂಧು ಆಧಾರ ಕಂಬಗಳಲ್ಲಿ ನೀರು ಇಳಿಯ ದಂತೆ ಸಿಮೆಂಟ್ ಪ್ಲಾಸ್ಟರ್ ಮಾಡಿದರೂ ಸೋರುವುದು ಕಡಿಮೆ ಆಗಿಲ್ಲ.
ಕಚೇರಿಗಳು
ಮಿನಿ ವಿಧಾನಸೌಧ ಹಿಂಭಾಗದ ನೆಲ ಅಂತಸ್ತಿನಲ್ಲಿ ಕಂದಾಯ, ಆಹಾರ, ಖಜಾನೆ, ನೋಂದಣಿ ಕಚೇರಿಗಳಿದ್ದು, ಮಳೆಗಾಲದಲ್ಲಿ ಸೋರುತ್ತಿದ್ದು, ಸೋರುವುದು ನಿಲ್ಲಿಸಲು ಸ್ಲಾéಬ್ ಮೇಲೆ ಮತ್ತೂಂದು ಸಿಮೆಂಟ್ ಹಾಸು ಹಾಕಲಾಗಿದೆ. ಸ್ಲ್ಯಾಬ್ ಸಮತಟ್ಟಾಗಿರದೆ ಇರುವುದರಿಂದ ಸಮತಟ್ಟು ಮಾಡಲು ಸಿಮೆಂಟ್ ಹಾಕಲಾಗುತ್ತದೆ ಎಂದು ಕೆಲಸ ನಿರ್ವಹಿಸಿದ ಮುಖ್ಯಸ್ಥರು ತಿಳಿಸಿದ್ದಾರೆ. ಸಿಮೆಂಟ್ ಸ್ಲಾéಬ್ ಹಾಕಿ ಅದು ಗಟ್ಟಿಯಾದ ಅನಂತರ ಅದರ ಮೇಲೆ ಮತ್ತೂಂದು ಹಾಸು ಹಾಕುವುದರಿಂದ ಹಾಕಿದ ಸಿಮೆಂಟ್ ಗಟ್ಟಿಯಾಗಿ ಕೂರುತ್ತದಾ ಎಂದರೆ ಕೆಮಿಕಲ್ ಸಿಂಪಡಣೆ ಮಾಡಿದ್ದೇವೆ ಎಂದಿದ್ದಾರೆ.
ಕಳಪೆ
ಮಿನಿ ವಿಧಾನಸೌಧ ಹಿಂದೆ ಎಸಿ ಕಚೇರಿಯಾಗಿದ್ದು, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಅತ್ಯಂತ ವಿಶಾಲ ವಾಗಿದ್ದು, ಹೆಂಚು ಮಾಡಿತ್ತು.
ಕಚೇರಿ ಕೂಡ ಸುಂದರ ಕಾಷ್ಠ ಕೆತ್ತನೆಯಲ್ಲಿ ಸುಂದರ ವಾಗಿತ್ತು. ಎಸಿ ಕಟ್ಟಡ ಕೆಡವಿ ಮಿನಿ ವಿಧಾನ ಸೌಧ ಕಟ್ಟಲು ವಿರೋಧವಿದ್ದು, ಹಳೆಯ ಕಟ್ಟಡ ಉಳಿಸಿಕೊಳ್ಳಬೇಕು ಎನ್ನುವ ಹೋರಾಟ ಕೂಡ ನಡೆದಿತ್ತು. ಇದೆಲ್ಲವನ್ನೂ ನಿವಾರಿಸಿಕೊಂಡು ಕಟ್ಟಡ ಕೆಲಸ ಆರಂಭವಾಗಿದ್ದು, ಕಾಮಗಾರಿ ಕಳಪೆ ಎನ್ನುವ ಕೂಗು ಕೂಡ ಆಗಲೇ ಎದ್ದಿತ್ತು. ಅನಂತರ ಕಟ್ಟಡ ಕಾಮಗಾರಿ ಸಂಪೂರ್ಣವಾಗದೆ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿತ್ತು. ಅಲ್ಲಲ್ಲಿ ಸೋರಿ ಪಾಚಿಕಟ್ಟಿದ ಗೋಡೆ, ಸ್ಲ್ಯಾಬ್ ಗಳು ಪಾಚಿಕಟ್ಟಿ ಕಪ್ಪಡರಿದೆ. ಸ್ಲ್ಯಾಬ್ ಗ ಹಾಕಿದ ಗಾರೆ ಅಲ್ಲಲ್ಲಿ ಕಳಚಿಬಿದ್ದು, ಮತ್ತೆ ಪ್ಲಾಸ್ಟ್ ಮಾಡಿದ ಚಿಹ್ನೆ ಕಾಣಿಸುತ್ತದೆ. ಇಷ್ಟೆಲ್ಲಾ ಕಳಪೆ ಇದ್ದರೂ ಕಾಮಗಾರಿ ಮಾಡಿದವರ ಬಗ್ಗೆ ಕ್ರಮ ಇಲ್ಲದೆ, ಅದರ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಹಣ ಸುರಿಯುತ್ತಿದೆ.
ಅಪಾಯಕಾರಿ
ಮಿನಿ ವಿಧಾನ ಸೌಧ ಕಟ್ಟಡವೇ ಅಪಾಯಕಾರಿ ಆಗಿದ್ದು, ಕಟ್ಟಡ ಕಟ್ಟುವಾಗಿ ಡಬಲ್ ಲೇಯರ್ ಮೂಲಕ ಕಬ್ಬಿಣಿದ ರಾಡ್ ಬಳಸದೆ ಸಿಂಗಲ್ ಆಗಿ ಉದ್ದುದ್ದಕ್ಕೆ ಜೋಡಿಸಿರುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಸೋರುವ ಜಾಗದಲ್ಲಿ ಸಿಮೆಂಟ್ ಪ್ಲಾಸ್ಟ್ ಮಾಡಿದರೂ ಸೋರುವುದು ನಿಂತಿಲ್ಲ. ಅಂತಾದ್ದರಲ್ಲಿ ಮತ್ತೆ ಸ್ಲ್ಯಾಬ್ ಮೇಲೆ ಸ್ಲ್ಯಾಬ್ ಹಾಕುವುದು ಎಷ್ಟು ಸರಿ ಅನ್ನುವುದು ಎಂಜಿನಿಯರ್ ಸ್ಪಷ್ಟಪಡಿಸಬೇಕು. ಸೋರುವುದನ್ನು ತಪ್ಪಿಸಲು ಮತ್ತೆ ಸ್ಲ್ಯಾಬ್ ಹಾಕಿದರೂ ಅದು ಕಚ್ಚದೆ ಮತ್ತೆ ಸೋರುವಿಕೆಗೆ ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ ಸ್ಥಳೀಯರು.
ಮಿನಿ ವಿಧಾನಸೌಧ ಸೋರುತ್ತಿರುವ ಕುರಿತು ಉದಯವಾಣಿ 2019ರ ಜೂ.23ರಂದು “ಮಿನಿಯಲ್ಲ ಹನಿ ವಿಧಾನಸೌಧ’ ಎಂದು ವರದಿ ಪ್ರಕಟಿಸಿತ್ತು. ಈ ಸಂದರ್ಭ ಲೋಕೋಪಯೋಗಿ ಇಲಾಖೆಗೆ ದುರಸ್ತಿಗೆ ಪತ್ರ ಬರೆಯಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದರು.
ಸಿಮೆಂಟ್ ಹಾಸು
ಲೋಕೋಪಯೋಗಿ ಇಲಾಖೆ ಮೂಲಕ ಮಿನಿ ವಿಧಾನ ಸೌಧ ಸೋರುವ ಸ್ಲ್ಯಾಬ್ ಗೆ ಸಿಮೆಂಟ್ ಹಾಸು ಹಾಕಲಾಗಿದೆ. ಸಿಮೆಂಟ್ ಹಾಸಿನ ಮೇಲೆ ಮತ್ತೂಂದು ಹಾಸು ಹಾಕಿದರೆ ಸರಿಯಾಗುತ್ತದಾ ಇಲ್ಲವಾ ಎನ್ನೋದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಗೊತ್ತು. ಅದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ತೆಗೆದುಕೊಂಡ ನಿರ್ಧಾರ.
-ತಿಪ್ಪೇಸ್ವಾಮಿ, ತಹಶೀಲ್ದಾರ್ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.