ಪುರಸಭಾ ವ್ಯಾಪ್ತಿಯ ಅನಧಿಕೃತ ಅಂಗಡಿಗಳ ತೆರವಿಗೆ ಸದಸ್ಯರ ಆಗ್ರಹ
Team Udayavani, Aug 31, 2017, 7:45 AM IST
ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ಅಂಗಡಿಗಳ ತೆರವಿಗೆ ನ್ಯಾಯಾಲಯದ ಆದೇಶ ನೀಡಿ ಹಲವು ದಿನಗಳೇ ಕಳೆದಿದ್ದರೂ ಇನ್ನೂ ಕೂಡಾ ತೆರವು ಗೊಳಿಸದ ಬಗ್ಗೆ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷದ ಸದಸ್ಯರ ನಡುವೆ ಚರ್ಚೆ ನಡೆಯಿತು.
ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿರು ಅನಧಿಕೃತ ಅಂಗಡಿಗಳ ತೆರವುಗೊಳಿಸಲು ಈಗಾಗಲೇ ನ್ಯಾಯಾಲಯ ಆದೇಶ ನೀಡಿದ್ದರೂ ಈ ತನಕ ತೆರವುಗೊಳಿಸದೇ ಇರುವ ಬಗ್ಗೆ ಸದಸ್ಯ ಸತೀಶ್ ಶೆಟ್ಟಿ ಸಭೆಯ ಗಮನಕ್ಕೆ ತಂದರು. ನ್ಯಾಯಾಲಯದ ಆದೇಶದಂತೆ ತುರ್ತು ತೆರವುಗೊಳಿಸಲು ಆದೇಶ ನೀಡಿದ್ದರಿಂದ ಯಾವುದೇ ಮೀನಮೇಷ ಮಾಡದೇ ತೆರವುಗೊಳಿಸಿ, ಜತೆಗೆ ನ್ಯಾಯಾಲಯದಿಂದ ಆದೇಶ ಬಂದಿರುವ ಇತರ ಅಂಗಡಿಗಳ ತೆರವುಗೊಳಿಸುವ ಪ್ರಕ್ರಿಯೆ ನಡೆಯಲಿ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸದಸ್ಯ ಶ್ರೀಧರ್ ಸೇರುಗಾರ್ ಈಗಾಗಲೇ ಪುರಸಭಾ ವ್ಯಾಪ್ತಿಯಲ್ಲಿ ಹಲವು ಹೊಸ ಕಟ್ಟಡಗಳು ಆಗಿವೆ. ಅವುಗಳಿಗೆ ಯಾವುದೇ ನೀತಿ ನಿಯಮವನ್ನು ರೂಪಿಸಿದೇ ಆದೇಶ ನೀಡಲಾಗಿದೆ. ಅವುಗಳನ್ನು ಸಹ ತೆರವುಗೊಳಿಸಬೇಕಾಗಿದೆ. ಶಾಸ್ತ್ರೀ ವೃತ್ತದ ಬಳಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ತೆರವುಗೊಳಿಸುವಾಗ ಅವರಿಗೆ ಬೇರೆ ಪರ್ಯಾಯ ವ್ಯವಸ್ಥೆ ಮಾಡಿದ ಹಾಗೇ ಇತರ ಅಂಗಡಿಗಳಿಗೂ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು. ಸದಸ್ಯ ಪ್ರಭಾಕರ್ ಕೋಡಿ ಹಾಗೂ ಚಂದ್ರ ಅಮೀನ್ ಅವರಿಗೆ ಧ್ವನಿಯಾಗಿ ಮಾತನಾಡಿದರು.
ನ್ಯಾಯಾಲಯ ಆದೇಶವಾಗಿರುವುದರಿಂದ ಕೂಡಲೇ ತೆರವು ಗೊಳಿಸಿ ಎಂದು ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯ ರವಿರಾಜ್ ಖಾರ್ವಿ ಆಗ್ರಹಿಸಿದರು. ಈ ವಿಷಯದ ಬಗ್ಗೆ ಮಾತನಾಡಿದ ಅಧ್ಯಕ್ಷರು ಯಾವುದೇ ಪಕ್ಷ ಭೇದವಿಲ್ಲದೇ ನ್ಯಾಯಾ ಲಯದ ಆದೇಶವನ್ನು ಪಾಲಿಸಲಾಗುವುದು ಮತ್ತು ಕಟ್ಟಡವನ್ನು ತೆರವುಗೊಳಿಸಲು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಪಿಡಬ್ಲೂéಡಿ ಜಾಗ ಪುರಸಭೆಗೆ ಹಸ್ತಾಂತರ ಕುಂದಾಪುರ ಶಾಸ್ತ್ರಿವೃತ್ತದ ಪರಿಸರದಲ್ಲಿ ಇರುವ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಜಾಗದಲ್ಲಿ ಈಗಾಗಲೇ ಹಳೆಯ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದ್ದು, ಈ ಜಾಗವನ್ನು ಪುರಸಭೆಗೆ ಹಸ್ತಾಂತರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈಗಾಗಲೇ ಈ ಪ್ರದೇಶದಲ್ಲಿರುವ ಹಳೆಯ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದ್ದು ಇವುಗಳನ್ನು ಕೆಡವಿ ರಂಗಮಂದಿರವನ್ನು ನಿರ್ಮಿಸುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅವರಿಗೆ ಈಗಾಗಲೇ ಮನವರಿಕೆ ಮಾಡಲಾಗಿದ್ದು, ನಗರದ ಮಧ್ಯಭಾಗದಲ್ಲಿ ಪುರಸಭೆಗೆ ಜಾಗ ದೊರೆತಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗ ವಾಗುತ್ತದೆ ಎಂದು ಮುಖ್ಯಾಧಿಕಾರಿ ಅವರು ಸಭೆಯ ಗಮನಕ್ಕೆ ತಂದರು.
ಈಗಾಗಲೇ ಲೋಕೋಪಯೋಗಿ ಇಲಾಖೆಯ ಸುರ್ಪದಿಯಲ್ಲಿರುವ ಈ ಜಾಗವನ್ನು ಪುರಸಭೆ ಕಸಿದುಕೊಂಡಂತೆ ಆಗುತ್ತದೆ. ಪುರಸಭೆಗೆ ಹಾಗೂ ಇಲಾಖೆಯ ನಡುವೆ ತಿಕ್ಕಾಟಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಸದಸ್ಯೆ ಪುಷ್ಪಾ ಶೇಟ್ ಹೇಳಿದರು. ಇಲ್ಲಿ ಖಾಲಿ ಜಾಗ ಇರುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅವರಿಗೆ ಮನವರಿಕೆ ಆಗಿದೆ. ಜಾಗ ಪುರಸಭೆಗೆ ಸಿಕ್ಕಿದರೆ ಅದು ಲಾಭ ಎಂದು ಮುಖ್ಯಾಧಿಕಾರಿ ಹೇಳಿದರು.
ಸದ್ರಿ ಜಾಗದಲ್ಲಿ ರಂಗಭೂಮಿ ನಿರ್ಮಾಣ ಮಾಡುವ ಪ್ರಸ್ತಾವವನ್ನು ಕೈಬಿಟ್ಟು ಈ ಜಾಗದಲ್ಲಿ ಕುಂದಾಪುರದಲ್ಲಿರದ ಪ್ರಥಮ ದರ್ಜೆ ಕಾಲೇಜನ್ನು ನಿರ್ಮಿಸುವ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುವುದು ಉತ್ತಮ ಎಂದು ಸದಸ್ಯ ರವಿರಾಜ್ ಖಾರ್ವಿ ಹೇಳಿದರೆ, ಸದಸ್ಯ ಶಿವರಾಮ ಪುತ್ರನ್ ಪ್ರತಿಕ್ರಿಯಿಸಿ ಕುಂದಾಪುರದಲ್ಲಿ ಪುರಭವನ ನಿರ್ಮಾಣಕ್ಕೆ ಈ ಜಾಗವನ್ನು ಮೀಸಲಾಗಿಡುವುದು ಸೂಕ್ತ ಎಂದರು. ಈ ನಡುವೆ ಮಾತನಾಡಿದ ಸದಸ್ಯ ವಿಜಯ ಎಸ್. ಪೂಜಾರಿ ಮೊದಲು ಈ ಜಾಗ ಕುಂದಾಪುರ ಪುರಸಭೆಗೆ ಹಸ್ತಾಂತರವಾಗಲಿ ಉಳಿದದ್ದನ್ನು ನಂತರ ಚರ್ಚೆ ನಡೆಸೋಣ ಎಂದರು. ವಿಟuಲ ಕುಂದರ್ ಹಾಗೂ ಉದಯ ಮೆಂಡನ್ ಧ್ವನಿಗೂಡಿಸಿದರು.
ಅಂಗನವಾಡಿ ದುರಸ್ತಿಗೆ ಆಗ್ರಹ
ಪುರಸಭಾ ವ್ಯಾಪ್ತಿಯಲ್ಲಿರುವ ಕೋಡಿಯ ಅಂಗನವಾಡಿ ಕಟ್ಟಡ ನಾದುರಸ್ತಿಯಲ್ಲಿದ್ದು ಅದನ್ನು ತುರ್ತಾಗಿ ದುರಸ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದರೂ ಈ ತನಕ ದುರಸ್ತಿ ನಡೆಸಿಲ್ಲ ಎಂದು ಸದಸ್ಯ ಸಂದೀಪ್ ಪೂಜಾರಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಈಗಾಗಲೇ ಅಂಗನ ವಾಡಿಯನ್ನು ಪರಿಶೀಲನೆ ಮಾಡಿದ್ದು ಕೂಡಲೇ ದುರಸ್ತಿ ಕಾರ್ಯವನ್ನು ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಹೇಳಿದರು.
ಅಧ್ಯಕ್ಷೆ ವಸಂತಿ ಸಾರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಸಿಸಿಲಿ ಕೋಟ್ಯಾನ್, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.