ಕುಂದಾಪುರ ಪುರಸಭೆ: ಪಾರ್ಕಿಂಗ್ ತಾಣ ವ್ಯರ್ಥ
ದುರಸ್ತಿಗೆ 42 ಲಕ್ಷ ರೂ. ಅಂದಾಜುಪಟ್ಟಿ!ತುಕ್ಕು ಹಿಡಿದ ಕಬ್ಬಿಣದ ಗೇಟ್
Team Udayavani, Jan 17, 2020, 5:59 AM IST
ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ಇರುವಂತೆಯೇ ಪಾರ್ಕಿಂಗ್‌ಗಾಗಿ ಪುರಸಭೆ ಲಕ್ಷಾಂತರ ರೂ. ವ್ಯಯಿಸಿ ಮಾಡಿದ ವ್ಯವಸ್ಥೆ ವ್ಯರ್ಥವಾಗುತ್ತಿದೆ. ಪುರಸಭೆ ಕಟ್ಟಡದ ಎದುರು ಇರುವ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಅಂಡರ್‌ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ ನಿರುಪಯುಕ್ತವಾಗಿದೆ.
ಪಾರ್ಕಿಂಗ್ ತಾಣ
ಹಳೆ ಬಸ್ ನಿಲ್ದಾಣದಲ್ಲಿ ಪುರಸಭೆ ನಿರ್ಮಿಸಿದ ವಾಣಿಜ್ಯ ಕಟ್ಟಡದಲ್ಲಿ ಸಾಕಷ್ಟು ತಳ ಅಂತಸ್ತಿನಲ್ಲಿ ವಾಹನ ಪಾರ್ಕಿಂಗ್‌ಗಾಗಿಯೇ ಸ್ಥಳಾವಕಾಶ ಒದಗಿಸಲಾಗಿದೆ. ಇಲ್ಲಿ ದ್ವಿಚಕ್ರ ವಾಹನಗಳಷ್ಟೇ ಅಲ್ಲ ; ಸಣ್ಣ ಚತುಶ್ಚಕ್ರ ವಾಹನ ಗಳನ್ನು ಕೂಡ ನಿಲ್ಲಿಸಲು ಅವಕಾಶ ಇದೆ. ಈ ಮೂಲಕ ಈ ವಾಣಿಜ್ಯ ಸಂಕೀರ್ಣಕ್ಕೆ ಬರುವ ವಾಹನಗಳಿಗಷ್ಟೇ ಅಲ್ಲ ಪುರಸಭೆಗೆ ಬರುವ ನಾಗರಿಕರು, ಇತರರಿಗೂ ಅನುಕೂಲವಾಗಲಿದೆ.
ಅವ್ಯವಸ್ಥೆ
ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ಯಿದೆ. ನಗರದೊಳಗೆ ವಾಹನಗಳು ಅಡ್ಡಾದಿಡ್ಡಿ ನಿಲ್ಲಿಸುವ ಕಾರಣವೂ ಸಮಸ್ಯೆಯಾಗುತ್ತಿದೆ. ಇನ್ನು ಕೆಲವು ಪ್ರದೇಶಗಳಲ್ಲಿ, ಕೆಲವು ವಾಣಿಜ್ಯ ಕಟ್ಟಡಗಳ ಎದುರು ವಾಹನ ನಿಲ್ಲಿಸಲು ಸ್ಥಳದ ಅಭಾವ ಇದೆ.
ನಿರ್ಬಂಧ
ನಗರದ ಜನನಿಬಿಡ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಅಂಗಡಿ ಮಾಲಕರು ತಮ್ಮ ವಾಹನ ಗಳನ್ನೇ ತಮ್ಮ ಅಂಗಡಿ ಎದುರು ನಿಲ್ಲಿಸುತ್ತಾರೆ. ಇದರಿಂದ ಅಲ್ಲಿಗೆ ಖರೀದಿಗೆ ಬರುವ ಗ್ರಾಹಕರ ವಾಹನ ನಿಲ್ಲಿಸಲು ಜಾಗ ಇಲ್ಲದಂತಾಗುತ್ತದೆ. ಹಳೆ ಪೇಟೆಯಾದ ಕಾರಣ ರಸ್ತೆ ವಿಸ್ತರಣೆ ಇಲ್ಲದ ಕಾರಣ ವಾಹನ ನಿಲ್ಲಿಸಲೂ ಪರದಾಡಬೇಕಾದ ಸ್ಥಿತಿಯಿದೆ. ಈ ಮಧ್ಯೆ ಕೆಲವು ಅಂಗಡಿ ಮಾಲಕರು ಗ್ರಾಹಕರ ವಾಹನ ಮಾತ್ರ ನಿಲುಗಡೆ ಎಂದು ದೊಡ್ಡದಾಗಿ ಫಲಕ ಅಳವಡಿಸಿಕೊಂಡಿದ್ದಾರೆ. ನಿಯಮಗಳ ಪ್ರಕಾರ ಇಂತಹ ಫಲಕ ಹಾಕುವಂತಿಲ್ಲ. ಪುರಸಭೆ ಜಾಗದಲ್ಲಿ ಆಯಾ ಅಂಗಡಿಯ ಗ್ರಾಹಕರು ಮಾತ್ರ ವಾಹನ ನಿಲ್ಲಿಸಬೇಕು ಎಂದು ನಿಯಮ ಹೇರು ವಂತಿಲ್ಲ ಅಥವಾ ಆಯಾ ಅಂಗಡಿ ಎದುರು ಕೂಡ ಪುರಸಭೆ ಜಾಗವಾಗಿದ್ದಲ್ಲಿ ಇತರರು ವಾಹನ ನಿಲ್ಲಿಸಬಾರದು ಎಂದು ನಿರ್ಬಂಧ ವಿಧಿಸುವಂತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ತುಕ್ಕು
ವಾಹನ ಪಾರ್ಕಿಂಗ್‌ಗಾಗಿಯೇ ಪುರ ಸಭೆಯ ಎದುರಿನ ವಾಣಿಜ್ಯ ಸಂಕೀರ್ಣದಲ್ಲಿ ಸ್ಥಳ ಇದ್ದರೂ ವಾಹನಗಳು ನಿಲ್ಲುತ್ತಿಲ್ಲ. ಗೇಟ್ ಹಾಕಲಾಗಿದ್ದು ಕಬ್ಬಿಣದ ಗೇಟ್ ತುಕ್ಕು ಹಿಡಿಯುತ್ತಿದೆ.
ಸದಾ ಮುಚ್ಚಿರುವ ಕಾರಣ ಇಲ್ಲಿಗೆ ವಾಹನಗಳ ಪ್ರವೇಶ ಅಸಾಧ್ಯವಾಗಿದೆ. ಎರಡು ಕಡೆ ಪ್ರವೇಶದ್ವಾರಗಳಿದ್ದರೂ ಪ್ರವೇಶ ಅಸಾಧ್ಯವಾಗಿದೆ. ಪ್ರವೇಶ ಹಾದಿಗೆ ಮಳೆಗಾಲದಲ್ಲಿ ತೊಂದರೆಯಾಗದಂತೆ ಮೇಲ್ಮಾಡು ಕೂಡ ಹಾಸಲಾಗಿದೆ.
ಕೊಳಚೆ
ಈ ಕಟ್ಟಡದ ಅಂಡರ್‌ಗ್ರೌಂಡ್ ಪಾರ್ಕಿಂಗ್‌ನಲ್ಲಿ ಮಳೆಗಾಲದಲ್ಲಿ ಈ ಅಂಡರ್‌ಗ್ರೌಂಡ್‌ನಲ್ಲಿ ಕೊಳಚೆ ನೀರು, ತ್ಯಾಜ್ಯ ತುಂಬಿರುತ್ತದೆ. ಅಲ್ಲಿಗೆ ನೀರು ಹೋಗದಂತೆಯೂ ಮಾಡಿಲ್ಲ. ಪ್ರವೇಶ ಹಾದಿಯಲ್ಲೇ ರಸ್ತೆಯಿಂದ ನೀರು ಧಾರಾಕಾರವಾಗಿ ಹೋಗುತ್ತದೆ. ನಿಂತ ನೀರು ಕಪ್ಪುಗಟ್ಟುತ್ತದೆ. ಸಂಗ್ರಹ
ವಾದ ಕೊಳಚೆ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ. ಸಾಂಕ್ರಾಮಿಕ ರೋಗ ಭೀತಿ ಉಂಟಾಗುತ್ತದೆ. ವಾಣಿಜ್ಯ ಸಂಕೀರ್ಣದಲ್ಲಿ ಎಸ್‌ಬಿಐ ಬ್ಯಾಂಕ್, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಹಿತ ಪ್ರಮುಖ ಕೇಂದ್ರಗಳಿವೆ. ಇಲ್ಲಿಗೆ ಬರುವವರಿಗೆಲ್ಲ ರೋಗ ಭೀತಿ. ಹೊರಗಿನ ನೀರು ಹೋಗುವುದರ ಜತೆಗೆ ನೆಲದಡಿಯಿಂದಲೇ ನೀರು ಮೇಲೆ ಉಕ್ಕುತ್ತಿರುತ್ತದೆ. ಕಟ್ಟಡದ ಭದ್ರತೆಗೂ ಇದು ಅಪಾಯ. ಹಾಗಂತ ಈ ಅಂಡರ್‌ಗ್ರೌಂಡ್ ಬೇಸಗೆಯಲ್ಲಿಯೂ ಉಪಯೋಗವಾಗುತ್ತಿಲ್ಲ.
ಅಸಹನೀಯ
ಜನ ಓಡಾಟದ ಈ ಜಾಗದ ಅಸಹನೀಯತೆ ನಿವಾರಣೆಗೆ ಸಂಬಂಧಪಟ್ಟವರು ಕ್ರಮೈಗೊಳ್ಳ ಬೇಕೆಂದು ಒತ್ತಾಯ ಇದೆ. ನಗರ ಸ್ವತ್ಛಗೊಳಿಸುವ ಪುರಸಭೆ ತನ್ನ ಎದುರೇ ಇಂತಹ ಕೂಪ ಇಟ್ಟುಕೊಂಡು ದೇಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಸ್ವತ್ಛಗೊಳಿಸಿ ಪಾರ್ಕಿಂಗ್‌ಗೆ ಬಿಟ್ಟುಕೊಡಲಿ ಎಂಬ ಬೇಡಿಕೆಯಿದೆ.
42 ಲಕ್ಷ ರೂ. ಅಗತ್ಯ
ಅಂಡರ್‌ಗ್ರೌಂಡ್‌ನಲ್ಲಿ ನೀರು ನಿಲ್ಲುತ್ತದೆ, ಭೂಮಿಯ ಅಡಿಯಿಂದಲೂ ನೀರು ಒಸರುತ್ತದೆ. ಇದನ್ನು ಪೂರ್ಣ ಮಣ್ಣು ಹಾಕಿ ಮುಚ್ಚಲು 42 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿತ್ತು. ಆದರೆ ಅನುದಾನದ ಕೊರತೆಯಿಂದ ಮಂಜೂರಾಗಿಲ್ಲ. ಈ ಬಾರಿ ಮಳೆಗಾಲದಲ್ಲಿ ಸಂಗ್ರಹವಾಗುವ ನೀರು ನಿಲ್ಲಲು ಪಂಪ್ ಸಿಸ್ಟಂ ಅಳವಡಿಸುವ ಕುರಿತು ಚಿಂತನೆಯಿದೆ. ನೀರು ಖಾಲಿ ಮಾಡಲು ಯಾರಿಗಾದರೂ ಟೆಂಡರ್‌ಗೆ ನೀಡುವ ಸಾಧ್ಯತೆಯಿದೆ. ಸಾಂಕ್ರಾಮಿಕ ಕಾಯಿಲೆ ಹರಡದಂತೆ ತಡೆಯುವುದೂ ಕೂಡ ಸವಾಲಾಗಿದೆ.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.