ಕುಂದಾಪುರ ರಿಕ್ಷಾ ಚಾಲಕನಿಂದ 1 ರೂ.ಬಾಡಿಗೆ
Team Udayavani, May 27, 2018, 6:00 AM IST
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 4 ವರ್ಷ ಪೂರೈಸಿದ್ದು 5ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿ ರಿಕ್ಷಾಚಾಲಕರೊಬ್ಬರು ವರ್ಷಾಚರಣೆಯನ್ನು ಕೇವಲ 1 ರೂ. ಬಾಡಿಗೆ ಪಡೆಯುವ ಮೂಲಕ ಆಚರಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುಂದಾಪುರ ವಿನಾಯಕ ಚಿತ್ರಮಂದಿರ ಬಳಿಯ ರಿಕ್ಷಾ ನಿಲ್ದಾಣದಲ್ಲಿರುವ ಅಂಕದಕಟ್ಟೆಯ ನಿವಾಸಿ ಸತೀಶ್ ಪ್ರಭು ಅವರು 5 ಕಿ.ಮೀ. ವರೆಗೆ ಗ್ರಾಹಕರಿಂದ ಕೇವಲ 1 ರೂ. ಮಾತ್ರ ಬಾಡಿಗೆ ಪಡೆಯುತ್ತಿದ್ದಾರೆ. ಅವರ ಈ ಸೇವೆ ಐದು ದಿನಗಳ ಕಾಲ ಇರಲಿದೆ.
ಸತತ 4ನೇ ವರ್ಷ
ಪ್ರಧಾನಿಯಾಗಿ ಮೋದಿ ಅವರು ಒಂದು ವರ್ಷ ಪೂರೈಸಿದಾಗ 2 ದಿನ ಮಾತ್ರ ಈ ಸೇವೆ ನೀಡಿದರೆ, 2ನೇ ವರ್ಷ 3 ದಿನ, 3ನೇ ವರ್ಷ 4, 4ನೇ ವರ್ಷಕ್ಕೆ 1 ರೂ. ಬಾಡಿಗೆ ಸೇವೆಯನ್ನು 5 ದಿನಗಳ ಕಾಲ ನೀಡಲಿದ್ದಾರೆ. ಪ್ರತಿ ವರ್ಷದಂತೆ ಈವರೆಗೆ ಸುಮಾರು 500 ಕ್ಕೂ ಹೆಚ್ಚು ಮಂದಿಗೆ ಇದೇ ರೀತಿ 1 ರೂ. ಮಾತ್ರ ಬಾಡಿಗೆ ಪಡೆದಿದ್ದೇನೆ. 4ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈವರೆಗೆ 15 ಮಂದಿಗೆ 5 ಕಿ.ಮೀ. ವರೆಗೆ 1 ರೂ. ಬಾಡಿಗೆ ಪಡೆದಿದ್ದೇನೆ ಎಂದಿದ್ದಾರೆ.
ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಿ
ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದಂತೆ, 60 ವರ್ಷ ದಾಟಿದ ರಿಕ್ಷಾ ಚಾಲಕರಿಗೂ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದರೆ ಸಾಕಷ್ಟು ಅನುಕೂಲವಾಗಲಿದೆ. ಅದಲ್ಲದೆ ಹಿಂದಿನವರಿಗೆ ವಿದ್ಯಾಭ್ಯಾಸವಿಲ್ಲದ್ದರೂ, ರಿಕ್ಷಾ ಚಾಲನೆ, ಚಾಲನಾ ನಿಯಮ ಎಲ್ಲ ಗೊತ್ತಿದ್ದರೂ, 10ನೇ ತರಗತಿ ಪಾಸ್ ಆಗಿಲ್ಲವೆಂದು ಪರವಾನಿಗೆ ನೀಡದಿರುವುದು ಸರಿಯಲ್ಲ ಎಂದವರು ಹೇಳಿದರು.
ಒಳ್ಳೆಯ ಕಾರ್ಯಆಗಲಿ
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿ, ಜನರಿಗೆ ಈ ಸೇವೆ ನೀಡುತ್ತಿದ್ದೇನೆ. ಅವರು ನನಗೆ ಮಾತ್ರವಲ್ಲ, ದೇಶದ ಹೆಚ್ಚಿನ ಜನರಿಗೆ ಇಷ್ಟವಾಗಿದ್ದಾರೆ. ಅವರಂತಹ ನಾಯಕರ ಅಗತ್ಯತೆ ನಮ್ಮ ದೇಶಕ್ಕಿದೆ. ಇನ್ನು ಒಂದು ವರ್ಷ ಅವರ ಆಡಳಿತಾವಧಿಯಿದ್ದು, ದೇಶಕ್ಕೆ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವಂತಾಗಲಿ.
– ಸತೀಶ್ ಪ್ರಭು, ರಿಕ್ಷಾ ಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.