ಕುಂದಾಪುರ: ನಗರ, ಗ್ರಾಮೀಣ ರಿಕ್ಷಾಗಳಿಗೆ ಪ್ರತ್ಯೇಕ ಸ್ಟಿಕ್ಕರ್
Team Udayavani, Feb 6, 2019, 1:00 AM IST
ಕುಂದಾಪುರ: ರಿಕ್ಷಾಗಳಿಗೆ ಸ್ಟಿಕ್ಕರ್ ಅಳವಡಿಸುವ ಮೂಲಕ ಗ್ರಾಮಾಂತರ ಮತ್ತು ನಗರ ಮಿತಿಯ ರಿಕ್ಷಾಗಳ ಓಡಾಟದಲ್ಲಿ ಗೊಂದಲ ಉಂಟಾಗದಂತೆ ಮಾಡಲಾಗುತ್ತಿದೆ. ರಿಕ್ಷಾ ಚಾಲಕರಿಂದಲೂ ಈ ಕುರಿತು ಬೇಡಿಕೆ ಬಂದಿತ್ತು ಎಂದು ಉಪವಿಭಾಗ ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ತಿಳಿಸಿದರು.
ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಆರ್‌ಟಿಒ ಸಹಯೋಗದೊಂದಿಗೆ ರಿಕ್ಷಾಗಳಿಗೆ ಸ್ಟಿಕ್ಕರ್ ಅಳವಡಿಸಿ ಮಾತನಾಡಿದರು.
ಇದಕ್ಕಾಗಿ ವಲಯ 1 ಮತ್ತು ವಲಯ 2 ಎಂದು ಗುರುತಿಸಲಾಗಿದ್ದು ಸಾರಿಗೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯವನ್ನು ಮಾಡುತ್ತಿವೆೆ. ನಗರ ವಲಯಕ್ಕೆ ಹಳದಿ ಬಣ್ಣದ ಗುರುತಿನ ಪಟ್ಟಿ ಮತ್ತು ಸ್ಟಿಕ್ಕರ್, ಗ್ರಾಮಾಂತರ ವಲಯಕ್ಕೆ ಹಸಿರು ಬಣ್ಣದ ಪಟ್ಟಿ ಮತ್ತು ಸ್ಟಿಕ್ಕರ್ ಹಾಕುವ ಮೂಲಕ ಪ್ರತ್ಯೇಕವಾಗಿ ಗುರುತಿಸಲು ಸಹಕಾರಿಯಾಗುವಂತೆ ಇದನ್ನು ರೂಪಿಸಲಾಗಿದೆ ಎಂದು ಹೇಳಿದರು.
ಸಂಚಾರಿ ಠಾಣೆ ಎಸ್‌ಐ ಪುಷ್ಪಾ ಹಾಗೂ ಆರ್‌ಟಿಒ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.