ಕುಂದಾಪುರ: ರಂಗ ಅಧ್ಯಯನ ಕೇಂದ್ರದ ನಾಟಕೋತ್ಸವದ ಉದ್ಘಾಟನೆ
Team Udayavani, Mar 6, 2017, 6:21 PM IST
ಕುಂದಾಪುರ: ನಾಡಿನ ಪ್ರಮುಖ ರಂಗಶಾಲೆಯಾಗಿರುವ ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ನಾಟಕೋತ್ಸವದ ಉದ್ಘಾಟನಾ ಸಮಾರಂಭ ಮಾ.3ರಂದು ಕೇಂದ್ರದ ಪದ್ಮಾವತಿ ಭಂಡಾರ್ಕರ್ ರಂಗಮಂದಿರದಲ್ಲಿ ಜರಗಿತು.
ಕೇಂದ್ರದ ನಿರ್ದೇಶಕ ಡಾ| ಎಚ್. ಶಾಂತಾರಾಮ್ ಅವರು ನಾಟಕೋತ್ಸವ ವನ್ನು ಉದ್ಘಾಟಿಸಿ ಮಾತನಾಡಿ, ರಂಗ ಅಧ್ಯಯನ ಕೇಂದ್ರವು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ರಂಗಶಾಲೆಯಾಗಿದ್ದು, ಪ್ರತಿವರ್ಷ 12 ರಿಂದ 15 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತವೆ. ಅವರಿಗೆ ಸತತ ಒಂದು ವರ್ಷಗಳ ಕಾಲ ರಂಗ ತರಬೇತಿ ನೀಡಲಾಗುತ್ತವೆ. ಆ ಮೂಲಕ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲಲು ಸ್ಫೂರ್ತಿಯನ್ನು ನೀಡಲಾಗುತ್ತದೆ. ಹಾಗಾಗಿ ಕೇಂದ್ರದಲ್ಲಿ ಪ್ರತಿವರ್ಷ ನಾಟಕೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ರೀತಿಯ ರಂಗ ಪರಿಕಲ್ಪನೆಗಳ ಪರಿಚಯವಾಗು ತ್ತವೆ ಎಂದರು.
ಈ ಕಾರ್ಯಕ್ರಮದಲ್ಲಿ ಕೇಂದ್ರದ ಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಶಾಂತಾರಾಮ್ ಪ್ರಭು, ರಾಜೇಂದ್ರ ತೋಳಾರ್, ಕೇಂದ್ರದ ಕಾರ್ಯದರ್ಶಿ ಡಾ| ಎನ್.ಪಿ. ನಾರಾಯಣ ಶೆಟ್ಟಿ, ಸಂಚಾಲಕ ವಸಂತ ಬನ್ನಾಡಿ, ಕೇಂದ್ರದ ಉಪನ್ಯಾಸಕರಾಗಿರುವ ಮಹೇಶ ಆಚಾರಿ, ವಿನಾಯಕ ಎಸ್.ಎಂ., ಡಾ| ರಜತ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅನಂತರ ಕೇಂದ್ರದ ಹಳೆಯ ವಿದ್ಯಾರ್ಥಿ ಅರುಣ ಬಿ.ಟಿ. ನಿರ್ದೇಶನದ ಅಂಧಯುಗ ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.