ಕುಂದಾಪುರ : ಬೀದಿ ಬದಿ ಹಣ್ಣು ವ್ಯಾಪಾರಸ್ಥರ ಅಂಗಡಿ ತೆರವು
Team Udayavani, Apr 10, 2018, 7:30 AM IST
ಕುಂದಾಪುರ: ಪುರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆ ಬಳಿಯ ಬೀದಿಬದಿ ಹಣ್ಣುಗಳ ವ್ಯಾಪರಸ್ಥರ ಗೂಡಂಗಡಿಗಳ ತೆರವು ಕಾರ್ಯ ಸೋಮವಾರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ನಡೆಯಿತು.
ರಸ್ತೆ ಅಗಲೀಕರಣ ಹಾಗೂ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಮೀನು ಮಾರುಕಟ್ಟೆ ಬಳಿ ಇರುವ ಬೀದಿ ಬದಿ ಹಣ್ಣುಗಳ ವ್ಯಾಪಾರಸ್ಥರ ಗೂಡಂಗಡಿಗಳನ್ನು ತೆರವು ಮಾಡಿ, ಮೀನು ಮಾರುಕಟ್ಟೆಯ ಕಟ್ಟಡದಲ್ಲೇ ಬದಲಿ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ.
ಒಟ್ಟು 13 ಮಂದಿ ಹಣ್ಣುಗಳ ವ್ಯಾಪಾರಸ್ಥರಿದ್ದು, ಅವರು ಕಳೆದ ಹಲವು ವರ್ಷಗಳಿಂದಲೂ ಅಲ್ಲಿ ವ್ಯಾಪಾರವನ್ನು ನಡೆಸುತ್ತಿದ್ದರು. 6 ವರ್ಷದ ಹಿಂದೆ ಅಲ್ಲಿ ಶೀಟು ಹಾಕಿ ವ್ಯವಸ್ಥೆ ಮಾಡಿಕೊಡಲಾಗಿತ್ತು. ಆದರೆ ಅದು ರಸ್ತೆಗೆ ತಾಗಿಕೊಂಡೇ ಇರುವ ಕಾರಣ ಅಲ್ಲಿ ರಸ್ತೆ ಅಗಲೀಕರಣ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂತು.
ಚರಂಡಿ ಸಮಸ್ಯೆಗೂ ಮುಕ್ತಿ..!
ಮೀನು ಮಾರುಕಟ್ಟೆ ಬಳಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಇಲ್ಲಿ ದುರ್ನಾತ ಬೀರುತ್ತಿದೆ. ಮೀನು ಮಾರುಕಟ್ಟೆಯ ಕೊಳಚೆ ನೀರು ಹೋಗಲು ಪರ್ಯಾಯ ವ್ಯವಸ್ಥೆಯೇ ಇಲ್ಲ. ಈಗ ಗೂಡಂಗಡಿಗಳನ್ನು ತೆರವುಗೊಳಿಸಿದ್ದರಿಂದ ಚರಂಡಿ ಕಾರ್ಯವನ್ನು ಕೂಡ ಪೂರ್ಣಗೊಳಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಮೀನು ವ್ಯಾಪಾರಸ್ಥರ ತಕರಾರು
ಈ ಗೂಡಂಗಡಿಗಳನ್ನು ತೆರವು ಮಾಡಿದ್ದು, ಪಕ್ಕದಲ್ಲೇ ಇರುವ ಮೀನು ಮಾರುಕಟ್ಟೆಯ ಒಂದು ಬದಿಯಲ್ಲಿ ಹಣ್ಣಿನ ವ್ಯಾಪಾರಸ್ಥರಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇದಕ್ಕೆ ಮೀನು ವ್ಯಾಪಾರಸ್ಥರು ತಕಾರರು ತೆಗೆದಿದ್ದು, ನಮಗೆ ಹೋಗಲು 3 ಕಡೆಗಳಲ್ಲಿ ದಾರಿ ಬೇಕು. ಅದಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ತೊಂದರೆ ಆಗದಂತೆ ವ್ಯವಸ್ಥೆ ಮಾಡಿ
ಇನ್ನು ಪುರಸಭೆಯ ಬೀದಿ ಬದಿ ವ್ಯಾಪರಸ್ಥರ ಸಂಘದ ಮುಖ್ಯಸ್ಥೆ ಚಿಕ್ಕು ಅವರು “ಉದಯವಾಣಿ’ಯೊಂದಿಗೆ ಮಾತನಾಡಿ, ನಾವು ಹಲವು ವರ್ಷಗಳಿಂದ ಇಲ್ಲೇ ಇದ್ದೇವು. ಈಗ ರಸ್ತೆಗಾಗಿ ನಮ್ಮನ್ನು ಹಿಂದಿನ ಮಾರುಕಟ್ಟೆಯ ಕಟ್ಟಡಕ್ಕೆ ಕಳುಹಿಸಿದ್ದಾರೆ. ಅದಕ್ಕೆ ಮೀನು ಮಾರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯವರಿಗೂ ತೊಂದರೆಯಾಗದ ರೀತಿಯಲ್ಲಿ ಪುರಸಭೆ ಕ್ರಮಕೈಗೊಳ್ಳಲಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.