ಸ್ಥಳೀಯ ಮಟ್ಟದಲ್ಲಿ ಮತದಾನದ ಅರಿವು ಮೂಡಿಸಿ: ಕಾಪಶಿ


Team Udayavani, Apr 5, 2018, 7:10 AM IST

0404kde1.jpg

ಕುಂದಾಪುರ: ಜನರಿಗೆ ಯಾವುದೇ ಗೊಂದಲಗಳು ಉಂಟಾಗದ ರೀತಿಯಲ್ಲಿ ಮತದಾನ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸುವ ಕಾರ್ಯದ ಕುರಿತು ಸ್ಥಳೀಯ, ಬೂತ್‌ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಬಿಎಲ್‌ಒ, ಪಿಡಿಒಗಳು ಹಾಗೂ ಬೂತ್‌ ಮಟ್ಟದ ಜಾಗೃತಿ ಸಮಿತಿಯವರು ಮಾಡಬೇಕು ಎಂದು ಉಡುಪಿ ಜಿ.ಪಂ. ಸಿಇಒ, ಸ್ವೀಪ್‌ (ಮತದಾನ ಜಾಗೃತಿ ಸಮಿತಿ) ಸಮಿತಿಯ ಅಧ್ಯಕ್ಷ ಶಿವಾನಂದ ಕಾಪಶಿ ಹೇಳಿದರು. 

ಅವರು ಬುಧವಾರ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ರಂಗ ಮಂದಿರದಲ್ಲಿ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳಿಗೆ ಮತದಾರರ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.
 
ಈ ಬಾರಿಯ ಚುನಾವಣೆಯಲ್ಲಿ ಒಳಗೊಳ್ಳುವ ಚುನಾವಣೆ ಅಂದರೆ ಎಲ್ಲರೂ ಮುಕ್ತವಾಗಿ ಮತ ಚಲಾಯಿಸು ವಂತಾಗಬೇಕು, ಸುಗಮ ಮತದಾನ ಅಂದರೆ ವಿಶೇಷ ಚೇತನರು, ಹಿರಿಯರು ಹೀಗೆ ಎಲ್ಲರೂ ಮತದಾನಕ್ಕೆ ಬರಲು ಅನುಕೂಲ ಹಾಗೂ ನೈತಿಕ ಮತದಾನ ಅಂದರೆ ಆಸೆ, ಆಮಿಷಗಳಿಗೆ ಒಳಗಾಗದೆ ಮತ ಹಾಕಬೇಕು ಎನ್ನುವುದರ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದವರು ಹೇಳಿದರು. 

ಎ. 8 : ಮಿಂಚಿನ ನೋಂದಣಿ
ಬೂತ್‌ ಮಟ್ಟದ ಜಾಗೃತಿ ಗ್ರೂಪ್‌ (ಬ್ಯಾಗ್‌-ಆಅಎ) ನ ಮುಖ್ಯಸ್ಥರು ಆ ಭಾಗದ ಬಿಎಲ್‌ಒಗಳೇ ಆಗಿರುತ್ತಾರೆ. ಅವರು ಎಲ್ಲ ಚುನಾವಣಾ ಪ್ರಕ್ರಿಯೆ, ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳನ್ನು ಪತ್ತೆ ಹಚ್ಚಬೇಕು. ಎ. 8ರಂದು ನಡೆಯುವ ಮಿಂಚಿನ ನೋಂದಣಿ ಮಾಡಿಸುವಲ್ಲಿ ಬೂತ್‌ ಮಟ್ಟದ ಅಧಿಕಾರಿಗಳ ಪಾತ್ರ ಮಹತ್ತರವಾಗಿದೆ. ಆದಷ್ಟು ಹೆಚ್ಚಿನ ಸಂಖ್ಯೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಲ್ಲಿ ಶ್ರಮವಹಿಸಿ ಎಂದು ಸಿಇಒ ಸಲಹೆ  ನೀಡಿದರು. 

ಪ್ರತಿಜ್ಞಾ ವಿಧಿ ಬೋಧನೆ
ಇದೇ ವೇಳೆ ಸ್ವೀಪ್‌ ಸಮಿತಿ ಕೈಗೊಂಡಿರುವ ಮತದಾರರ ಜಾಗೃತಿ ಅಭಿಯಾನದಡಿ ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಮುಕ್ತ ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು, ನಿರ್ಭೀತಿಯಿಂದ, ಧರ್ಮ, ಜನಾಂಗ, ಜಾತಿ, ಭಾಷೆ ಅಥವಾ ಯಾವುದೇ ಪ್ರೇರಣೆಗಳಿಗೆ ಒಳಗಾಗದೆ ಮತ ಚಲಾಯಿಸುತ್ತೇವೆ ಎನ್ನುವ ಪ್ರತಿಜ್ಞಾ ವಿಧಿಯನ್ನು ಸಮಿತಿಯ ಅಧ್ಯಕ್ಷ ಶಿವಾನಂದ ಕಾಪಶಿ ಬೋಧಿಸಿದರು.

ಕುಂದಾಪುರದ ನಿರ್ಗಮಿತ ತಹಶೀಲ್ದಾರ್‌ ಜಿ.ಎಂ. ಬೋರ್ಕರ್‌, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಆರ್‌. ಪೆಡೆ°àಕರ್‌, ಅಧಿಕಾರಿಗಳಾದ ಗ್ರೇಸಿ ಗೊನ್ಸಾಲ್ವಿಸ್‌, ನಿರಂಜನ್‌ ಭಟ್‌ ಸಹಿತ ಎಲ್ಲ ತಾ| ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.  ಸ್ವೀಪ್‌ ಕುರಿತು ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್‌   ಕಾರ್ಯಕ್ರಮ ನಿರ್ವಹಿಸಿದರು. 

26 ಪರ್ಯಾಯ ದಾಖಲೆಗಳು
ಮೇ 12ರಂದು ನಡೆಯುವ ಮತದಾನಕ್ಕೆ ವೋಟರ್‌ ಐಡಿ ಮಾತ್ರವಲ್ಲದೆ, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಚಾಲನಾ ಪರವಾನಿಗೆ, ಭಾವಚಿತ್ರವಿರುವ ಇತರ ಗುರುತಿನ ಚೀಟಿಗಳ ಸಹಿತ ಒಟ್ಟು 26 ಪರ್ಯಾಯ ದಾಖಲೆಗಳನ್ನು ತೋರಿಸಿದರೆ ಮತದಾನ ಮಾಡಲು ಅವಕಾಶ ನೀಡಬಹುದು. ಅದಲ್ಲದೆ ಮತದಾನಕ್ಕೆ 8 ದಿನ ಮುಂಚಿತವಾಗಿ ವೋಟರ್‌ ಸ್ಲಿಪ್ಸ್‌ ಎಲ್ಲ ಬೂತ್‌ಗಳಿಗೂ ತಲುಪಿಸಲಾಗುತ್ತಿದ್ದು, ಮತದಾನದ 4 ದಿನ ಮೊದಲು ಎಲ್ಲ ವೋಟರ್‌ಚೀಟಿಗಳನ್ನು  ಮತದಾರರಿಗೆ ತಲುಪಿಸಿ. ಬಾಕಿ ಉಳಿದವರಿಗೆ ಮತದಾನದ ದಿನ ನೀಡಿ ಎಂದು ಸಿಇಒ ಶಿವಾನಂದ ಕಾಪಶಿ ತಿಳಿಸಿದರು.

ಮಾದರಿ ನೀತಿ ಸಂಹಿತೆ ಕುರಿತ ಮಾಹಿತಿ
ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ, ಕುಂದಾಪುರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಟಿ. ಭೂಬಾಲನ್‌ ಅವರು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿದರು.
-  ಕುಂದಾಪುರದ ಯಾವ ಗ್ರಾಮದಲ್ಲೂ ಜಾಹೀರಾತು ವಲಯ ಇಲ್ಲವಾಗಿದ್ದು, ಆದ್ದರಿಂದ ಯಾವುದೇ ಪಕ್ಷಗಳು, ಖಾಸಗಿ ವ್ಯಕ್ತಿಗಳು ಬ್ಯಾನರ್‌, ಹೋರ್ಡಿಂಗ್ಸ್‌ ಗಳನ್ನು ಹಾಕದಂತೆ ಪಿಡಿಒಗಳು ನೋಡಿಕೊಳ್ಳಬೇಕು. ಖಾಸಗಿ ಜಾಗ, ಜಾತ್ರೆ ಇತ್ಯಾದಿ ಕಾರ್ಯಕ್ರಮಗಳಿಗೆ ಅನುಮತಿ ಪಡೆದು ಹಾಕಬೇಕು.
-  ಯಾವುದೇ ಪಕ್ಷವನ್ನು ಬೆಂಬಲಿಸಿ ಗೋಡೆಬರಹಗಳಿದ್ದರೆ ಅದು ಕಾಣದಂತೆ ಬಣ್ಣ ಬಳಿಯಬೇಕು. 
-  ರಾಜಕೀಯ ಪಕ್ಷಗಳು ಹೊಸದಾಗಿ ಪ್ರಚಾರಕ್ಕಾಗಿ ಕಚೇರಿ ಮಾಡುವುದಾದರೂ ಅನುಮತಿ ಅಗತ್ಯ. ಪಕ್ಷಗಳ ಸಭೆ ನಡೆಯುವುದಾದರೂ ಏಕಗವಾಕ್ಷಿ ಕೇಂದ್ರದ ಅನುಮತಿ ಪಡೆಯುವುದು ಅಗತ್ಯ. ಆದರೆ ರಾತ್ರಿ 10 ಗಂಟೆಯ ಅನಂತರ ನಡೆಸುವಂತಿಲ್ಲ.
-  ಮನೆಯಲ್ಲಿ ನಡೆಯುವ ಯಾವ ಕಾರ್ಯಕ್ರಮಕ್ಕೂ ಅನುಮತಿ ಬೇಡ. ಆದರೆ ಹಾಲ್‌ಗ‌ಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಮದುವೆ, ಇತ್ಯಾದಿ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯ. ರಾಜಕೀಯ ನಾಯಕರ ಕುಟುಂಬಸ್ಥರ ಮದುವೆಯಾದರೆ ಅನುಮತಿ ಅಗತ್ಯ. ಯಾವ ಮದುವೆ ಸಮಾರಂಭಗಳಲ್ಲಿಯೂ ಪಕ್ಷದ ಚಿಹ್ನೆ, ರಾಜಕೀಯ ವ್ಯಕ್ತಿಗಳ ಭಾವಚಿತ್ರ ಹಾಕುವಂತಿಲ್ಲ.
-  ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಲೌಡ್‌ ಸ್ಪೀಕರ್‌ ಬಳಸಲು ಅವಕಾಶವಿಲ್ಲ. 
-  ರಾಜಕೀಯ ಸಭೆಗಳಲ್ಲಿಯೂ ಕೋಮು ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ.
-  ಬೈಕ್‌ ರ್ಯಾಲಿ, ಮೆರವಣಿಗೆಗೆ ಅನುಮತಿ ಅಗತ್ಯ. ಒಟ್ಟಾಗಿ 10 ಕ್ಕಿಂತ ವಾಹನಗಳು (ಸೈಕಲ್‌, ದ್ವಿಚಕ್ರ ಸೇರಿಸಿ) ಹೋಗುವುದಾದರೂ ಅನುಮತಿ ಪಡೆಯಬೇಕು.

ಟಾಪ್ ನ್ಯೂಸ್

musk

Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್‌

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

11

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

7

Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್‌; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

musk

Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್‌

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.