ಕುಂದಾಪುರ: ಅರ್ಧದಷ್ಟು ತಾಲೂಕಿನಲ್ಲಿ ನೀರಿನ ಬರ!
ಹಲವೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭ
Team Udayavani, Apr 13, 2019, 6:00 AM IST
ಕುಂದಾಪುರದ ಪಂಚಗಂಗಾವಳಿ.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಅರ್ಧದಷ್ಟು ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಟ್ಯಾಂಕರ್ ನೀರು ಸರಬರಾಜು ಆರಂಭಗೊಂಡಿದೆ. ಒಟ್ಟು 65 ಪಂಚಾಯತ್‌ಗಳ ಪೈಕಿ ಈಗಾಗಲೇ 30 ಪಂಚಾಯತ್‌ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಗೊಂಡಿದೆ. ಇನ್ನೊಂದಷ್ಟು ಪಂಚಾಯತ್‌ಗಳಲ್ಲಿ ಇದಕ್ಕಾಗಿ ಸಿದ್ಧತೆ ನಡೆದಿದೆ.
ಬೇಡಿಕೆ
ಹಾರ್ದಳ್ಳಿ ಮಂಡಳ್ಳಿ, ಅಂಪಾರು, ಶಂಕರನಾರಾಯಣ, ಗುಲ್ವಾಡಿ, ತ್ರಾಸಿ, ಹೆಮ್ಮಾಡಿ, ಹೊಂಬಾಡಿ ಮಂಡಾಡಿ, ಗುಜ್ಜಾಡಿ, ಹಕ್ಲಾಡಿ, ಯಡ್ತರೆ, ಶಿರೂರು, ಪಡುವರಿ, ಕಾವ್ರಾಡಿ, ಹಳ್ಳಿಹೊಳೆ, ಅಮಾಸೆಬೈಲು, ಕೊರ್ಗಿ, ಕಾಲೊ¤àಡು, ಗೋಪಾಡಿ, ಬೈಂದೂರು, ಮೊಳಹಳ್ಳಿ, ಚಿತ್ತೂರು, ಆಜ್ರಿ, ಬಸೂÅರು, ಹೊಸಂಗಡಿ, ಕೆದುರು, ಸಿದ್ದಾಪುರ, ಹಾಲಾಡಿ, ಬೆಳ್ವೆ, ಮಡಾಮಕ್ಕಿ, ಕಿರಿಮಂಜೇಶ್ವರ ಪಂಚಾಯತ್‌ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಅನುದಾನ ನೀಡುವಂತೆ ತಾಲೂಕು ಆಡಳಿತದ ಕದ ತಟ್ಟಲಾಗಿದೆ. ಕಳೆದ ವರ್ಷ ಸಮಸ್ಯೆ ಇಲ್ಲದಲ್ಲಿಯೂ ಈ ಬಾರಿ ಸಮಸ್ಯೆ ತಲೆದೋರಿದೆ.
ಸಮಸ್ಯೆ
ಕುಂದಾಪುರ, ಬೈಂದೂರಿನಲ್ಲಿ ಐದು ಪ್ರಮುಖ ನದಿಗಳ ಜತೆ ಜಂಬೂ, ಹಾಲಾಡಿ, ಉಪ್ಪುಂದ, ಗಂಗೊಳ್ಳಿ ಮೊದಲಾದ ಉಪನದಿಗಳೂ ಇವೆ. ಆದರೆ ಬೇಸಗೆ ಬಂದರೆ ಕುಡಿಯಲು ನೀರಿಲ್ಲ. ಇರುವ 101 ಗ್ರಾಮಗಳ 65 ಗ್ರಾ.ಪಂ.ಗಳ ಪೈಕಿ 52 ಗ್ರಾ.ಪಂ. ವ್ಯಾಪ್ತಿಗೆ ಬೇಸಗೆಯಲ್ಲಿ ಟ್ಯಾಂಕರ್ ನೀರು ಹಂಚಬೇಕಾಗುತ್ತದೆ ಎಂದರೆ ಇಲ್ಲಿನ ನೀರಿನ ಸಮಸ್ಯೆಯ ಗಂಭೀರ ಅರಿವಾಗಬಹುದು. ಇದ್ದುದರಲ್ಲಿ ನಗರದ ಜನತೆಯೇ ಸಂತೃಪ್ತರು. ಅವರಿಗೆ ಜಂಬೂ ನದಿಯಿಂದ ಜಪ್ತಿಯಲ್ಲಿ ಶುದ್ಧಗೊಂಡ ನೀರು ಬರುತ್ತದೆ. ಪೈಪ್‌ಲೈನ್ ಹಾದು ಹೋಗುವ 6 ಗ್ರಾ.ಪಂ.ಗಳಿಗೂ ಇದೇ ನೀರುಣಿಸಲಾಗುತ್ತದೆ. ಹಾಗಾಗಿ ಆ ಪಂಚಾಯತ್‌ಗಳಲ್ಲಿ ಒಂದಷ್ಟು ನೀರಿನ ಸಮಸ್ಯೆ ವಿರಳ. ಉಳಿದಂತೆ ಎಲ್ಲೆಡೆ ನೀರಿಗಾಗಿ ಹಾಹಾಕಾರವಿದೆ.
ಕಳೆದ ವರ್ಷ
ಕರ್ಕುಂಜೆ-6.35 ಲಕ್ಷ ರೂ., ಶಂಕರನಾರಾಯಣ – 7.50 ಲಕ್ಷ ರೂ., ಶಿರೂರು-12 ಲಕ್ಷ ರೂ., ಸಿದ್ದಾಪುರ-5.50 ಲಕ್ಷ ರೂ., ಬೆಳ್ವೆ- 6.5 ಲಕ್ಷ ರೂ., ಕಾಳಾವರ- 5 ಲಕ್ಷ ರೂ., ಅಂಪಾರು – 10 ಲಕ್ಷ ರೂ., ಕೆದೂರು- 5 ಲಕ್ಷ ರೂ.ಗಳಿಗೆ ಕೊಟ್ಟದ್ದು ಸಾಲದೇ ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯಿತ್ತು. ಆಜ್ರಿಯಲ್ಲಿ 1.50 ಲಕ್ಷ ರೂ., ಗಂಗೊಳ್ಳಿ 1 ಲಕ್ಷ ರೂ., ಗುಜ್ಜಾಡಿ 3 ಲಕ್ಷ ರೂ., ಹಳ್ಳಿಹೊಳೆ 3.5 ಲಕ್ಷ ರೂ. , ಹಟ್ಟಿಯಂಗಡಿ 3 ಲಕ್ಷ ರೂ., ಕಟ್‌ಬೆಳೂ¤ರಿನಲ್ಲಿ 4.5 ಲಕ್ಷ ರೂ., ಉಳ್ಳೂರು 1 ಲಕ್ಷ ರೂ.. ಉಳ್ಳೂರು -74ರಲ್ಲಿ 3 ಲಕ್ಷ ರೂ., ಯಡಮೊಗೆ 1 ಲಕ್ಷ ರೂ., ಜಡ್ಕಲ್‌ಗೆ 4 ಲಕ್ಷ ರೂ., ಕೆರಾಡಿಗೆ 3.5 ಲಕ್ಷ ರೂ., ಕೆರ್ಗಾಲು 1 ಲಕ್ಷ ರೂ, ಕಿರಿಮಂಜೇಶ್ವರ 4.5 ಲಕ್ಷ ರೂ., ನಾಡದಲ್ಲಿ 1.50 ಲಕ್ಷ ರೂ., ನಾವುಂದದಲ್ಲಿ 1.50 ಲಕ್ಷ ರೂ. ನೀರು ಸರಬರಾಜಿಗೆ ವ್ಯಯಿಸಲಾಗಿತ್ತು. ಕಳೆದ ವರ್ಷ ಒಟ್ಟು 1.4 ಕೋ.ರೂ.ಗಳನ್ನು ಬೇಸಗೆ ಕಾಲದ ಕುಡಿಯುವ ನೀರಿನ ಸರಬರಾಜಿಗೆ ಖರ್ಚಾಗಿದ್ದರೆ ಈ ವರ್ಷ ಇದಕ್ಕಿಂತ ಹೆಚ್ಚೇ ಖರ್ಚಾಗುವ ಸಂಭವ ಇದೆ.
ಬೇಡಿಕೆ ಕಳುಹಿಸಲಾಗಿದೆ
ನೀರಿನ ಸಮಸ್ಯೆ ಇರುವಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆಗೆ ಅನುದಾನ ಒದಗಿಸುವಂತೆ ಪಂಚಾಯತ್‌ಗಳಿಂದ ಬಂದ ಬೇಡಿಕೆಯನ್ನು ತಾಲೂಕು ಕಚೇರಿಗೆ ಕಳುಹಿಸಲಾಗಿದೆ. ನೀರು ಪೂರೈಕೆಯಲ್ಲಿ ಎಲ್ಲಿಯೂ ಸಮಸ್ಯೆ ಇಲ್ಲ. ಈಗಾಗಲೇ ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ.
-ಕೆ. ಕಿರಣ್ ಪೆಡೆ°àಕರ್,
ಕಾರ್ಯನಿರ್ವಹಣಾಧಿಕಾರಿ, ತಾ.ಪಂ.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.