ಕುಂದಾಪುರ: ಮುಂದುವರಿದ ವರುಣನ ಆರ್ಭಟ
Team Udayavani, Jun 30, 2018, 6:00 AM IST
ಕುಂದಾಪುರ: ಕುಂದಾಪುರ, ಬೈಂದೂರು ಭಾಗದಲ್ಲಿ ಶುಕ್ರ ವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಮತ್ತೆ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ.
ಮನೆ ಗೋಡೆ ಕುಸಿತ
ಅಂಕದಕಟ್ಟೆಯ ವರ್ಣರಕೇರಿಯ ಯಶೋದಾ ಅವರ ಮನೆಯು ಭಾರೀ ಗಾಳಿ- ಮಳೆಯಿಂದಾಗಿ ಗೋಡೆ ಕುಸಿದಿದ್ದು, ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ.
ತುಂಬಿ ಹರಿಯುತ್ತಿದೆ ನದಿಗಳು
ಕುಂದಾಪುರ ಬೈಂದೂರು ಭಾಗದ ಪಂಚ ನದಿಗಳಾದ ಸೌಪರ್ಣಿಕಾ, ಕುಬಾj, ವಾರಾಹಿ, ಚಕ್ರ, ಕಾಶಿ ನದಿಗಳು ತುಂಬಿ ಹರಿಯುತ್ತಿದ್ದು, ಕೆಲವು ಕಡೆಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಅನೇಕ ಕಡೆಗಳಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಯಿಲ್ಲದ ಕಾರಣ ರಸ್ತೆಗಳಲ್ಲಿಯೇ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.ತಲ್ಲೂರು ಸಮೀಪದ ರಾ. ಹೆದ್ದಾರಿ 66ರಿಂದ ಸುಪ್ರೀಂ ಹಿಂಭಾಗದ ರಸ್ತೆಯಲ್ಲಿಯೇ ನೀರು ಹರಿದು ಹೋಗುತ್ತಿದ್ದು, ರಸ್ತೆ ತೋಡಿನಂತೆ ಭಾಸವಾಗುತ್ತಿದೆ.
ಇಡೂರು-ಕುಂಜ್ಞಾಡಿ, ವಂಡ್ಸೆ, ಚಿತ್ತೂರು ಪರಿಸರದಲ್ಲಿ ಕೃಷಿಭೂಮಿ ಜಲಾವೃತ
ಕೊಲ್ಲೂರು: ಇಡೂರು-ಕುಂಜ್ಞಾಡಿ, ಹೊಸೂರು, ವಂಡ್ಸೆ, ಚಿತ್ತೂರು, ಜಾಡಿ, ದೇವಲ್ಕುಂದ ಸಹಿತ ನೂಜಾಡಿ, ಕೆರಾಡಿಯಲ್ಲಿ ಜೂ. 29ರಂದು ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಕೃಷಿ ಪ್ರಧಾನ ಭೂಮಿ ಜಲಾವೃತಗೊಂಡಿದ್ದು ಕೃಷಿ ನಾಶವಾಗಿದೆ.
ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರಿನ ಹೊರ ಹರಿವಿಗೆ ಸಮರ್ಪಕವಾದ ಒಳಚರಂಡಿಯ ಕೊರತೆಯಿಂದಾಗಿ ಆ ಭಾಗದ ಕೃಷಿ ಭೂಮಿ ಜಲಾವೃತಗೊಂಡಿದೆ. ಕೊಲ್ಲೂರು, ಹಾಲ್ಕಲ್, ಜಡ್ಕಲ್, ಮುದೂರು ಸಹಿತ ಪಶ್ಚಿಮ ಘಟ್ಟದ ತಪ್ಪಲಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 4 ದಿನಗಳಿಂದ ಈ ಭಾಗದಲ್ಲಿ ದಿನೇ ದಿನೇ ಮಳೆ ಹೆಚ್ಚುತ್ತಿದ್ದು ಸೌಪರ್ಣಿಕ ಹಾಗೂ ಕಾಶೀ ಹೊಳೆ ಅಪಾಯ ಮಟ್ಟಕ್ಕೆ ಏರಿದೆ.
ಸೋರುತ್ತಿರುವ ಕೊಡಚಾದ್ರಿ ಸರ್ವಜ್ಞ ಪೀಠ
ಶಂಕರಾಚಾರ್ಯರ ತಪೋಭೂಮಿ ಯಾಗಿರುವ ಕೊಡಚಾದ್ರಿ ಬೆಟ್ಟದಲ್ಲಿನ ಸರ್ವಜ್ಞ ಪೀಠವು ಭಾರೀ ಮಳೆಯಿಂದಾಗಿ ಸೋರುತ್ತಿದ್ದು ನಿತ್ಯ ಪೂಜೆಗೆ ತೆರಳುವ ಪೂಜಾರಿಯವರಿಗೆ ಮುಸಲಧಾರೆಯಲ್ಲಿ ಪೂಜೆ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿ ಕಂಡುಬಂದಿದೆ. ಜಿಲ್ಲಾಡಳಿತವು ಇದಕ್ಕೊಂದು ಪರ್ಯಾಯ ವ್ಯವಸ್ಥೆ ಒದಗಿಸಬೇಕೆಂದು ಜೋಗಿ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.
ನೀರಿನಿಂದ ಭರ್ತಿಯಾದ ಹೆದ್ದಾರಿ !
ಕುಂದಾಪುರ: ಮಳೆ ಬಂದಾಗ ಹಳ್ಳ, ನದಿ ಭರ್ತಿಯಾಗುವುದು ಸಹಜ. ಆದರೆ ಕುಂದಾಪುರ ನಗರದಲ್ಲಿ ಹಾಗಲ್ಲ. ಇಲ್ಲಿ ಮಳೆ ಬಂದರೆ ಹೆದ್ದಾರಿ ಭರ್ತಿಯಾಗುತ್ತದೆ!
ಕಳೆದ ನಾಲ್ಕು ದಿನಗಳಿಂದ ಕುಂದಾಪುರದಲ್ಲಿ ಮಳೆಯಾಗುತ್ತಿದ್ದು ಬಿಡದೆ ಮಳೆಯಾದಾಗಲೆಲ್ಲ ಹೆದ್ದಾರಿ ಹಾಗೂ ಹೆದ್ದಾರಿ ಬದಿಯಲ್ಲಿ ನೀರು ನಿಂತಿರುತ್ತದೆ.
ಸಂಗಮ್‌ನಿಂದ ಹೆದ್ದಾರಿ ಹೊಂಡ ಆರಂಭವಾಗಿದ್ದು ಬಸೂÅರು ಮೂರುಕೈವರೆಗೂ ಮುಂದುವರಿದಿದೆ. ಶಾಸಿŒ ಸರ್ಕಲ್ ಬಳಿ ಅರ್ಧ ಪೂರೈಸಿದ ಫ್ಲೈ ಒವರ್ ಕಾಮಗಾರಿಯಿಂದಾಗಿ ವಾಹನಗಳ ಸುಗಮ ಓಡಾಟಕ್ಕೆ ತೊಂದರೆಯಾಗಿದೆ. ಜತೆಗೆ ಅಲ್ಲಲ್ಲಿ ಬಿದ್ದ ಭಾರೀ ಗಾತ್ರದ ಹೊಂಡಗಳು. ಇದರಿಂದಾಗಿ ಸಣ್ಣ ಚಕ್ರಗಳ ವಾಹನಗಳು, ದ್ವಿಚಕ್ರ, ತ್ರಿಚಕ್ರ ವಾಹನಗಳು ಓಡಾಡಲು ಸವಾರರು ಭೀತಿ ಪಡುವಂತಾಗಿದೆ. ಧುತ್ತನೆ ಬರುವ ಭಾರೀ ಗಾತ್ರದ ವಾಹನಗಳು ಗಾಬರಿ ಹುಟ್ಟಿಸುತ್ತಿವೆ. ಮಳೆ ನೀರು ಸಂಗ್ರಹವಾಗಿ ಎಲ್ಲೆಲ್ಲಿ ಹೊಂಡ ಇದೆ ಎಂದು ತಿಳಿಯುತ್ತಿಲ್ಲ. ಸರ್ವಿಸ್ ರಸ್ತೆಗೆ ತಿರುಗುವ ಎಲ್ಲ ಕಡೆಯೂ ನೀರು ಸಂಗ್ರಹವಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕರು ಬೆಲೆ ತೆರಬೇಕಾಗಿದೆ.
ಗಂಗೊಳ್ಳಿ: ಶಾಲಾ ವಠಾರ ಜಲಾವೃತ
ಗಂಗೊಳ್ಳಿ: ಕಳೆದ 2-3 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಂಗೊಳ್ಳಿ ಖಾರ್ವಿ ಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರ ಜಲಾವೃತಗೊಂಡಿದೆ.
ಶಾಲೆ ಸುತ್ತಲೂ ನೀರು ತುಂಬಿ ಕೊಂಡಿರುವುದರಿಂದ ಮಕ್ಕಳು ಶಾಲೆಗೆ ಬರಲು ತೊಂದರೆಯಾಗುತ್ತಿದೆ. ಶಾಲಾ ವಠಾರ ತಗ್ಗು ಪ್ರದೇಶವಾಗಿರುವುದರಿಂದ ಮಳೆ ನೀರು ಈ ಪರಿಸರದಲ್ಲಿ ಸಂಗ್ರಹಗೊಳ್ಳುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಖಾರ್ವಿಕೇರಿ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡದಿರುವುದರಿಂದ ಮಳೆ ನೀರು ನಿಂತಿದೆ.
ಸ್ಪಂದಿಸದ ಸ್ಥಳೀಯಾಡಳಿತ ಶಾಲೆಯ ವಠಾರವಿಡೀ ನೀರು ನಿಂತು ಮಕ್ಕಳಿಗೆ ತೊಂದರೆಯಾಗುತ್ತಿದ್ದರೂ, ಸ್ಥಳೀಯಾಡಳಿತ ಮಾತ್ರ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Hunsur: ಹೊಸ ವರ್ಷಾಚರಣೆ: ಕೇಕ್ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
“ನಿಮ್ಹಾನ್ಸ್ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು
Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.