ಕೋಟೇಶ್ವರ: ಸೂಕ್ತ ಬಸ್ ನಿಲ್ದಾಣಕ್ಕೆ ಆಗ್ರಹ
Team Udayavani, Jan 28, 2019, 7:25 PM IST
ಕೋಟೇಶ್ವರ: ಇಲ್ಲಿನ ಪೇಟೆಯಲ್ಲಿ ಬಸ್ಸುಗಳ ನಿಲುಗಡೆಗಾಗಿ ಸೂಕ್ತ ನಿಲ್ದಾಣವಿಲ್ಲದೆ ಪ್ರಯಾಣಿಕರು ಬವಣೆಪಡುವಂತಾಗಿದೆ.
ಪ್ರಸ್ತುತ ಇರುವ ನಿಲ್ದಾಣದಲ್ಲಿ ವಿವಿಧ ಮೂಲ ಸೌಕರ್ಯಗಳ ಕೊರತೆ ಎದುರಾಗಿದ್ದು ಶೀಘ್ರ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾ.ಪಂ. ಆದ್ಯತೆ ನೀಡಬೇಕಾಗಿದೆ. ಆ ಮೂಲಕ ಸಾರ್ವಜನಿಕರ ಬೇಡಿಕೆ ಈಡೇರಿಸುವಲ್ಲಿ ಪ್ರಯತ್ನಿಸಬೇಕಾಗಿದೆ.
ಆಶ್ರಯವಿಲ್ಲದ ಬಸ್ ನಿಲ್ದಾಣ
ಮಳೆಗಾಲ ಮತ್ತು ಬೇಸಗೆಯಲ್ಲಿ ಬಸ್‌ಗೆ ಕಾಯಲು ಸೂಕ್ತ ತಂಗುದಾಣ ಇಲ್ಲದಿರುವುದರಿಂದ, ಜನರು ಸಮೀಪದ ಅಂಗಡಿ ಮುಂಗಟ್ಟುಗಳನ್ನು ಆಶ್ರಯಿಸಬೇಕಾಗಿದೆ. ದೂರದ ಗ್ರಾಮಗಳಿಂದ ವ್ಯವಹಾರ, ಇನ್ನಿತರ ಕಾರ್ಯಕ್ಕಾಗಿ ಆಗಮಿಸುವ ಜನರ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ. ತಾಸುಗಟ್ಟಲೆ ಬಸ್ಸಿಗಾಗಿ ಕಾದು ಹೈರಾಣಾಗುವ ಇಲ್ಲಿನ ಪರಿಸ್ಥಿತಿ ದುರವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಕುಂದಾಪುರ ತಾಲೂಕಿನ ಪ್ರಮುಖ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರವಾಗಿ ಕೋಟೇಶ್ವರ ಗುರುತಿಸಿಕೊಂಡಿದೆಯಾದರೂ ಬಸ್ಸು ತಂಗುದಾಣದ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿದೆ. ವಾಹನ ಸಂಚಾರ ಮತ್ತು ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಕಂಡುಬರುತ್ತಿರುವುದು ಸರ್ವೆಸಾಮಾನ್ಯವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಈ ಅವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಂಡು ಸುಸಜ್ಜಿತ ತಂಗುದಾಣ ಒದಗಿಸಿಕೊಡಲು ಪ್ರಯತ್ನಿಸುತ್ತಾರೆಯೇ ಎಂದು ಕಾದುನೋಡಬೇಕಿದೆ.
ಸೂಕ್ತ ವ್ಯವಸ್ಥೆಗೆ ಕ್ರಮ
ಸರಕಾರಿ ಸ್ವಾಮ್ಯದ ವಿಶಾಲ ಜಾಗಕ್ಕಾಗಿ ಪ್ರಯತ್ನಿಸುತ್ತಿದ್ದು ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರಲ್ಲಿ ಗ್ರಾ.ಪಂ. ಬದ್ಧವಾಗಿದೆ. ಇರುವ ವ್ಯವಸ್ಥೆಯನ್ನು ಒಂದಿಷ್ಟು ಸುಧಾರಣೆ ಮಾಡಿ ಬಸ್ಸುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
– ಜಾನಕಿ ಬಿಲ್ಲವ, ಅಧ್ಯಕ್ಷರು, ಗ್ರಾ.ಪಂ., ಕೋಟೇಶ್ವರ
ಸೌಕರ್ಯ ಒದಗಿಸಿ
ನಗರಸಭೆಯಾಗಿ ರೂಪುಗೊಳ್ಳಲಿರುವ ಕೋಟೇಶ್ವರ ಪೇಟೆಯಲ್ಲಿ ಸಕಲ ಸೌಕರ್ಯ ಹೊಂದಿರುವ ಬಸ್ಸು ನಿಲ್ದಾಣ ಹಾಗೂ ಸಾರ್ವಜನಿಕ ಶೌಚಾಲಯದ ಅಗತ್ಯವಿದೆ.
– ಸುಬ್ರಹ್ಮಣ್ಯ ಶೆಟ್ಟಿಗಾರ್, ಗ್ರಾಮಸ್ಥರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.