ವಾರದ ಸಂತೆ: ಖರೀದಿಗೆ ಮುಗಿ ಬಿದ್ದ ಜನ
Team Udayavani, Mar 29, 2020, 5:41 AM IST
ಕುಂದಾಪುರ: ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶನಿವಾರ ನಡೆಯುತ್ತಿದ್ದ ಕುಂದಾಪುರದ ವಾರದ ಸಂತೆಯನ್ನು ರದ್ದುಪಡಿಸಲಾಗಿದೆ. ಆದರೂ ಶನಿವಾರ ವ್ಯಾಪಾರಿಗಳು 2-3 ವಾಹನಗಳಲ್ಲಿ ಹಣ್ಣು – ತರಕಾರಿಗಳನ್ನು ತುಂಬಿಕೊಂಡು ಬಂದಿದ್ದು, ಇದನ್ನು ತಿಳಿದ ಜನ ಸಂತೆ ಮಾರುಕಟ್ಟೆಯ ಹೊರಗಡೆ ಬೆಳ್ಳಂಬೆಳಗ್ಗೆ ಖರೀದಿಗೆ ಮುಗಿ ಬಿದ್ದ ಪ್ರಸಂಗ ನಡೆಯಿತು. ಸುದ್ದಿ ತಿಳಿದ ಪೊಲೀಸರು ಗುಂಪು – ಗುಂಪಾಗಿ ಖರೀದಿಸುತ್ತಿದ್ದ ಜನರನ್ನು ಚದುರಿಸಿದರು. ಬಳಿಕ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಅಧಿಕಾರಿಗಳು ಭೇಟಿ ನೀಡಿ, ಸರಕಾರದ ಆದೇಶದಂತೆ ಗ್ರಾಹಕರಿಗೆ ಖರೀದಿಗೆ ಅವಕಾಶವಿಲ್ಲ, ತರಕಾರಿ, ಹಣ್ಣು ವ್ಯಾಪಾರಸ್ಥರಿಗೆ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಮನವರಿಕೆ ಮಾಡಿದ್ದಾರೆ. ಇಲ್ಲಿಯೂ ಕೂಡ ಖರೀದಿಗೆ ಸಾಮಾಜಿಕ ಅಂತರಕ್ಕಾಗಿ ಅಲ್ಲಲ್ಲಿ ವೃತ್ತಗಳನ್ನು ಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Udupi: “ವಕ್ಫ್ ‘ ಸಮಸ್ಯೆ ಶೀರ್ಘ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.