ಸಾರಿಗೆ ವ್ಯವಸ್ಥೆ ಬಲಗೊಂಡರೆ ತಾಲೂಕು ಸಬಲಗೊಂಡೀತು
Team Udayavani, Mar 10, 2018, 6:00 AM IST
ತಾಲೂಕಿನಲ್ಲಿ ಕೊರತೆ ಎನ್ನುವುದಕ್ಕಿಂತಲೂ ಅಗತ್ಯ ಎಂದು ಹೇಳುವುದಾದರೆ ಸಾರಿಗೆ ಸೇವೆ. ಬಹಳಷ್ಟು ಗ್ರಾಮೀಣ ಭಾಗಗಳಲ್ಲಿ ಇಂದೂ ದಿನಕ್ಕೆ ಒಂದೋ ಎರಡೋ ಬಸ್ ಎಂಬಂತಿದೆ. ಇದು ನಿವಾರಣೆಯಾದರೆ ತಾಲೂಕು ಅಭಿವೃದ್ಧಿಗೆ ವೇಗ ದೊರಕಬಹುದು. ರಸ್ತೆಯಾದರಷ್ಟೇ ಸಾಲದು, ಓಡಾಡಲು ಬಸ್‌ಗಳೂ ಬೇಕು ಎನ್ನುವುದನ್ನು ಜನಪ್ರತಿನಿಧಿಗಳ ಅರಿವಿಗೆ ಬರಬೇಕು.
ಕುಂದಾಪುರ: ಅಭಿವೃದ್ಧಿಗೆ ಹೆಗಲು ಕೊಡಬೇಕಿರುವುದು ಸಾರಿಗೆ ಸೇವೆ. ಪ್ರಸ್ತುತ ತಾಲೂಕಿನ ಹಲವು ಗ್ರಾಮೀಣ ಪ್ರದೇಶಗಳ ಬಾಗಿಲಿಗೆ ಇನ್ನೂ ಸಾರಿಗೆ ಸೇವೆ ಹೋಗಬೇಕಿದೆ.
ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸಾರಿಗೆ ವ್ಯವಸ್ಥೆ ನಡೆಯುತ್ತಿದೆ. ಆದರೆ, ಕುಂದಾಪುರ ತಾಲೂಕಿನ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಸರಕಾರಿ ಹಾಗೂ ಖಾಸಗಿ ಸಾರಿಗೆ ಸೇವೆ ಸಾಕಷ್ಟು ಇಲ್ಲ ಎಂಬುದು ಒಪ್ಪಿಕೊಳ್ಳುವಂತಿದೆ.
ಖಾಸಗಿಯವರು ಬಹಳಷ್ಟು ವರ್ಷಗಳ ಹಿಂದೆಯೇ ಬಸ್ ಸಂಪರ್ಕ ಕಲ್ಪಿಸಿದ್ದರೂ, ಸರಕಾರಿ ಸಾರಿಗೆ ಸೇವೆ ಮಾತ್ರ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ತಾಲೂಕಿನ ಬೆಳವಣಿಗೆ ದೃಷ್ಟಿಯಿಂದ ಈ ಭಾಗದಲ್ಲಿ ಸಾರಿಗೆ ಸಂಪರ್ಕ ಇನ್ನಷ್ಟು ಪ್ರಗತಿ ಕಾಣಬೇಕಿದೆ. ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕಾದ ತುರ್ತು ಇದೆ.
ಬೇಡಿಕೆ ಇರುವ ಎಲ್ಲೆಡೆ ಸರಕಾರಿ ಬಸ್‌ಗಳನ್ನು ಬಿಡಲು ಕೆಎಸ್‌ಆರ್‌ಟಿಸಿ ಸಿದ್ಧವಿದ್ದರೂ, ಅದನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋಗುವುದು ಸವಾಲು. ಖಾಸಗಿ ಬಸ್‌ಗಳ ಪೈಪೋಟಿ ಹಾಗೂ ಬೆಳಗ್ಗೆ, ಸಂಜೆ ಹೊರತುಪಡಿಸಿದರೆ ಬೇರೆ ಅವಧಿಗಳಲ್ಲಿ ಬಸ್‌ಗಳಲ್ಲಿ ಜನದಟ್ಟಣೆ ಕಡಿಮೆ. ಇದರಿಂದ ನಷ್ಟ ಉಂಟಾಗಿ ಬಸ್ ರೂಟ್‌ಗಳೇ ರದ್ದಾದ ನಿದರ್ಶನಗಳಿವೆ. ಕುಂದಾಪುರದಿಂದ ಬೈಂದೂರು, ಸಿದ್ದಾಪುರ, ಶಂಕರನಾರಾಯಣ, ಕೊಲ್ಲೂರು ಭಾಗಗಳಿಗೆ ಒಟ್ಟು 38 ಬಸ್‌ಗಳು ಸಂಚರಿಸುತ್ತಿವೆ.
ಬೇಕಿದೆ ಪ್ರಾದೇಶಿಕ ಸಾರಿಗೆ ಕಚೇರಿ
ಕುಂದಾಪುರದಲ್ಲೊಂದು
ಪ್ರಾದೇಶಿಕ ಸಾರಿಗೆ ಕಚೇರಿ ತೆರೆಯ ಬೇಕೆನ್ನುವುದು ಕುಂದಾಪುರ- ಬೈಂದೂರು ತಾಲೂಕಿನ ಜನರ ಬಹು ದಿನಗಳ ಬೇಡಿಕೆ. ಈಗ ಎಲ್ಲದಕ್ಕೂ ಮಣಿಪಾಲಕ್ಕೆ ಹೋಗಬೇಕು.
ಕುಂದಾಪುರದಲ್ಲಿ ಯಾಕೆ ಬೇಕು?
ಮಣಿಪಾಲದಲ್ಲಿ ವಾರ್ಷಿಕ 140 ಕೋ.ರೂ. ಆದಾಯ ಬರುತ್ತಿದ್ದು, ವಾರ್ಷಿಕ ಒಟ್ಟು 6 ಸಾವಿರ ವಾಹನಗಳ ನೋಂದಣಿಯಾಗುತ್ತಿದೆ. ಸದ್ಯ ಮಣಿಪಾಲ ಆರ್‌ಟಿಒದಲ್ಲಿ ಶೇ. 40 ರಷ್ಟು ಸಿಬಂದಿ ಕೊರತೆ ಇದೆ. ಇದರಿಂದ ಅಲ್ಲಿ ತ್ವರಿತಗತಿಯಲ್ಲಿ ನೋಂದಣಿ ಪ್ರಕ್ರಿಯೆ ಕಾರ್ಯ ನಡೆಯುತ್ತಿಲ್ಲ. ತಿಂಗಳುಗಟ್ಟಲೆ ಕಾಯಬೇಕಿದೆ.
ಆರ್‌ಟಿಒ ಅರ್ಹತೆ
ಆರ್‌ಟಿಒ ಕಚೇರಿ ತೆರೆಯಲು ಅಗತ್ಯವಾಗಿ ವಾರ್ಷಿಕ 20 ಕೋಟಿ ರೂ. ಆದಾಯ ಬರಬೇಕು. 1 ಲಕ್ಷ ವಾಹನ ನೋಂದಣಿಯಾಗುವಂತಿರಬೇಕು. ಈಗಿರುವ ಮಣಿಪಾಲದ ವಾರ್ಷಿಕ ಆದಾಯ 140 ಕೋ.ರೂ. ನಲ್ಲಿ ಶೇ. 50ರಷ್ಟು ಆದಾಯ ಬರುತ್ತಿರುವುದು ಕುಂದಾಪುರ-ಬೈಂದೂರು ಭಾಗಗಳ ವಾಹನ ನೋಂದಣಿಯಿಂದ.
ತುರ್ತಾಗಿ ಆಗಬೇಕಾಗಿರುವುದೇನು?
- ಸ್ಥಳೀಯ ಸರಕಾರಿ ಬಸ್‌ಗಳು ನಿಲ್ಲಲು ಬಸ್ ನಿಲ್ದಾಣ ನಿರ್ಮಾಣವಾಗಬೇಕು.
- ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ತೆರೆಯಬೇಕು.
- ಕುಂದಾಪುರ ಪೇಟೆಯಿಂದ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಸುಮಾರು 5 ಕೀ.ಮೀ. ದೂರವಿದ್ದು, ಈಗ ಕೇವಲ ಒಂದು ಸರಕಾರಿ ಬಸ್ ಮಾತ್ರ ಸಂಚರಿಸುತ್ತಿದೆ. ಅಲ್ಲಿಂದ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸಲು ಇನ್ನಷ್ಟು ಬಸ್ ಸೇವೆ ಬೇಕು.
- ತಾಲೂಕು ಕೇಂದ್ರದಿಂದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ ಕಲ್ಪಿಸಿದರೆ ಜನರಿಗೆ ಅನುಕೂಲವಾಗಲಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಗಂಗೊಳ್ಳಿ, ಆಲೂರು, ಉಳೂ¤ರು-74, ಪಡುಕೋಣೆ, ಶೇಡಿಮನೆ, ಹಳ್ಳಿಹೊಳೆ, ಅಮಾಸೆಬೈಲು, ನಾಡ-ಗುಡ್ಡೆಯಂಗಡಿಯಂಥ ಭಾಗಗಳಿಗೆ ಇನ್ನಷ್ಟು ಬಸ್‌ಗಳು ಬೇಕು.
ಪ್ರಗತಿಗೆ ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುತ್ತಿರುವ ಪ್ರಯತ್ನ. ಕುಂದಾಪುರ ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್ ನಂಬರ್ 91485 94259ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ.
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.