ಕುಂದೇಶ್ವರ- ಪೀಂದ್ರಬೆಟ್ಟು ಸಂಪರ್ಕ ರಸ್ತೆಗೆ 25 ಲಕ್ಷ ರೂ.ಅನುದಾನ
ಪ್ರಕ್ರಿಯೆ ಹಂತದಲ್ಲಿರುವ ಟೆಂಡರ್
Team Udayavani, Oct 14, 2019, 5:34 AM IST
ಅಜೆಕಾರು: ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದೇಶ್ವರ-ಪೀಂದ್ರಬೆಟ್ಟು ಸಂಪರ್ಕ ರಸ್ತೆಗೆ 25 ಲಕ್ಷ ರೂ ಅನುದಾನವನ್ನು ಶಾಸಕ ಸುನಿಲ್ ಕುಮಾರ್ ಒದಗಿಸಿದ್ದಾರೆ.
ಕುಂದೇಶ್ವರ-ಪೀಂದ್ರಬೆಟ್ಟು ಸಂಪರ್ಕ ರಸ್ತೆಗೆ ಸುಮಾರು 20 ವರ್ಷಗಳ ಹಿಂದೆ ಸ್ಥಳೀಯರು ಖಾಸಗಿ ಜಾಗವನ್ನು ಬಿಟ್ಟುಕೊಟ್ಟಿದ್ದರಾದರೂ ಕೇವಲ ಕಚ್ಚಾರಸ್ತೆಯಿರುವ ಕಾರಣ ಸಂಚಾರ ದುಸ್ತರವಾಗಿರುವ ಬಗ್ಗೆ ಉದಯವಾಣಿ ಪತ್ರಿಕೆಯು ಸೆ. 20ರಂದು ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ಅಧಿಕಾರಿಗಳು ಅಕ್ಟೋಬರ್ ಮೊದಲ ವಾರದಲ್ಲಿ ರಸ್ತೆಯ ಸರ್ವೇ ಕಾರ್ಯ ಪೂರ್ಣಗೊಳಿಸಿ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದು, ಇದೀಗ ಅನುದಾನ ಒದಗಿಸಲಾಗಿದೆ.
50-54 ಯೋಜನೆಯಡಿ ರಸ್ತೆಗೆ ಅನುದಾನ ಒದಗಿಸಲಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಈ ರಸ್ತೆ ಅಭಿವೃದ್ಧಿಯಿಂದ ಸ್ಥಳೀಯ ಸುಮಾರು 50ರಷ್ಟು ಮನೆಗಳಿಗೆ ಅನುಕೂಲವಾಗಲಿದೆ. ಮೂರೂರು ಪೇಟೆಯ ಮುಖ್ಯ ರಸ್ತೆಯಿಂದ ಕುಂದೇಶ್ವರದವರೆಗೆ ಸುಮಾರು 2 ಕಿ.ಮೀ. ಭಾಗ ಈ ಹಿಂದೆಯೇ ಡಾಮರೀಕರಣಗೊಂಡಿದ್ದು ಈಗ 25 ಲಕ್ಷ ರೂ ಅನುದಾನದಲ್ಲಿ ಕುಂದೇಶ್ವರದಿಂದ ಪೀಂದ್ರಬೆಟ್ಟುವರೆಗೆ 2 ಕಿ.ಮೀ. ಮಣ್ಣಿನ ರಸ್ತೆಯನ್ನು ಡಾಮರಿಕರಣಗೊಳಿಸಲಾಗುತ್ತದೆ.
ಕಾಮಗಾರಿ ಟೆಂಡರ್ ಹಂತದಲ್ಲಿ
ರಸ್ತೆ ಅಭಿವೃದ್ಧಿ ಬಗ್ಗೆ ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಳಿಸಿ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು, ಕಾಮಗಾರಿ ಟೆಂಡರ್ ಹಂತದಲ್ಲಿದೆ.
-ಮಧು,ಪಂಚಾಯತ್‌ರಾಜ್ ಎಂಜಿನಿಯರ್, ಕಾರ್ಕಳ
ತ್ವರಿತ ಕಾಮಗಾರಿ ನಡೆಯಲಿ
ಪೀಂದ್ರಬೆಟ್ಟು-ಕುಂದೇಶ್ವರ ರಸ್ತೆ ಅಭಿವೃದ್ಧಿಪಡಿಸುವಂತೆ ಪಂಚಾಯತ್‌ನಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸ್ಥಳೀಯ ಸಮಸ್ಯೆ ಬಗ್ಗೆ ಪತ್ರಿಕೆಯು ವರದಿ ಮಾಡಿರುವುದರಿಂದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ತ್ವರಿತವಾಗಿ ಕಾಮಗಾರಿ ನಡೆಯಬೇಕಿದೆ.
-ಸಂತೋಷ್ ಕುಮಾರ್ ಶೆಟ್ಟಿ,
ಅಧ್ಯಕ್ಷರು ಹಿರ್ಗಾನ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.