ಕುಂಟಾಡಿ: ಅಪಾಯ ಆಹ್ವಾನಿಸುತ್ತಿರುವ ಒಣಗಿದ ಮರಗಳು
Team Udayavani, Jul 13, 2019, 5:27 AM IST
ಪಳ್ಳಿ: ಕಲ್ಯಾ ಗ್ರಾಮ ಪಂಚಾಯತದ ಕೈಕಂಬ ರಸ್ತೆ ಬಳಿ ಒಣಗಿದ ಮರಗಳು ಅಪಾಯವನ್ನು ಆಹ್ವಾನಿಸುತ್ತಿದೆ.ಒಣಗಿದ ಮರಗಳ ಬದಿಯಲ್ಲಿ ವಿದ್ಯುತ್ ತಂತಿಗಳು ಸಾಗಿದ್ದು ಜೋರಾಗಿ ಬೀಸಿದ ಗಾಳಿಗೆ ಮರಗಳು ತುಂಡಾದಲ್ಲಿ ಭಾರೀ ಪ್ರಮಾಣದ ನಷ್ಟ ಸಂಭವಿಸಬಹುದಾಗಿದೆ.
ಅಲ್ಲದೆ ಕಾರ್ಕಳದಿಂದ ಉಡುಪಿ ಸಂಪರ್ಕ ರಸ್ತೆ ಇದಾಗಿದ್ದು ಹೆಚ್ಚಿನ ವಾಹನಗಳು ಈ ಮಾರ್ಗವಾಗಿಯೇ ಸಂಚರಿಸುತ್ತಿವೆ. ಹಾಗೂ ಸಾರ್ವಜನಿಕ ರಸ್ತೆ ಬದಿ ಸಂಚರಿಸಲು ಭಯಪಡುವಂತಾಗಿದೆ. ಒಣಗಿದ ಮರದ ಕೊಂಬೆಗಳು ರಭಸವಾಗಿ ಬೀಸುವ ಗಾಳಿಗೆ ಮರಗಳು ವಿದ್ಯುತ್ ತಂತಿಗಳ ಮೇಲೆಯೇ ಮುರಿದು ಬೀಳುವ ಸಾಧ್ಯತೆ ಇದ್ದು ವಿದ್ಯುತ್ ವ್ಯತ್ಯಯ ಸಂಭವಿಸಬಹುದಾಗಿದೆ.
ವಾಲಿಕೊಂಡ ಮರಗಳು
ಕುಂಟಾಡಿಯ ಕೈಕಂಬ ಬಳಿಯಿಂದ ಕುಂಟಾಡಿ ದೇವಸ್ಥಾನದವರೆಗೆ ರಸ್ತೆ ಬದಿ ಅಕೇಶಿಯಾ ಮರಗಳು ವಾಲಿಕೊಂಡಿದ್ದು ವಿದ್ಯುತ್ ತಂತಿಗಳ ಮೇಲಿನಿಂದಲೇ ಹಾದು ಹೋಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ತೆರವು ಕಾರ್ಯ ಕೈಗೊಳ್ಳದಿದ್ದಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.